ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 73ನೇ ವರ್ಷದ ಹುಟ್ಟುಹಬ್ಬವನ್ನು ಬಾದಾಮಿ ಮತಕ್ಷೇತ್ರದ ಗುಳೇದಗುಡ್ಡ ಕಾರ್ಯಕರ್ತರು ನಗರದಲ್ಲಿನ ಗೋಶಾಲೆಯಲ್ಲಿ ವಿಭಿನ್ನವಾಗಿ ಆಚರಿಸಿದರು.
ಯುವ ಮುಖಂಡರಾದ ಹೊಳಬಸು ಶೆಟ್ಟರ್, ಸಂಜಯ ಬರಗುಂಡಿ, ಅಡಿವೆಪ್ಪ ತಾಂಡೂರ, ಜುಗಲಕಿಶೋರ ಬಟ್ಟಡ, ಶ್ರೀನಿವಾಸ ಇನ್ನಾನಿ ಸೇರಿದಂತೆ ಇತರ ಮುಖಂಡರು ಗೋವುಗಳಿಗೆ ಧಾನ್ಯ ತಿನ್ನಿಸಿ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು. ಸಜ್ಜಾಕ್, ಮೇವಿನ ಆಹಾರವನ್ನು ಗೋವುಗಳಿಗೆ ತಿನ್ನುಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆರೋಗ್ಯ, ಆಯಸ್ಸು ಇನ್ನಷ್ಟು ಹೆಚ್ಚಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಪ್ತರಾಗಿರುವ ಹೊಳೆಬಸು ಶೆಟ್ಟರ್ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಆರೋಗ್ಯ, ಆಯಸ್ಸನ್ನು ದೇವರು ಕರುಣಿಸಲಿ ಎಂದು ದೇವಾಲಯಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಜೊತೆಗೆ ಗುಳೇದಗುಡ್ಡ ಪಟ್ಟಣದಲ್ಲಿರುವ ಗೋಶಾಲೆಗೆ ಆಹಾರ ನೀಡಿ ಪ್ರಾಣಿ ಪ್ರೇಮ ಮೆರೆಯಲಾಗಿದೆ ಎಂದರು.