ETV Bharat / state

ದಾಖಲಾತಿ ಪರಿಶೀಲನೆ ನೆಪದಲ್ಲಿ ಲಾರಿ ಚಾಲಕನಿಗೆ ಕಿರುಕುಳ: ನಾಲ್ವರು ಪೊಲೀಸ್‌ ಸಿಬ್ಬಂದಿ ಸಸ್ಪೆಂಡ್

ಲಾರಿ ಚಾಲಕ​ ಎಸ್​ಪಿಗೆ ದೂರು‌ ನೀಡಿದ ಹಿನ್ನೆಲೆಯಲ್ಲಿ ಎಎಸ್​ಐ ಎಫ್​.ವೈ.ತಳವಾರ, ಹೆಡ್ ಕಾನ್​ಸ್ಟೇಬಲ್ ಕುಲಕರ್ಣಿ, ಪೊಲೀಸ್​ ಕಾನ್​ಸ್ಟೇಬಲ್ ಬಿರಾದಾರ ಹಾಗೂ ಚಾಲಕ ಮಹೇಶ್​ ಎಂಬುವವರನ್ನು ಎಸ್​ಪಿ ಅಮಾನತು ಮಾಡಿ ಆದೇಶಿಸಿದ್ದಾರೆ.

four-police-constables-suspended-in-bagalkot
ಕೆರೂರು ಪೊಲೀಸ್​ ಠಾಣೆ
author img

By

Published : Mar 7, 2022, 5:22 PM IST

ಬಾಗಲಕೋಟೆ: ಬಾದಾಮಿ ತಾಲೂಕಿನ ಕೆರೂರು ಪೊಲೀಸ್​ ಠಾಣೆಯ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್​ ಜಗಲಸಾರ ಆದೇಶ ಮಾಡಿದ್ದಾರೆ.

ನಗರದಲ್ಲಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಕೇರಳ ರಾಜ್ಯದ ಲಾರಿ ತಡೆದು ಕಾಗದ ಪತ್ರ ಪರಿಶೀಲನೆ ಮಾಡಿದ್ದರು. ಎಲ್ಲಾ ದಾಖಲಾತಿಗಳು ಸರಿ ಇದ್ದರೂ ಲಾರಿ ಚಾಲಕನಿಗೆ ವಿನಾಕಾರಣ ಕಿರುಕುಳ ನೀಡಿ, ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಲಾರಿ ಚಾಲಕ​ ಎಸ್​ಪಿಗೆ ದೂರು‌ ನೀಡಿದ್ದು, ಎಎಸ್​ಐ ಎಫ್​.ವೈ.ತಳವಾರ, ಹೆಡ್ ಕಾನ್​ಸ್ಟೇಬಲ್ ಕುಲಕರ್ಣಿ, ಪೊಲೀಸ್​ ಕಾನ್​ಸ್ಟೇಬಲ್ ಬಿರಾದಾರ ಹಾಗೂ ಚಾಲಕ ಮಹೇಶ್​ ಎಂಬುವವರನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಡಬಲ್‌ ಇಂಜಿನ್‌ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ: ಮುನ್ನೋಟ ಇಲ್ಲದ ಬಜೆಟ್‌ ಮಂಡನೆ: ಕಲಾಪದಲ್ಲಿ ಸಿದ್ದರಾಮಯ್ಯ ಕೆಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.