ETV Bharat / state

ಕೃಷ್ಣಾ, ಘಟಪ್ರಭಾ, ಮಲಪ್ರಭಾ ವಿಕೋಪಕ್ಕೆ ಬೀದಿಗೆ ಬಿದ್ದ 270 ಕುಟುಂಬಗಳು! - ಬಾಗಲಕೋಟೆ ಪ್ರವಾಹ,

ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳು ಸೃಷ್ಟಿಸಿದ ಪ್ರವಾಹಕ್ಕೆ ಸುಮಾರು 270ಕ್ಕೂ ಹೆಚ್ಚು ಕುಟುಂಬಗಳು ಆಶ್ರಯ ಕಳೆದುಕೊಂಡು ಬೀದಿಗೆ ಬಿದ್ದಿವೆ.

Flood affected on 271 family, Flood affected on 271 family in Bagalkot, Bagalkot news, Bagalkot flood news, ಪ್ರವಾಹದಿಂದ ಬೀದಿಗೆ ಬಿದ್ದ 270 ಕುಟುಂಬಗಳು, ಬಾಗಲಕೋಟೆಯಲ್ಲಿ ಪ್ರವಾಹದಿಂದ ಬೀದಿಗೆ ಬಿದ್ದ 270 ಕುಟುಂಬಗಳು, ಬಾಗಲಕೋಟೆ ಪ್ರವಾಹ, ಬಾಗಲಕೋಟೆ ಪ್ರವಾಹ ಸುದ್ದಿ
ಕೃಷ್ಣ, ಘಟಪ್ರಭ, ಮಲ್ಲಪ್ರಭ ವಿಕೋಪಕ್ಕೆ ಬೀದಿಗೆ ಬಿದ್ದ 270 ಕುಟುಂಬಗಳು
author img

By

Published : Oct 17, 2020, 4:00 AM IST

Updated : Oct 17, 2020, 6:17 AM IST

ಬಾಗಲಕೋಟೆ: ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಯಲ್ಲಿ ಭೀಕರ ಪ್ರವಾಹದಿಂದ 31 ಗ್ರಾಮಗಳ 270 ಕುಟುಂಬಗಳು ಬಾಧಿತಗೊಂಡಿವೆ.

4 ಕಾಳಜಿ ಕೇಂದ್ರಗಳನ್ನು ತೆರೆದು 210 ಜನವರಿಗೆ ಊಟ, ಉಪಹಾರ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಬಾಧಿತ 270 ಕುಟುಂಬಗಳಿಗೆ ತಲಾ 10ಸಾವಿರ ರೂ. ತುರ್ತು ಪರಿಹಾರವನ್ನು ಪಾವತಿಸಲಾಗಿದೆ.

ಮುಧೋಳ ತಾಲೂಕಿನಲ್ಲಿ ಜಾನುವಾರು ಮೃತಪಟ್ಟಿದ್ದು, 30 ಸಾವಿರ ರೂ. ಪರಿಹಾರ ಪಾವತಿಸಲಾಗಿದೆ. 34,869 ಹೆಕ್ಟರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. 105 ಮನೆಗಳು ಪೂರ್ಣ ಪ್ರಮಾಣದಲ್ಲಿ 26 ಮನೆಗಳು ತೀವ್ರ ಹಾಗೂ 338 ಮನೆಗಳು ಭಾಗಶ: ಹಾನಿಗೊಳಗಾಗಿವೆ. ಮನೆ ಹಾನಿ ಕುರಿತು ಜಂಟಿ ಸಮೀಕ್ಷೆ ಮುಗಿದ ಬಳಿಕ 347 ಮನೆ ಹಾನಿ ಬಗ್ಗೆ ಆರ್​ಜಿಹೆಚ್​ಸಿಎಲ್ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. 23 ಕೈಮಗ್ಗಳು ಹಾನಿಗೊಳಗಾಗಿವೆ.

ಗ್ರಾಮೀಣಾಭಿವೃದ್ಧಿ ಇಲಾಖೆಯ 999 ಕಿ.ಮೀ ರಸ್ತೆ, 19 ಕುಡಿಯುವ ನೀರಿನ ಯೋಜನೆಗಳು ಹಾಗೂ 32 ಸೇತುವೆಗಳು ಹಾನಿಯಾಗಿವೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ 94 ಕಿ.ಮೀ. ರಾಜ್ಯ ಹೆದ್ದಾರಿ, 308 ಕಿ.ಮೀ. ಜಿಲ್ಲಾ ಮುಖ್ಯರಸ್ತೆಗಳು ಹಾಗೂ 54 ಸೇತುವೆಗಳು ಹಾನಿಯಾಗಿವೆ. 43 ಕೆನಾಲ್, 28 ಕೆರೆಗಳು, 15 ಏತನೀರಾವರಿ ಯೋಜನೆಗಳು ಹಾನಿಯಾಗಿವೆ. 1,851 ಕಂಬಗಳು, 471 ಟಿ.ಸಿ.ಗಳು, 69 ಕಿ.ಮೀ. ವಿದ್ಯುತ್ ಲೈನ್‍ಗಳು ಹಾನಿಯಾಗಿರುತ್ತವೆ. ಒಟ್ಟು 857 ಕೋಟಿ ರೂ. ನಷ್ಟವಾಗಿದೆ ಎಂದು ಪ್ರಾಥಮಿಕ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿ ಆಗಿರುವ ಗೋವಿಂದ ಕಾರಜೋಳ ಜಿಲ್ಲಾಧಿಕಾರಿಗಳಿಗೆ ಸೂಕ್ತ ಪರಿಹಾರ ಸೇರಿದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ಅಧಿಕಾರಿಗಳು ಸಮನ್ವಯತೆಯಿಂದ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ನಿರ್ವಹಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Last Updated : Oct 17, 2020, 6:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.