ETV Bharat / state

ಮದುವೆ ಸಮಾರಂಭದಲ್ಲಿ ಸಾಮಾಜಿಕ ಜಾಗೃತಿ‌ ಮೂಡಿಸಿ ವಿಭಿನ್ನ ಮದುವೆಯಾದ ಜೋಡಿ.. - ಬ್ಯಾನರ್​ ಹಾಕಿ ವಿವಿಧ ವಿಷಯಗಳ ಬಗ್ಗೆ ಜಾಗೃತಿ‌

ಕಲ್ಯಾಣ ಮಂಟಪದ ಮುಂದೆ ಬ್ಯಾನರ್​ ಹಾಕಿ ವಿವಿಧ ವಿಷಯಗಳ ಬಗ್ಗೆ ಜಾಗೃತಿ‌ - ವಿಭಿನ್ನವಾಗಿ ನಡೆದ ಮದುವೆ ಸಮಾರಂಭ.

Etv Bharatcouple married differently
ಮದುವೆ ಸಮಾರಂಭದಲ್ಲಿ ಸಾಮಾಜಿಕ ಜಾಗೃತಿ‌ ಮೂಡಿಸಿ ವಿಭಿನ್ನವಾಗಿ ಮದುವೆಯಾದ ಜೋಡಿ
author img

By

Published : Feb 11, 2023, 10:08 PM IST

Updated : Feb 11, 2023, 11:01 PM IST

ಮದುವೆ ಸಮಾರಂಭದಲ್ಲಿ ಸಾಮಾಜಿಕ ಜಾಗೃತಿ‌ ಮೂಡಿಸಿ ವಿಭಿನ್ನ ಮದುವೆಯಾದ ಜೋಡಿ

ಬಾಗಲಕೋಟೆ: ಪ್ರಸ್ತುತ ಮದುವೆ ಸಮಾರಂಭ ಅಂದರೆ ವೈಭವೋಪೇತವಾಗಿ, ಪ್ರೀ ವೆಡ್ಡಿಂಗ್ ಫೋಟೋ ಶುಟ್​, ಪಾರ್ಟಿ, ಹಾಡು ಕುಣಿತ, ಪಟಾಕಿ ಸಿಡಿಸಿ, ಮೆರವಣಿಗೆ ಮಾಡುವುದು ಸಾಮಾನ್ಯವಾಗಿ ನಾವು ನೋಡುತ್ತಿರುತ್ತೇವೆ. ಆದರೆ, ಇದಕ್ಕೆಲ್ಲ ಭಿನ್ನವಾಗಿ, ಇಲ್ಲೊಂದು ಜೋಡಿ, ತಮ್ಮ ಮದುವೆ ಸಮಾರಂಭದಲ್ಲಿ ಸಮಾಜಕ್ಕೆ ಜಾಗೃತಿ ಮೂಡಿಸುವಂತಹ ಬ್ಯಾನರ್​​ ಹಾಕಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಕಲ್ಯಾಣ ಮಂಟಪದ ಮುಂದೆ ವಿವಿಧ ವಿಷಯಗಳ ಬಗ್ಗೆ ಜಾಗೃತಿ‌ಯನ್ನು ಮೂಡಿಸುವ ಬ್ಯಾನರ್​ ಹಾಕಿ ಸಮಾಜದಲ್ಲಿ ಬದಲಾವಣೆ ತರಬೇಕು ಎಂದು ಉದ್ದೇಶದಿಂದ ಬ್ಯಾನರ್​ ಹಾಕಲಾಗಿದೆ. ನಗರದ ಮುರಗೋಡ ಕಲ್ಯಾಣ ಮಂಟಪದಲ್ಲಿ ಫೆ.10ರಂದು ನಡೆದ ಸಂತೋಷ ಮತ್ತು ಶಿಲ್ಪಾ ಜೊಡಿಯ ಮದುವೆ ಸಮಾರಂಭದಲ್ಲಿ ಹೆಣ್ಣುಮಕ್ಕಳ ಶಿಕ್ಷಣ, ನೀರು, ಮತದಾನ ಹಕ್ಕು ಸೆರಿದಂತೆ ವಿವಿಧ ವಿಷಯಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಕಲಾದ ಬ್ಯಾನರ್​ ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿದೆ.

ಹೆಣ್ಣು ಮಕ್ಕಳಿಗೆ ಶಿಕ್ಷಣ, ಸಮಾನತೆ, ಕಡ್ಡಾಯವಾಗಿ ಮತದಾನ ಹಕ್ಕು ಚಲಾಯಿಸುವುದು, ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ಪಾಲಿಸುವುದು, ವರದಕ್ಷಣೆ ಪಿಡುಗು, ನೀರು, ಪರಿಸರ, ಆಹಾರ ಹಾಳು ಮಾಡದಂತೆ, ರೈತರ ಶ್ರಮಕ್ಕೆ ಬೆಲೆ ನೀಡುವುದು ಸೇರಿದಂತೆ ಒಟ್ಟು 25ಕ್ಕೂ ಅಧಿಕ ಬ್ಯಾನರ್‌ಗಳನ್ನು ಮದುವೆ ಮಂಟಪದ ಮುಖ್ಯದ್ವಾರದಲ್ಲಿ, ವೇದಿಕೆ ಮುಂದೆ, ಊಟದ ಹಾಲ್​ಗಳಲ್ಲಿ ಅಳವಡಿಸಿದ್ದ ಜಾಗೃತಿ ವಾಕ್ಯಗಳು ಎಲ್ಲರ ಗಮನ ಸೆಳೆಯುತ್ತಿದೆ.

ಹೆಣ್ಣುಮಕ್ಕಳ ಸುರಕ್ಷತೆ, ಶಿಕ್ಷಣಕ್ಕಿರಲಿ ಸದಾ ಆದ್ಯತೆ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಹೆಣ್ಣು ಮನೆಯ ನಂದಾದೀಪ, ಸಮಾಜದಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸೋಣ. ವರದಕ್ಷಿಣೆ ವ್ಯವಸ್ಥೆ ಒಂದು ಸಾಮಾಜಿಕ ಪಿಡುಗಾಗಿದ್ದು, ವರದಕ್ಷಿಣೆ ಕೊಡುವುದು ಹಾಗೂ ತೆಗೆದುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಪ್ರಕೃತಿಯನ್ನು ಉಳಿಸೋಣ ಭಾರತೀಯ ಸಂಸ್ಕೃತಿಯನ್ನು ಬೆಳೆಸೋಣ, ನೀರು ಮಿತವಾಗಿ ಬಳಸಿಕೊಂಡು ಭವಿಷ್ಯತ್ತಿನ ಒಳಿತಿಗಾಗ ಜೀವಜಲವನ್ನು ಸಂರಕ್ಷಿಸೋಣ. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು ಎಂಬ ವಾಕ್ಯಗಳು ಮದುವೆಗೆ ಆಗಮಿಸಿದ ಬಂಧು-ಮಿತ್ರರು ಮತ್ತು ಸ್ನೇಹಿತರಿಗೆ ಅರಿವು ಮೂಡಿಸುತ್ತಿದೆ.

ಮದುವೆ ಸಂಭ್ರಮದಲ್ಲಿ 50 ಜನರಿಂದ ರಕ್ತದಾನ: ಇತ್ತಿಚ್ಚೇಗೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಪಟ್ಟಣ ಶುಕ್ರವಾರ ವಿಶಿಷ್ಟ ಮದುವೆಗೆ ಸಾಕ್ಷಿಯಾಯಿತು. ಗಂಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹದಲ್ಲಿ ಸ್ವಯಂಪ್ರೇರಿತ ರಕ್ತದಾನ ನಡೆಯಿತು. ಮದುವೆಗೆ ಬಂದಿದ್ದ ಬಂಧು ಮಿತ್ರರು ಮತ್ತು ಸ್ನೇಹಿತರು ವಧುವರರಿಗೆ ಅಕ್ಷತೆ ಹಾಕಿ ರಕ್ತದಾನ ಮಾಡಿದ್ದರು. ವಿಶೇಷವಾಗಿ ಮದುಮಗ ಪ್ರವೀಣ ಖುದ್ದು ರಕ್ತದಾನ ಮಾಡಿ ವಿಭಿನ್ನವಾಗಿ ತಮ್ಮ ಮದುವೆ ಮಾಡಿಕೊಂಡಿದ್ದರು. ಮಧುಮಗಳು ಸಾವಿತ್ರಿ ಕೂಡಾ ರಕ್ತದಾನ ಮಾಡಿ ರಕ್ತದಾನದ ಮಹತ್ವವನ್ನು ಸಾರಿದ್ದರು. ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 50ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿ ಹಲವು ಜೀವಗಳ ಬದುಕಿಗೆ ನೆರವಾಗುವ ಪ್ರಯತ್ನ ನಡೆಸಿದ್ದರು.

ಇದನ್ನೂ ಓದಿ:ಮಗಳ ಮದ್ವೆ ಹೇಳಿಕೆ ಜೊತೆ ತರಕಾರಿ ಬೀಜದ ಪ್ಯಾಕೆಟ್‌; ಪೋಷಕರಿಂದ ಪರಿಸರ ಜಾಗೃತಿ ಸಂದೇಶ

Last Updated : Feb 11, 2023, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.