ಬಾಗಲಕೋಟೆ: ವಿದೇಶ ಪ್ರವಾಸ ಮುಗಿಸಿ ಇಂದು ಜಿಲ್ಲೆಗೆ ಆಗಮಿಸಿದ 13 ಜನರೂ ಸುರಕ್ಷಿತರಾವಾದ್ದಾರೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಗೆ ಇಂದು ಆಗಮಿಸಿದ 13 ಜನರು ಒಳಗೊಂಡಂತೆ ಇಲ್ಲಿವರೆಗೆ ಒಟ್ಟು 116 ಜನ ವಿದೇಶದಿಂದ ಆಗಮಿಸಿದ್ದು, ಎಲ್ಲರೂ ಸುರಕ್ಷಿತವಾಗಿ ಇದ್ದಾರೆ. ಇಂದು ವಿದೇಶ ಪ್ರವಾಸ ಮುಗಿಸಿ ಮರಳಿ ಬಂದ 13 ಜನರನ್ನು 14 ದಿನಗಳವರೆಗೆ ಮನೆಯಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ. ಈ 13 ಜನರ ಪೈಕಿ ಬಾಗಲಕೋಟೆಯ ವ್ಯಕ್ತಿ ಫ್ರಾನ್ಸ್ ಪ್ರವಾಸ ಮುಗಿಸಿ ಮರಳಿ ಬಂದಿದ್ದು, ಸುರಕ್ಷಿತವಾಗಿ ಇದ್ದರೂ ಸಹಿತ ಅವರ ಗಂಟಲು ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
ಅಲ್ಲದೇ ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿಗೆ ಕೊರೊನಾ ಸೋಂಕು ಕಂಡು ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.