ಬಾಗಲಕೋಟೆ : ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ಬಳಿಯ ಕೃಷ್ಣಾನದಿಯಲ್ಲಿ ನಡೆದ ಬೋಟ್ ದುರಂತಕ್ಕೆ ಸಂಬಂಧಿಸಿ ಇಂದು ಮೂವರ ಮೃತದೇಹಗಳು ಪತ್ತೆಯಾಗಿವೆ.
ಕಳೆದ ದಿನ ಧನ್ನೂರ ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಶಿವಪ್ಪ(72) ಎಂಬುವರ ಶವ ಪತ್ತೆ ಮಾಡಲು ಬೋಟ್ನಲ್ಲಿ ತೆರಳಿದ್ದ ಮೂವರು ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸಾವನ್ನಪ್ಪಿದ್ದರು. ಅಗ್ನಿಶಾಮಕ ದಳ ಹಾಗೂ ಸ್ಥಳೀಯರಿಂದ ನಾಪತ್ತೆಯಾಗಿದ್ದವರ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಇದನ್ನು ಓದಿ-ಶಾರ್ಟ್ ಸರ್ಕ್ಯೂಟ್: ಕೃಷ್ಣನದಿಯಲ್ಲಿ ಶವ ಹುಡುಕಲು ಹೋದ ಮೂವರು ದಾರುಣ ಸಾವು
ಇಂದು ಶರಣಪ್ಪ(30), ಯನಮಪ್ಪ(35) ಹಾಗೂ ಬೋಟ್ ಚಾಲಕ ಪರಸಪ್ಪ (30)ಎಂಬುವರ ಮೃತ ದೇಹ ಪತ್ತೆಯಾಗಿವೆ. ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.