ಬಾಗಲಕೋಟೆ: ಕೊರೊನಾದಿಂದ ಒಂದೇ ಕುಟುಂಬದ ನಾಲ್ವರು ಬಲಿಯಾಗಿ ಬಾಲಕ ಅನಾಥನಾಗಿರುವ ಮನಕಲಕುವ ಪ್ರಸಂಗ ಬೆಳಕಿಗೆ ಬಂದಿದೆ.
ಬಾಗಲಕೋಟೆ ತಾಲೂಕಿನ ದೇವನಾಳ ಗ್ರಾಮದ ವೆಂಕಟೇಶ ಒಂಟಿಗೋಡಿ (45), ಪತ್ನಿ ರಾಜೇಶ್ವರಿ (40) , ರಾಮನಗೌಡ ಉದಪುಡಿ(74) ಲಕ್ಷ್ಮೀ ಬಾಯಿ(68) ಮೃತ ಪಟ್ಟಿದ್ದಾರೆ.ಇವರೆಲ್ಲರೂ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ನಿವಾಸಿಗಳಾಗಿದ್ದಾರೆ. ರಾಜೇಶ್ವರಿ ಸಾಲಹಳ್ಳಿಯಲ್ಲಿ ಶಿಕ್ಷಕಿ ಆಗಿದ್ದರು, ಪತಿ ವೆಂಕಟೇಶ್ ರಾಮದುರ್ಗದಲ್ಲಿ ಹಾಸ್ಟೆಲ್ನಲ್ಲಿ ಅಧಿಕಾರಿಯಾಗಿದ್ದರು. ಹೀಗಾಗಿ ಪತ್ನಿಯ ಊರಿನಲ್ಲಿಯೇ ವೆಂಕಟೇಶ್ ಕುಟುಂಬ ಸಮೇತ ವಾಸವಾಗಿದ್ದರು.
ಓದಿ:ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ತೌಕ್ತೆ ಚಂಡಮಾರುತಕ್ಕೆ 8 ಮಂದಿ ಬಲಿ
ಬೆಳಗಾವಿ ಉಪ ಚುನಾವಣೆ ಸಮಯದಲ್ಲಿ ಕಾರ್ಯನಿರ್ವಹಿಸಿದ್ದ ರಾಜೇಶ್ವರಿ ಗ್ರಾಮಕ್ಕೆ ಬಂದ ನಂತರ ಕೊರೊನಾ ಲಕ್ಷಣ ಕಂಡು ಬಂದಿತ್ತು. ನಂತರ ಮನೆಯಲ್ಲಿದ್ದ ಎಲ್ಲರಿಗೂ ಕೊರೊನಾ ಬಂದು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಎಲ್ಲರೂ ಮೃತಪಟ್ಟಿದ್ದಾರೆ. ಈಗ ಬಾಲಕ ಅನಾಥವಾಗಿದ್ದು, ಸಂಬಂಧಿಕರು ಬಾಲಕನ ಲಾಲನೆ-ಪಾಲನೆ ಮಾಡುತ್ತಿದ್ದಾರೆ.