ಬಾಗಲಕೋಟೆ: ಕ್ಷೇತ್ರದಲ್ಲಿ ಕುರುಬ ಸಮಾಜದ ಮೇಲೆ ದೌರ್ಜನ್ಯ ಮಾಡುತ್ತಿರುವವರನ್ನು ಬೆಂಬಲಿಸಬೇಡಿ ಎಂದು ನೊಂದ ಮಹಿಳೆ ಲಕ್ಷ್ಮೀಬಾಯಿ ಮುಕ್ಕಣ್ಣ ಮುಕ್ಕನವರ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಗರದ ಪ್ರೇಸ್ ಕ್ಷಬ್ನಲ್ಲಿ ಪಿಕೆಪಿಎಸ್ ಚುನಾವಣೆ ಸಮಯದಲ್ಲಿ ಉಂಟಾಗಿದ್ದ ಗಲಾಟೆಯಿಂದಾಗಿ ಮೃತಪಟ್ಟಿರುವ ಮುಕ್ಕಣ್ಣ ಮುಕ್ಕನವರ ಪತ್ನಿ ಲಕ್ಷ್ಮೀಬಾಯಿ ಮಾಧ್ಯಮಗಳೊಂದಿಗೆ ಮಾತನಾಡಿ ಕಣ್ಣೀರು ಹಾಕಿದರು. ಈ ಮಹಿಳೆ ಹುನಗುಂದ ಮತ ಕ್ಷೇತ್ರದಲ್ಲಿ ಈ ಹಿಂದೆ ಶಾಸಕರಾಗಿದ್ದ ಕಾಶಪ್ಪನವರ ಮೇಲೆ ಆರೋಪ ಮಾಡಿದ್ದರು. ಅವರ ಮೇಲೆ ದೂರು ದಾಖಲಾದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಾನು ಎರಡು ಚಿಕ್ಕ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದು, ಇಂತಹವರಿಗೆ ಚುನಾವಣೆಯಲ್ಲಿ ಕುರುಬ ಸಮಾಜದವರು ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿಕೊಂಡರು.
ಜಗದೀಶ್ ಮುಕ್ಕಣ್ಣವನರ ಎಂಬುವವರು ಮಾತನಾಡಿ, ಹುನಗುಂದ ಪಟ್ಟಣದಲ್ಲಿ ನಡೆದ ಪಿಕೆಪಿಎಸ್ ಚುನಾವಣೆ ಸಮಯದಲ್ಲಿ ಉಂಟಾಗಿದ್ದ ಗಲಾಟೆಯಿಂದ ಮುಕ್ಕಣ್ಣ ಎಂಬುವರ ಸಾವಿಗೆ ಕಾರಣವಾಗಿರುವ ಕುಟುಂಬದ ವಿರುದ್ಧ ಹೋರಾಟ ಮಾಡಿದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜವಾಗಿಲ್ಲ. ಈಗ ಚುನಾವಣೆ ಸಮಯದಲ್ಲಿ ಪಾಠ ಕಲಿಸುವಂತೆ ಸಮಾಜದ ಬಾಂಧವರಿಗೆ ಮನವಿ ಮಾಡಿಕೊಂಡರು.