ETV Bharat / state

ಜಮಖಂಡಿ ಬಳಿ ಮರ್ಯಾದಾ ಹತ್ಯೆ: ಮಗಳ ಗಂಡನನ್ನೇ ಕೊಚ್ಚಿ ಕೊಂದ ತಂದೆ - ಬಾಗಲಕೋಟೆ ಮರ್ಯಾದಾ ಹತ್ಯೆ

ಬಾಗಲಕೋಟೆಯ ಜಮಖಂಡಿ ತಾಲೂಕಿನಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ಪ್ರೀತಿಸಿ ಮದುವೆಯಾದ ಯುವಕನನ್ನು ಯುವತಿಯ ಪೋಷಕರು ಕೊಚ್ಚಿ ಕೊಲೆ ಮಾಡಿದ್ದಾರೆ.

Maryada Hatya
ಮರ್ಯಾದಾ ಹತ್ಯೆ
author img

By

Published : Dec 19, 2022, 11:04 AM IST

ಬಾಗಲಕೋಟೆ: ತನ್ನ ಮಗಳನ್ನು ಪ್ರೀತಿಸಿ ಮದುವೆಯಾದನೆಂಬ ಕಾರಣಕ್ಕೆ ಯುವಕನನ್ನು ಯುವತಿಯ ತಂದೆ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಜೈನ ಸಮುದಾಯಕ್ಕೆ ಸೇರಿದ ಭುಜಬಲಿ(34) ಕೊಲೆಯಾದ ಯುವಕ. ಕ್ಷತ್ರಿಯ ಸಮಾಜದ ತಮ್ಮನಗೌಡ ಪಾಟೀಲ ಎಂಬುವರ ಪುತ್ರಿ ಭಾಗ್ಯಶ್ರೀ ಮತ್ತು ಭುಜಬಲಿ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಕೆಲ ತಿಂಗಳ ಹಿಂದೆ ಇಬ್ಬರೂ ರಿಜಿಸ್ಟರ್ ಮದುವೆಯಾಗಿದ್ದರು. ಶನಿವಾರ ರಾತ್ರಿ ಹನುಮ ದೇವರ ಪಲ್ಲಕ್ಕಿ ಉತ್ಸವ ಮುಗಿಸಿ ಸಹೋದರನ ಪುತ್ರನೊಂದಿಗೆ ಭುಜಬಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕಾರದ ಪುಡಿ ಎರಚಿ, ಚಾಕುವಿನಿಂದ ಇರಿದು ಆತನನ್ನು ಕೊಲೆ ಮಾಡಲಾಗಿದೆ.

ಕೊಲೆ ಮಾಡಿದ ಬಳಿಕ ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ತಮ್ಮನಗೌಡ ಪಾಟೀಲನನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಈ ಹಿಂದೆ ಯುವತಿಯ ಪೋಷಕರನ್ನು ಹಾಗೂ ಯುವಕನನ್ನು ಕರೆದು ಪೊಲೀಸರು ಸಂಧಾನ ಮಾಡಿದ್ದರು. ಆ ಬಳಿಕ ಯುವಕ ಯುವತಿ ಊರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮರ್ಯಾದಾ ಹತ್ಯೆ: ಅಕ್ಕನ ಕತ್ತು ಹಿಸುಕಿ, ಆಕೆಯ ಪ್ರಿಯಕರನಿಗೆ ಗುಂಡಿಕ್ಕಿದ ಅಪ್ರಾಪ್ತ ತಮ್ಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.