ETV Bharat / state

ನಿರುದ್ಯೋಗಿಗಳಾಗಿದ್ದಾಗ ಕಾಂಗ್ರೆಸ್​ನವರು ಪಾದಯಾತ್ರೆ ಮಾಡ್ತಾರೆ: ಗೋವಿಂದ ಕಾರಜೋಳ - bagalakore district news

ಮೇಕೆದಾಟು ಪಾದಯಾತ್ರೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಗೋವಿಂದ ಕಾರಜೋಳ ಅವರು, ಕಾಂಗ್ರೆಸ್​ನವರು ಚುನಾವಣೆಯಲ್ಲಿ ಸೋತು ಮನೆಯಲ್ಲಿ ನಿರುದ್ಯೋಗಿಗಳಾಗಿ ಕುಳಿತಾಗ ಪಾದಯಾತ್ರೆ ಮಾಡುತ್ತಾರೆ. ಈ ಹಿಂದೆ ಕಾಂಗ್ರೆಸ್​ ನಡೆ ಕೃಷ್ಣೆ ಕಡೆ ಪಾದಯಾತ್ರೆ ಮಾಡಿದ್ದರು. ಸದ್ಯ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕುಟುಕಿದರು.

govinda-karajola-statement-on-congress-mekedatu-padayatre
ಗೋವಿಂದ ಕಾರಜೋಳ
author img

By

Published : Nov 9, 2021, 1:46 PM IST

ಬಾಗಲಕೋಟೆ: ಕಾಂಗ್ರೆಸ್​ನವರು ಯಾವಾಗ ಯಾವಾಗ ಅಧಿಕಾರ ಕಳೆದುಕೊಂಡು ನಿರುದ್ಯೋಗಿಗಳಾಗಿರ್ತಾರೋ ಆಗ ಪಾದಯಾತ್ರೆ ಮಾಡುತ್ತಾರೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನೀರುದ್ಯೋಗಿಗಳು ಆದಾಗಲೆಲ್ಲ ಕಾಂಗ್ರೆಸ್ ನವರು ಪಾದಯಾತ್ರೆ ಮಾಡುತ್ತಾರೆ. 2012 ರಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಪಾದಯಾತ್ರೆ ಮಾಡಿದರು. ಇದೀಗ ಮತ್ತೆ ಕಾಂಗ್ರೆಸ್ ನವರಿಗೆ ಮೇಕೆದಾಟು ಪಾದಯಾತ್ರೆ ನೆನಪಾಗಿದೆ ಎಂದು ಹಾಸ್ಯವಾಡಿದರು.

ಮೇಕೆದಾಟು ಪಾದಯಾತ್ರೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಗೋವಿಂದ ಕಾರಜೋಳ

ಕೈ ವಿರುದ್ದ ಗುಡುಗಿದ ಕಾರಜೋಳ: ಕಾಂಗ್ರೆಸ್​ನವರು ಯುಕೆಪಿ ಯೋಜನೆ ಪೂರ್ಣ ಮಾಡಿ ನೀರು ಕೊಡಿಸುವೆ ಎಂದು ಅಧಿಕಾರದಲ್ಲಿದ್ದಾಗ ಹೇಳಿದ್ದರು. 6336 ಕೋಟಿ ರೂ. ಯುಕೆಪಿ 3ನೇ ಹಂತದ ಕಾಮಗಾರಿಗೆ ಕೊಟ್ಟಿಲ್ಲ. ಯುಕೆಪಿಗೆ ಕಾಂಗ್ರೆಸ್ ಕೊಟ್ಟಿದ್ದು 7728 ಕೋಟಿ ರೂ. ಮಾತ್ರ. ಯುಕೆಪಿ 3ನೇ ಹಂತದ ಕಾಮಗಾರಿ ಏನು ಮಾಡಿಲ್ಲ. ನಾವು 2012-13 ರಲ್ಲಿ ಯುಕೆಪಿ 3ನೇ ಹಂತದ ಆರ್ ಆ್ಯಂಡ್ ಆರ್ ಅಭಿವೃದ್ಧಿಗೆ 17 ಸಾವಿರ 207 ಕೋಟಿ ರೂ.3 ಅನುಮೋದನೆ ನೀಡಿದ್ದೇವೆ. ಇದರಲ್ಲಿ ಕೆನಾಲ್ ವರ್ಕ್ ಹಾಗೂ ಯುಕೆಪಿ 3ನೇ ಹಂತದ ಯೋಜನೆಗೆ ಅನುಮೋದನೆ ನೀಡಿದ್ದೆವೆ. ಕಾಂಗ್ರೆಸ್ ಸರ್ಕಾರ ಇವುಗಳನ್ನ ಆವತ್ತು ಮಾಡಿದ್ರೆ ಇಂದು 60 ಸಾವಿರ ಕೋಟಿಗೆ ಹೋಗುತ್ತಿರಲಿಲ್ಲ. ಕಾಂಗ್ರೆಸ್ ನವರು ಕೆಲಸ ಮಾಡದಿರೋದ್ರ ಜವಾಬ್ದಾರಿ ಹೊರಬೇಕಾಗುತ್ತೆ. ಯೋಜನೆ ಕಾಸ್ಟ್ ಎಕ್ಸ್ಲೂಲೇಶನ್ ಆಗಿರೋದರ ಜವಾಬ್ದಾರಿ ಕಾಂಗ್ರೆಸ್ ಹೊರಬೇಕಾಗುತ್ತೆ ಎಂದರು.

ಗೆಜೆಟ್​ ನೋಟಿಫಿಕೇಶನ್​ಗೆ ಒತ್ತಾಯ ಮಾಡಲಾಗಿದೆ: ಕೃಷ್ಣ ಮೇಲ್ದಂಡೆ ಯೋಜನೆ ಸಂಬಂಧ ನ್ಯಾಯಾಧೀಕರಣ ಬಗ್ಗೆ ನಮ್ಮ ಅಧಿಕಾರಿಗಳು ಹಾಗೂ ನ್ಯಾಯಾಧೀಶರು ಗೆಜೆಟ್ ನೋಟಿಫಿಕೇಶನ್ ಏಕೆ ಆಗಬೇಕು ಎಂದು ವಿವರವಾಗಿ ಕೋರ್ಟ್ ಗಮನ ಸೆಳೆದಿದ್ದಾರೆ. 10 ವರ್ಷಗಳ ಕಾಲ ನೀರು ಬಳಕೆ ಮಾಡದೆ ಕಾಯುವ ಸ್ಥಿತಿ ಇದೆ. ನಾವು ಈಗಾಗಲೇ 13 ಸಾವಿರ ಕೋಟಿ ಹಣ ವೆಚ್ಚ ಮಾಡಿ, 1205 ಕಿ. ಮೀ ದಷ್ಟು ಕೆನಾಲ್ ನಿರ್ಮಿಸಿದ್ದೇವೆ. ಇದರಿಂದ 15 ಲಕ್ಷ ಎಕರೆ ಪ್ರದೇಶ ನೀರಾವರಿ ಸೌಲಭ್ಯ ಕಲ್ಪಿಸುವ ಅವಕಾಶ ಇದೆ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಅದಕ್ಕಾಗಿ ಗೆಜೆಟ್ ನೋಟಿಫಿಕೇಶನ್ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮತ್ತು ಸೆಂಟರ್ ವಾಟರ್ ಕಮಿಷನ್ ಗೆ ಸೂಚನೆ ನೀಡಬೇಕು ಎಂದು ಒತ್ತಾಯ ಮಾಡಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್​ ಮುಕ್ತವಾಗುತ್ತೆ ಕಾಯಿರಿ: ಪೆಟ್ರೋಲ್ ದರ ಇಳಿಕೆ ಮಾಡದ್ದೆ ಉಪ ಚುನಾವಣೆ ಸೋಲು ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಕಾರಜೋಳ ಅವರು, ಕಾಂಗ್ರೆಸ್ ಪಕ್ಷದವರು 70 ವರ್ಷದ ಆಡಳಿತದಲ್ಲಿ ಮಾಡಿರುವ ಸಾಧನೆ ಶೂನ್ಯ ಇದೆ. ಅದರಲ್ಲಿಯೂ ವಿಶೇಷವಾಗಿ ಮನಮೋಹನ್ ಸಿಂಗ್​ ಸರ್ಕಾರ ಅವಧಿಯಲ್ಲಿ ಏನು ಮಾಡಲು ಸಾಧ್ಯವಾಗಲಿಲ್ಲ. ಅವರಲ್ಲಿ ಹೇಳಿಕೊಳ್ಳುವಂತಹ ಯಾವುದೇ ಸಾಧನೆ ಇಲ್ಲಾ. ಇದರಿಂದ ಪದೇ ಪದೇ ಸುಳ್ಳು ಆರೋಪ ಮಾಡುತ್ತಾರೆ. ದೇಶದಲ್ಲಿ ಕಾಂಗ್ರೆಸ್ ಮುಕ್ತವಾಗುತ್ತದೆ ಒಂದು ವರ್ಷ ಕಾಯಿರಿ ಎಂದು ತಿರುಗೇಟು ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.