ಬಾಗಲಕೋಟೆ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಮ್ಮ ಕ್ಷೇತ್ರವಾದ ಮುಧೋಳ ಪಟ್ಟಣದಲ್ಲಿ ಮೈಕ್ ಮೂಲಕ ಜಾಗೃತಿ ಮೂಡಿಸಿದರು.
ಮುಧೋಳ ಪಟ್ಟಣದ ಗಾಂಧಿ ವೃತ್ತದ ಬಳಿ ನಿಂತು ಮೈಕ್ನಲ್ಲಿ ಮಾರಕ ರೋಗ ಕೊರೊನಾ ಹಿನ್ನೆಲೆ ಸರ್ಕಾರ ತೆಗೆದುಕೊಳ್ಳುವ ಕ್ರಮಗಳನ್ನು ಪಾಲಿಸಿ, ಅಧಿಕಾರಿಗಳು ಹೇಳಿದ ರೀತಿಯಲ್ಲಿ ಮನೆಯಲ್ಲಿ ಇದ್ದು, ನಿಯಮಗಳನ್ನು ಪಾಲಿಸಿ ಯಾರೂ ಹೂರಗೆ ಬರಬಾರದು. ಜನತೆಗೆ ತೊಂದರೆ ಆಗದಂತೆ ಅಧಿಕಾರಿಗಳು ಎಲ್ಲಾ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಪ್ರಾರ್ಥನಾ ಮಂದಿರದಲ್ಲಿ, ಜಾತ್ರೆ, ಸಂತೆಗಳಲ್ಲಿ ಹೆಚ್ಚಿನ ಜನರು ಸೇರಬಾರದು ಎಂದು ವಿನಂತಿಸಿಕೊಂಡು ರೇಷನ್ ಮೂಲಕ ಆಹಾರ ಸಾಮಗ್ರಿ ವಿತರಣೆ ಮಾಡಲಾಗುವುದು ಎಲ್ಲರೂ ಸರ್ಕಾರದ ನಿಯಮ ಪಾಲಿಸುವಂತೆ ಕರೆ ನೀಡಿದರು.