ETV Bharat / state

ಕಡಕೋಳದಲ್ಲಿ ಜಾತ್ರಾ ಮಹೋತ್ಸವ... ಗಮನ ಸೆಳೆದ ಎತ್ತಿನ ಬಂಡಿ ಓಡಿಸುವ ಸ್ಪರ್ಧೆ - undefined

ಜಾತ್ರೆಯಂಗವಾಗಿ ಗ್ರಾಮದ ಹೊರವಲಯದ ರಸ್ತೆ ಮೇಲೆ ಒಂದು ನಿಮಿಷದ ಎತ್ತಿನಗಾಡಿ ರೇಸ್ ಅನ್ನು ಹಮ್ಮಿಕೊಳ್ಳಲಾಗಿತ್ತು. ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ವಿವಿಧ ಪ್ರದೇಶಗಳ ರೈತರು ತಮ್ಮ ಎತ್ತಿನ ಬಂಡಿಗಳೊಂದಿಗೆ ಬಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಜಾತ್ರೆಯ ನಿಮಿತ್ತ ಎತ್ತಿನ ಬಂಡಿ ಓಡಿಸುವ ಸ್ಪರ್ಧೆ ನಡೆಯಿತು.
author img

By

Published : Jul 7, 2019, 11:41 AM IST

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಚಂದ್ರಗಿರಿ ದೇವಿ ಹಾಗೂ ಶ್ರೀ ಸದಾಶಿವ ಅಜ್ಜನವರ ಜಾತ್ರಾ ಮಹೋತ್ಸವ ಅತಿ ವಿಜೃಂಭಣೆಯಿಂದ ಜರಗಿತು. ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಎತ್ತಿನ ಬಂಡಿ ಓಟದ ಸ್ಪರ್ಧೆಯು ಗಮನ ಸೆಳೆಯಿತು.

ಶ್ರೀ ಚಂದ್ರಗಿರಿ ದೇವಿ ಹಾಗೂ ಶ್ರೀ ಸದಾಶಿವ ಅಜ್ಜನವರ ಜಾತ್ರಾಮಹೋತ್ಸವ ಅತಿ ವಿಜೃಂಭಣೆಯಿಂದ ಜರಗಿತು.

ಗ್ರಾಮದ ಪಕ್ಕದಲ್ಲಿಯೇ‌ ಇರುವ ಕೃಷ್ಣಾ ನದಿಯಲ್ಲಿ ಪುಣ್ಯ ಸ್ನಾನ ಮುಗಿಸಿ ನಂತರ ಪೂಜೆ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಸಕಲ ವಾದ್ಯ ಮೇಳಗಳೊಂದಿಗೆ ಮುತೈದೆಯರಿಂದ ಆರತಿ ಜೊತೆಗೆ ಶ್ರೀ ಚಂದ್ರಗಿರಿ ದೇವಿ ಹಾಗೂ ಸದಾಶಿವ ಅಜ್ಜನ್ನವರ ಪಲಕ್ಕಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಂಕಣವಾಡಿ ಗ್ರಾಮಸ್ಥರಿಂದ ಕರಡಿ ಮಜಲು, ಡೊಳ್ಳಿನ ಕುಣಿತ, ಕಡಕೋಳ ಗ್ರಾಮಸ್ಥರ ಭಜನಾ ಕಾರ್ಯಕ್ರಮ ಗಮನ ಸೆಳೆಯಿತು.

ನಂತರ ಗ್ರಾಮದ ಹೊರವಲಯದ ರಸ್ತೆ ಮೇಲೆ ಒಂದು ನಿಮಿಷದ ಎತ್ತಿನಗಾಡಿ ರೇಸ್ ಅನ್ನು ಹಮ್ಮಿಕೊಳ್ಳಲಾಗಿತ್ತು. ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ವಿವಿಧ ಪ್ರದೇಶಗಳಿಂದ ರೈತರು ತಮ್ಮ ಎತ್ತಿನ ಬಂಡಿಗಳೊಂದಿಗೆ ಬಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಈ ಜಾತ್ರಾ ಮಹೋತ್ಸವಕ್ಕೆ ಬಾಗಲಕೋಟೆ, ಬೆಳಗಾವಿ ಹಾಗೂ ಮಹಾರಾಷ್ಟ್ರದಿಂದಲೂ ಭಕ್ತರು ಬರುತ್ತಾರೆ.

Intro:AnchorBody:ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಡಕೋಳ ಗ್ರಾಮದ (ಆರ್.ಸಿ.)ಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ೧೨ ಷರ್ವಗಳ ನಿರತರವಾಗಿ ಶ್ರೀ ಚಂದ್ರಗಿರಿ ದೇವಿ ಹಾಗೂ ಶ್ರೀ ಸದಾಶಿವ ಅಜ್ಜನವರ ಜಾತ್ರಾಮಹೋತ್ಸವ ಅತಿ ವಿಜೃಂಭಣೆಯಿಂದ ಜರಗಿತು.
ಜಾತ್ರೆ ಯ ಅಂಗವಾಗಿ ಒಂದು ನಿಮಿಷ ಎತ್ತಿನ ಬಂಡಿ ಓಟದ ಸ್ಪರ್ಧೆ ಯು ಗಮನ ಸೆಳೆಯಿತು.
ಗ್ರಾಮದ ಪಕ್ಕದಲ್ಲಿಯೇ‌ ಇರುವ ಕೃಷ್ಣಾ ನದಿಯಲ್ಲಿ ಪುಣ್ಯ ಸ್ಥಾನ್ನ ಮುಗಿಸಿ ನಂತರ ಪೂಜೆ ವಿಧಿವಿಧಾನಗಳನ್ನು ಮುಗಿಸಿಕೊಂಡು. ಸಕಲ ವಾದ್ಯ ಮೇಳಗಳಿಂದ ಹಾಗೂ ಆರತಿ ಮುತೈರಿಂದ ಶ್ರೀ ಚಂದ್ರಗಿರಿ ದೇವಿ ಹಾಗೂ ಸದಾಶಿವ ಅಜ್ಜನ್ನವರ ಪಲಕ್ಕಿ ಮೆರವಣಿಗೆ ನಡೆಸಲಾಯಿತು.ಈ ಸಂದರ್ಭದಲ್ಲಿ ಕಂಕಣವಾಡಿ ಗ್ರಾಮಸ್ಥರಿಂದ ಕರಡಿಮಜಲು ಡೊಳ್ಳಿನ ಕುಣಿತ, ಕಡಕೋಳ ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಿಕೊಡುವ ಮೂಲಕ ಗಮನ ಸೆಳೆಯಿತು.
ನಂತರ ಗ್ರಾಮದ ಹೂರವಲಯದ ರಸ್ತೆ ಮೇಲೆ
ಒಂದು ನಿಮಿಷದ ಎತ್ತಿನಗಾಡಿ ರೇಸ್ ಅನ್ನು ಹಮ್ಮಿಕೊಳ್ಳಲಾಗಿತ್ತು.ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ವಿವಿಧ ಪ್ರದೇಶಗಳಿಂದ ರೈತರು ತಮ್ಮ ಎತ್ತಿನ ಬಂಡಿಯನ್ನು ತೆಗೆದುಕೊಂಡು ಬಂದು ಸ್ಪರ್ಧೆಯಲ್ಲಿ ಭಾಗವಹಿಸಿದರು.ಈ ಸ್ಪರ್ಧೆಯಲ್ಲಿ ಒಂದು ನಿಮಿಷದಲ್ಲಿ ಯಾವ ಎತ್ತಿನ ಬಂಡಿ ಬೇಗನೆ ಗುರುತಿಸಿದ ಸ್ಥಳಕ್ಕೆ ತಲುಪಲಿದೇಯೊ ಆ ಎತ್ತಿನ ಬಂಡಿಗೆ ಬಹುಮಾನ ನೀಡಲಾಗುತ್ತದೆ.

ಈ ಜಾತ್ರಾ ಮಹೋತ್ಸವಕ್ಕೆ ಬಾಗಲಕೋಟ ಮತ್ತು ಬೆಳಗಾವಿ ಮಹಾರಾಷ್ಟ್ರ ರಾಜ್ಯಗಳಿಂದ ಬಂದು ದೇವರ ದರ್ಶನ ಪಡೆದು ಪುನೀತರಾದರು.Conclusion:ಈ ಟಿವಿ,ಭಾರತ,ಬಾಗಲಕೋಟೆ..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.