ETV Bharat / state

ಕ್ಷೇತ್ರ ಪ್ರವಾಸಕ್ಕೆ ಸಿದ್ದರಾಮಯ್ಯ ಸಿದ್ದತೆ; ನಾಲ್ಕು ದಿನ ಬಾಗಲಕೋಟೆ ಟೂರ್ - undefined

ಬಾದಾಮಿ ಶಾಸಕರಾದ ಸಿದ್ದರಾಮಯ್ಯ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ.ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ನಾಳೆಯಿಂದ ನಾಲ್ಕು ದಿನಗಳ ಕಾಲ ಅವರು ಬಾಗಲಕೋಟೆ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ
author img

By

Published : Jun 26, 2019, 1:10 PM IST

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆಯಿಂದ ನಾಲ್ಕು ದಿನಗಳ ಕಾಲ ಬಾಗಲಕೋಟೆ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ.

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಾದಾಮಿ ಶಾಸಕರಾದ ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ನಾಳೆ 27 ರಿಂದ ಬಾದಾಮಿಯಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಾಗೂ 29, 30ನೇ ತಾರೀಖಿನಂದು ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ಸಂಚರಿಸಲಿದ್ದಾರೆ.

ಹುಬ್ಬಳ್ಳಿ ಮೂಲಕ ಬಾದಾಮಿಗೆ ಆಗಮಿಸಿ, ಆಲೂರ ಎಸ್.ಕೆ ಗ್ರಾಮದಲ್ಲಿ ಪಂಚಾಯತ್​ ಕಟ್ಟಡಕ್ಕೆ ಅಡಿಗಲ್ಲು, ಕಾಕನೂರ ಗ್ರಾಮದಲ್ಲಿ ಹುತಾತ್ಮ ಯೋಧನ ಮನೆಗೆ ಭೇಟಿ, ಚಿಮ್ಮನಕಟ್ಟಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಶಂಕುಸ್ಥಾಪನೆ, ಬಾದಾಮಿಯಲ್ಲಿ ಪಿಡಿಒಗಳ ಸಭೆ ನಡೆಸಿ, ಸಂಜೆ ಸಾರ್ವಜನಿಕ ಅಹವಾಲು ಸ್ವೀಕಾರ ಬಳಿಕ ವಾಸ್ತವ್ಯ ಮಾಡಲಿದ್ದಾರೆ. ತಾ. 28ರಂದು ಬಾದಾಮಿಯಲ್ಲಿ ಸಭೆ ನಡೆಸಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ.

ಜೂನ್​.29 ರಂದು ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿಲಿರುವ ಅವರು ನಂತರ ಬಾಗಲಕೋಟೆ ನಗರಕ್ಕೆ ಬರಲಿದ್ದಾರೆ. ಅಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ, ಬಾಗಲಕೋಟೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಜಿಲ್ಲಾ ಕಾಂಗ್ರೆಸ್ ಮುಖಂಡರ ಭೇಟಿ, ಪಕ್ಷದ ಸಂಘಟನೆ ಬಗ್ಗೆ ಚರ್ಚೆ ನಂತರ ಆಲಮಟ್ಟಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಜೂನ್​.30 ರಂದು ಬಾಗಲಕೋಟೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಹುಬ್ಬಳ್ಳಿ ಮೂಲಕ ವಿಮಾನದಿಂದ ಬೆಂಗಳೂರಿಗೆ ಪಯಾಣ ಬೆಳೆಸಲಿದ್ದಾರೆ.

Intro:AnchorBody:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆಯಿಂದ ನಾಲ್ಕು ದಿನಗಳ ಕಾಲ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ.ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಾದಾಮಿ ಶಾಸಕರಾದ ಸಿದ್ದರಾಮಯ್ಯ ನವರು ಕ್ಷೇತ್ರಕ್ಕೆ ಭೇಟ್ಟಿ ನೀಡಿಲ್ಲ.ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತ ಆಗುತ್ತದೆ ಎಂದು ಆರೋಪ ಕೇಳಿ ಬಂದಿತ್ತು.ಈ ಹಿನ್ನೆಲೆ ನಾಳೆ 27 ರಿಂದ ಬಾದಾಮಿ ಯಲ್ಲಿ ಎರಡು ದಿನ ಪ್ರವಾಸ ಹಾಗೂ 29,30 ರಂದು ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ಸಂಚಾರ ಮಾಡುವ ಮೂಲಕ ತಮ್ಮ ಇರುವಿಕೆ ಮಹತ್ವವನ್ನು ತೋರಿಸಲಿದ್ದಾರೆ.
27 ರಂದು ಹುಬ್ಬಳ್ಳಿ ಮೂಲಕ ಬಾದಾಮಿ ಗೆ ಆಗಮಿಸಿ,ಆಲೂರ ಎಸ್ ಕೆ ಗ್ರಾಮದಲ್ಲಿ ಪಂಚಾಯತ ಕಟ್ಟಡ ಅಡಿಗಲ್ಲು, ಕಾಕನೂರ ಗ್ರಾಮದಲ್ಲಿ ಹುತಾತ್ಮ ಯೋಧನ ಮನೆಗೆ ಭೇಟ್ಟಿ, ಚಿಮ್ಮನಕಟ್ಟಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಗೆ ಶಂಕುಸ್ಥಾಪನೆ, ಬಾದಾಮಿ ಯಲ್ಲಿ ಪಿಡಿಓ ಗಳ ಸಭೆ ನಡೆಸಿ,ಸಂಜೆ ಸಾರ್ವಜನಿಕ ಹಲವಾಲು ಸ್ವೀಕಾರ ಬಳಿಕ ವಾಸ್ತವ್ಯ ಮಾಡಲಿದ್ದಾರೆ.
28 ರಂದು ,ಬಾದಾಮಿ ಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಸಾರ್ವಜನಿಕ ಭೇಟ್ಟಿ ,ಅಹವಾಲು ಸ್ವೀಕಾರ,ತಾಲೂಕ ಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಿ,ಬಾದಾಮಿ ಯಲ್ಲಿ ವಾಸ್ತವ್ಯ.
29 ರಂದು ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆ ಯಲ್ಲಿ ನೂತನ ಡಯಾಲಿಸಿಸ್ ಕೇಂದ್ರದ ಉದ್ಘಾಟನೆ, ನಂತರ ಬಾಗಲಕೋಟೆ ನಗರಕ್ಕೆ ಆಗಮನ,ಇಂದಿರಾ ಕ್ಯಾಂಟೀನ್ ಉದ್ಘಾಟನೆ, ಬಾಗಲಕೋಟೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ,ಜಿಲ್ಲಾ ಕಾಂಗ್ರೆಸ್ ಮುಖಂಡರ ಭೇಟ್ಟಿ, ಪಕ್ಷದ ಸಂಘಟನೆ ಬಗ್ಗೆ ಚರ್ಚೆ ನಂತರ ಆಲಮಟ್ಟಿ ಯಲ್ಲಿ ವಾಸ್ತವ್ಯ.
30 ರಂದು ಬಾಗಲಕೋಟೆ ಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮ ದಲ್ಲಿ ಭಾಗವಹಿಸಿವದು.ನಂತರ ಹುಬ್ಬಳ್ಳಿ ಮೂಲಕ ವಿಮಾನ ದಿಂದ ಬೆಂಗಳೂರಿಗೆ ಪಯಾಣ ಬೆಳೆಸುತ್ತಾರೆ.ಹೀಗೆ ನಾಲ್ಕು ದಿನಗಳ ಕಾಲ ಬಾದಾಮಿ, ಬಾಗಲಕೋಟೆ ನಗರದಲ್ಲಿ ಪ್ರವಾಸ ಹಮ್ಮಿಕೊಂಡು, ವಿವಿಧ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಆತ್ಮಾಲೋಕನ ಹಾಗೂ ಪಕ್ಷ ಸಂಘಟನೆ ಸೇರಿದಂತೆ ,ಆಕಸ್ಮಿಕ ವಾಗಿ ಮಧ್ಯಂತರ ಚುನಾವಣೆ ನಡೆದರೆ,ಏನೆಲ್ಲಾ ತಂತ್ರ ಮಾಡಬಹುದು ಎಂಬುದು ಸಹ ಪಕ್ಷದ ಮುಖಂಡರ ಮಧ್ಯೆ ಗೌಪ್ಯ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.ಒಟ್ಟಾರೆ ಲೋಕಸಭಾ ಚುನಾವಣಾ ಬಳಿಕ ಇದೇ ಪ್ರಥಮ ಭಾರಿಗೆ ಜಿಲ್ಲೆಗೆ ಬರುವ ಸಿದ್ದರಾಮಯ್ಯ ನವರು ನಾಲ್ಕು ದಿನ ಪ್ರವಾಸದಲ್ಲಿ ಕಾರ್ಯತಂತ್ರ ರೂಪಿಸುವ ಬಗ್ಗೆ ಕಾರ್ಯಕರ್ತರ ಮಧ್ಯೆ
ಚರ್ಚೆ ನಡೆಯುತ್ತಿರಯವದು ಮಾತ್ರ ಸತ್ಯ..Conclusion:ಈ ಟಿ ವಿ ಭಾರತ,ಬಾಗಲಕೋಟೆ..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.