ಬಾಗಲಕೋಟೆ: ಹೊಸ ವರ್ಷ ಆಚರಣೆ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸಿಗರು ದಂಡೆ ಹರಿದುಬರುತ್ತಿದೆ. ಐತಿಹಾಸಿಕ ಸ್ಥಳವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ದಕ್ಷಿಣ ಕಾಶಿ ಹಾಗೂ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಮಹಾಕೂಟದ ದೇವಸ್ಥಾನಕ್ಕೆ ಪ್ರವಾಸಿಗರು ಹಾಗೂ ಶಾಲೆಯ ಮಕ್ಕಳು ಭೇಟಿ ನೀಡುತ್ತಿದ್ದಾರೆ. ಮಹಾಕೂಟೇಶ್ವರ ದೇವರ ದರ್ಶನ ಪಡೆದು ಪುರಾತನ ಪುಷ್ಕರಣಿಯಲ್ಲಿ ಮಕ್ಕಳು ಸ್ನಾನ ಮಾಡಿ ಎಂಜಾಯ್ ಮಾಡಿದರು.
ಈ ಪುಷ್ಕರಣಿಯಲ್ಲಿ ಸಾಕಷ್ಟು ಹಿಂದಿ ಹಾಗೂ ಕನ್ನಡ ಚಲನಚಿತ್ರಗಳ ಚಿತ್ರೀಕರಣ ನಡೆಸಲಾಗಿದೆ. ಪ್ರವಾಸಿಗರಿಗೆ ಇನ್ನಷ್ಟು ಅಚ್ಚುಮೆಚ್ಚಿನ ತಾಣವಾಗುತ್ತಿದೆ. ಚಾಲುಕ್ಯ ಕಾಲದ ಸಮಯದಲ್ಲಿ ನಿರ್ಮಾಣವಾಗಿರುವ ಈ ಪುಷ್ಕರಣಿಯಲ್ಲಿ ಮಳೆಗಾಲ, ಬೇಸಿಗೆ ಎನ್ನದೆ ವರ್ಷವಿಡೀ ನೀರಿನ ಸೆಳೆತ ಇರುವುದು ಗಮನಾರ್ಹ.