ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡು ದಿನಗಳ ಕಾಲ ತಮ್ಮ ಕ್ಷೇತ್ರ ಬಾದಾಮಿಗೆ ಪ್ರವಾಸ ಹಮ್ಮಿಕೊಂಡಿದ್ದಾರೆ.
ಬೆಳಗಾವಿ ಮೂಲಕ ಬಾದಾಮಿಗೆ ಆಗಮಿಸಿದ ಅವರು, ಅಧಿಕಾರಿಗಳ ಜೊತೆಗೆ ಅಭಿವೃದ್ಧಿ ಕಾಮಗಾರಿ ಬಗ್ಗೆ ಸಭೆ ನಡೆಸಿದರು. ಸತತ ಮಳೆ, ಪ್ರವಾಹದಿಂದ ಉಂಟಾಗಿರುವ ತೊಂದರೆ ಬಗ್ಗೆ ಹಾಗೂ ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ತಿಳಿದುಕೊಂಡರು.
ಈ ಹಿಂದೆ ಆಗಬೇಕಿದ್ದ ಕಾಮಗಾರಿಗಳನ್ನು ಇನ್ನು ಪೂರ್ಣಗೊಳಿಸಿಲ್ಲ ಯಾಕೆ ? ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಶೌಚಾಲಯ ಹಾಗೂ ಮಳೆಯಿಂದಾಗಿ ಕೊಳಚೆ ಉಂಟಾಗಿದ್ದು, ಸ್ವಚ್ಚತಾ ಕಾರ್ಯಕ್ಕೆ ಬಿಡುಗಡೆ ಆಗಿರುವ ಹಣ ಸದುಪಯೋಗ ಪಡಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡು, ಸೂಕ್ತ ಕೆಲಸ ಮಾಡುತ್ತಿಲ್ಲ. ನೀವು ಏನು ಕೆಲಸ ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ಆರ್.ಪಾಟೀಲ ಹಾಗೂ ಆರ್.ಬಿ ತಿಮ್ಮಾಪೂರ ಭಾಗವಹಿಸಿದ್ದರು.ಇದೇ ಸಮಯದಲ್ಲಿ ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟ್ಯಾಪ್ ವಿತರಣೆ ಮಾಡಲಾಯಿತು.