ಬಾಗಲಕೋಟೆ: ಜಿಲ್ಲೆಯ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಸ್ಕೂಲ್ನಲ್ಲಿ ಕಸ್ಟರ್ ಮಟ್ಟದ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಈ ಪಂದ್ಯದಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಿಂದ ಸಿಬಿಸಿಇ ಮಹಾವಿದ್ಯಾಲಯ ವಿದ್ಯಾರ್ಥಿಗಳು ಭಾಗವಹಿಸಿದ್ರು.19 ವಯಸ್ಸಿನ ಹಾಗೂ 17 ವಯಸ್ಸಿನ ಒಳಗಿನ ವಿದ್ಯಾರ್ಥಿಗಳ ಹಾಕಿ ಪಂದ್ಯಾವಳಿ ಇದಾಗಿತ್ತು. ಒಟ್ಟು 19 ತಂಡಗಳು ಆಗಮಿಸಿದ್ದು, ಎರಡು ದಿನಗಳ ಕಾಲ ಹಾಕಿ ಪಂದ್ಯಾವಳಿ ನಡೆಯಲಿದೆ.
ಈ ಪಂದ್ಯಾಟದಲ್ಲಿ ಆಯ್ಕೆಯಾದ ಒಟ್ಟು ನಾಲ್ಕು ಬಾಲಕಿಯರ, ಬಾಲಕರ ತಂಡಗಳು ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ. ಕಳೆದ ರಾತ್ರಿ ಮಳೆ ಆದ ಪರಿಣಾಮ 30 ತಂಡಗಳಲ್ಲಿ 19 ತಂಡಗಳು ಮಾತ್ರ ಭಾಗವಹಿಸಿವೆ. ಕ್ರೀಡಾಪಟುಗಳಿಗೆ, ನಿರ್ಣಾಯಕರಿಗೆ ಹಾಗೂ ಸಿಬ್ಬಂದಿಗೆ ಊಟ, ವಸತಿ ಸೇರಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಶಾಲೆಯ ಪ್ರಾಚಾರ್ಯರಾದ ಸುರೇಶ ಹೆಗಡೆ ತಿಳಿಸಿದ್ದಾರೆ.