ETV Bharat / state

ಸಾಮಾಜಿಕ ಜಾಲತಾಣದ ಸದ್ಭಳಕೆ-'ರೇಷ್ಮೆ ಖಣ'ದಿಂದ ತಯಾರಾದ ಡೈರಿಗೆ ಭಾರಿ ಬೇಡಿಕೆ

ವಿದ್ಯುತ್ ಮಗ್ಗದಿಂದ ತಯಾರಾಗಿರುವ ಖಣಕ್ಕಿಂತ ಕೈ ಮಗ್ಗದಿಂದ ತಯಾರಾಗಿರುವ ಖಣ ಅತಿ ಶ್ರೇಷ್ಠ ವಾಗಿದೆ. ಈ ಹಿಂದೆ ಎರಡು ದಿನಕ್ಕೆ 600 ರೂಪಾಯಿ ಆದಾಯ ಬರುತ್ತಿತ್ತು. ಈಗ ಒಂದು ಸಾವಿರ ರೂಪಾಯಿಗಳವರೆಗೆ ಬರುತ್ತಿದೆ.

author img

By

Published : Jun 30, 2022, 2:04 PM IST

demand for bagalakote diaries which made from silk
'ರೇಷ್ಮೆ ಖಣ'ದಿಂದ ತಯಾರಾದ ಡೈರಿಗೆ ಭಾರಿ ಬೇಡಿಕೆ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಕೈ ಮಗ್ಗದಿಂದ ತಯಾರಾಗುವ 'ರೇಷ್ಮೆ ಖಣ'ಕ್ಕೆ (ಕುಪ್ಪಸ) ತನ್ನದೇ ಆದ ಬೇಡಿಕೆಯಿತ್ತು. ಆದರೀಗ ಆಧುನಿಕತೆ ಬೆಳೆದಂತೆ ಕೈಮಗ್ಗದಿಂದ ತಯಾರಾಗುವ ಈ ಖಣಕ್ಕೆ ಮೊದಲಿನಷ್ಟು ಬೆಲೆ ಇಲ್ಲದಂತಾಗಿದೆ. ಈ ಹಿನ್ನೆಲೆ ಯುವಕ ರಮೇಶ ಸಾಮಾಜಿಕ ಮಾಧ್ಯಮಗಳ ಮೂಲಕ 'ರೇಷ್ಮೆ ಖಣ'ವನ್ನು ಎಲ್ಲೆಡೆ ಪರಿಚಯಿಸುವ ಪ್ರಯತ್ನ ಮಾಡಿದ ಹಿನ್ನೆಲೆ ಈಗ 'ರೇಷ್ಮೆ ಖಣ'ಕ್ಕೆ ಕೊಂಚ ಬೇಡಿಕೆ ಬಂದಿದೆ.

'ರೇಷ್ಮೆ ಖಣ'ದಿಂದ ತಯಾರಾದ ಡೈರಿ ಬಗ್ಗೆ ಮಾಹಿತಿ ನೀಡಿರುವುದು

ಗುಳೇದಗುಡ್ಡ ರೇಷ್ಮೆ ಖಣದ ಬಗ್ಗೆ ವೈಬ್ ಸೈಟ್ ನಿರ್ಮಾಣ ಮಾಡಿ ಖಣದಿಂದ ತಯಾರಾಗಿರುವ ನೋಟ್​ಬುಕ್​ಗಳು/ಡೈರಿ ಹಾಗೂ ಇತರ ವಸ್ತುಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವೈಬ್​ಸೈಟ್, ಟ್ವಿಟರ್ ಹಾಗೂ ಫೇಸ್‌ಬುಕ್‌ ಸೇರಿದಂತೆ ಇತರ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರಚಾರ ಮಾಡಲಾಗಿದೆ. ಹೀಗಾಗಿ ದೇಶದ ವಿವಿಧ ಪ್ರದೇಶ ಸೇರಿದಂತೆ ವಿದೇಶಗಳಿಂದಲೂ ಗುಳೇದಗುಡ್ಡ ಖಣದಿಂದ ಕವರ್​/ಬೈಂಡ್ ಹಾಕಿರುವ ಡೈರಿಗಳಿಗೆ ಭಾರಿ ಬೇಡಿಕೆ ಬರುತ್ತಿದೆ ಎಂದು ರಮೇಶ ತಿಳಿಸಿದ್ದಾರೆ.

ಲಾಕ್​ಡೌನ್ ಸಮಯದಲ್ಲಿ ಇಲ್ಲಿನ ನೇಕಾರರು ಕೆಲಸ ಮಾಡಿ ಸುಮಾರು 600 ಮೀಟರ್​​ವರೆಗೆ ರೇಷ್ಮೆ ಖಣ ತಯಾರಿಸಿದ್ದರು. ಆದರೆ, ಅದು ಖರೀದಿ ಆಗುತ್ತಿರಲಿಲ್ಲ. ಆಗ ರಮೇಶ ಅವರು ಬೆಂಗಳೂರಿನ ಅಕ್ಷರ ಪ್ರಿಂಟರ್​ನ ನಾಗರಾಜ್ ಎಂಬುವವರ ಜೊತೆ ಚರ್ಚೆ ಮಾಡಿ ಬಳಿಕ ಡೈರಿಗಳ ಮೇಲೆ ಕವರ್ ಹಾಕಿ ಮಾರಾಟ ಮಾಡಬಹುದು ಎಂದು ಯೋಚಿಸಿದರು.

ಮಾಹಿತಿ ನೀಡಿದ ನಂತರ ಅವರಿಗೆ ಸುಮಾರು 200 ಮೀಟರ್ ಖಣ ನೀಡಿ ನೋಟ್ ಬುಕ್​ಗಳಿಗೆ ಕವರ್ ಹಾಕಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ ಹಿನ್ನೆಲೆ ಈಗಾಗಲೇ ಕೆಲವಷ್ಟು ಖರೀದಿಯಾಗಿದೆ. ಇದರಿಂದ ಕೈ ಮಗ್ಗ ನೇಕಾರರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

ಒಂದು ಮೀಟರ್ ಖಣಕ್ಕೆ 600 ರೂಪಾಯಿ ದರ ಆಗುತ್ತದೆ. ಅಷ್ಟು ಹಣ ನೀಡಿ ಖರೀದಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ರೀತಿ ಹೊಸ ಯೋಜನೆ ಮಾಡಿಕೊಂಡು ಗ್ರಾಹಕರನ್ನು ಸೆಳೆಯಬೇಕೆಂದುಕೊಂಡಿದ್ದಾರೆ. ಜೊತೆಗೆ ನೇಕಾರರ ಉತ್ತೇಜನ ಹಾಗೂ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ದೊಡ್ಡ ಸಂಸ್ಥೆಗಳು, ರಾಜಕೀಯ ಗಣ್ಯರು ಇಂತಹ ಡೈರಿ/ಬುಕ್ ಹಾಗೂ ಖಣ ಖರೀದಿಸಿ ಗಿಫ್ಟ್ ನೀಡುವಂತಾಗಬೇಕು‌. ಇದರಿಂದ ಕೈ ಮಗ್ಗದಿಂದ ತಯಾರಾಗುವ ಈ ರೇಷ್ಮೆ ಖಣಕ್ಕೆ ಹೆಚ್ಚು ಬೇಡಿಕೆ ಬಂದು ನೇಕಾರರು ಸಬಲರಾಗುತ್ತಾರೆ.

ಇದನ್ನೂ ಓದಿ: ಅಪಾಯ ಲೆಕ್ಕಿಸದೇ, ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ಟ್ರಾಕ್ಟರ್​ಗಳ ಹಗ್ಗ ಜಗ್ಗಾಟ- Video

ನೇಕಾರರು ಕಳೆದ 4 - 5 ದಶಕಗಳಿಂದಲೂ ಕೈ ಮಗ್ಗ ನೇಕಾರಿಕೆಯನ್ನು ಅವಲಂಬಿಸಿಕೊಂಡು ಬಂದಿದ್ದು, ಸೂಕ್ತ ಬೇಡಿಕೆ ಇಲ್ಲದೇ ತೊಂದರೆ ಅನುಭವಿಸಿದ್ದರು. ಆದರೆ, ಖಣ ಮೂಲಕ ನೋಟ್ ಬುಕ್ ಮೇಲೆ ಕವರ್ ಹಾಕುವ ಯೋಜನೆ ಸೇರಿದಂತೆ ಇತರೆ ಫ್ಯಾಷನ್​ಗೆ ಟಚ್ ನೀಡಿದ್ದರಿಂದ ಈಗ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ವಿದ್ಯುತ್ ಮಗ್ಗದಿಂದ ತಯಾರಾಗಿರುವ ಖಣಕ್ಕಿಂತ ಕೈ ಮಗ್ಗದಿಂದ ತಯಾರಾಗಿರುವ ಖಣ ಅತಿ ಶ್ರೇಷ್ಠ ವಾಗಿದೆ. ಈ ಹಿಂದೆ ಎರಡು ದಿನಕ್ಕೆ 600 ರೂಪಾಯಿ ಆದಾಯ ಬರುತ್ತಿತ್ತು. ಈಗ ಒಂದು ಸಾವಿರ ರೂಪಾಯಿಗಳವರೆಗೆ ಬರುತ್ತಿದೆ. ಆದರೂ ಸಂಘ ಸಂಸ್ಥೆಗಳು ಹಾಗೂ ಸರ್ಕಾರ ಕೈ ಮಗ್ಗಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಖಣದಿಂದ ತಯಾರಾಗುವ ಡೈರಿಗಳನ್ನು ಖರೀದಿ ಮಾಡುವ ಜೊತೆಗೆ ಇತರ ರೀತಿಯ ಪ್ರೋತ್ಸಾಹ ಸಿಗುವ ಯೋಜನೆ ಜಾರಿಗೆ ತರಬೇಕಾಗುತ್ತದೆ. ಇಂತಹ ಉದ್ಯೋಗ ನಂಬಿದ ಜನತೆಗೂ ಸಹ ಅನುಕೂಲವಾಗಲಿದೆ. ಎಲ್ಲರ ಸಹಕಾರ ಅಗತ್ಯವಿದೆಯೆಂದು ನೇಕಾರರು, ರಮೇಶ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.