ಬಾಗಲಕೋಟೆ: ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣಾ, ಘಟಪ್ರಭಾ ಹಾಗೂ ಮಲ್ಲಪ್ರಭಾ ನದಿಯಿಂದ ಪ್ರವಾಹ ಉಂಟಾಗಿ, ತ್ರಿವೇಣಿ ಸಂಗಮ ಕೂಡಲಸಂಗಮದ ಸಂಗಮನಾಥ ದೇವಾಲಯಕ್ಕೆ ನೀರು ನುಗ್ಗಿದ್ದು, ಭಕ್ತರು ಪರದಾಡುವಂತಾಗಿದೆ.
ಈವರೆಗೆ ಎಷ್ಟೇ ನೀರು ಬಂದರೂ ದೇವಾಲಯದ ಆವರಣಕ್ಕೆ ನೀರು ನುಗ್ಗಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ದೇವಾಲಯ ಸಂಪೂರ್ಣ ನೀರಿನಿಂದ ಆವೃತಗೊಂಡಿದ್ದು, ಭಕ್ತಾಧಿಗಳು ಕಂಗಾಲಾಗಿದ್ದಾರೆ. ಆಲಮಟ್ಟಿ ಜಲಾಶಯದಿಂದ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮತ್ತು ನವಿಲುತೀರ್ಥ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ಗೂ ಅಧಿಕ ನೀರು ಬಿಟ್ಟಿರುವ ಪರಿಣಾಮ ಈ ಪ್ರವಾಹ ಉಂಟಾಗಿದೆ.
ಇದೇ ರೀತಿ ಪರಿಸ್ಥತಿ ಮುಂದುವರೆದರೆ ಸಂಗಮ ಸಂಪೂರ್ಣ ಮುಳುಗಲಿದೆ. ಸದ್ಯ ಶ್ರಾವಣಮಾಸವಾಗಿದ್ದರಿಂದ ಭಕ್ತರು ಪೂಜೆ, ಪುನಸ್ಕಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.