ETV Bharat / state

ಕಾಂಗ್ರೆಸ ಪಕ್ಷಕ್ಕೆ ಜನರ ಅಭಿವೃದ್ಧಿಗಿಂತ ಕುರ್ಚಿ ಚಿಂತೆ ಹೆಚ್ಚಾಗಿದೆ : ಗೋವಿಂದ ಕಾರಜೋಳ್​ - Govinda Karajola rant against Congress party

ಬಿಜೆಪಿಯಲ್ಲಿ ಯಾರೂ ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿಲ್ಲ ಎಂದು ಸಚಿವ ಗೋವಿಂದ ಕಾರಜೋಳ್​ ಹೇಳಿದರು.

Water Resources Minister Govinda Karajola
ಜಲ ಸಂಪನ್ಮೂಲಗಳ ಸಚಿವ ಗೋವಿಂದ ಕಾರಜೋಳ
author img

By

Published : Mar 27, 2023, 8:38 PM IST

ಕಾಂಗ್ರೆಸ್​ ಪಕ್ಷದ ವಿರುದ್ಧ ಗೋವಿಂದ ಕಾರಜೋಳ್​ ವಾಗ್ದಾಳಿ

ಬಾಗಲಕೋಟೆ : ಕಾಂಗ್ರಸ್​ ಪಕ್ಷದಲ್ಲಿ ನಾನು ಮುಖ್ಯಮಂತ್ರಿ ಆಗಬೇಕಂತ 93 ವರ್ಷದ ಶಾಮನೂರ್ ಶಿವಶಂಕರಪ್ಪ, 83 ವರ್ಷದ ಮಲ್ಲಿಕಾರ್ಜುನ ಖರ್ಗೆ,78 ವರ್ಷದ ಸಿದ್ದರಾಮಯ್ಯ ಹಾಗು ನಾನೂ ಕಾಂಗ್ರೆಸ್​ ಪಕ್ಷಕ್ಕೆ ದುಡಿದಿದ್ದೇನೆ ಎಂದು ಡಾ. ಜಿ.ಪರಮೇಶ್ವರ್​, ಜೊತೆಗೆ ಎಂ.ಬಿ. ಪಾಟೀಲರು ಎಲ್ಲರೂ ಮುಖ್ಯಮಂತ್ರಿ ಆಗಬೇಕಂತ ಕುಳಿತಿದ್ದಾರೆ. ಆದರೇ ಇವರಿಗೆ ರಾಜ್ಯಕ್ಕೆ ಏನು ಮಾಡಬೇಕು, ಜನರಿಗೆ ಏನು ಮಾಡಬೇಕು, ಯಾವ ಯಾವ ಅಭಿವೃದ್ಧಿ ಕೆಲಸ ಮಾಡಬೇಕು ಎಂಬುದು ತಿಳಿದಿಲ್ಲ. ಇವರಿಗೆ ಕೇವಲ ಕುರ್ಚಿ ಚಿಂತೆಯಾಗಿದೆ. ಆದರೇ ನಮ ಪಕ್ಷದಲ್ಲಿ ಈ ತರಹದ ಸನ್ನಿವೇಶಗಳು ಇಲ್ಲ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಕಾಂಗ್ರೆಸ್​ ನಾಯಕರ ಕುರಿತು ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ಎಲ್ಲಿ ನಿಂತರೂ ಸೋಲುತ್ತಾರೆ- ಕಾರಜೋಳ್ : ಬಾಗಲಕೋಟೆ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ 45 ವರ್ಷಗಳಿಂದ ರಾಜಕಾರಣದಲ್ಲಿದ್ದಾರೆ. ಇಂತವರಿಗೆ ಒಂದು ಸುರಕ್ಷಿತ ಕ್ಷೇತ್ರ ಸಿಗುತ್ತಿಲ್ಲ ಎಂದರೆ ಅದಕ್ಕಿಂತ ದೊಡ್ಡ ದೌರ್ಬಲ್ಯ ಬೇರೆ ಇಲ್ಲ. ಸಿದ್ದರಾಮಯ್ಯ ಚುನಾವಣೆಗೆ ಎಲ್ಲಿ ನಿಂತರೂ ಸೋಲುವುದು ಖಂಡಿತ. ನೂರಕ್ಕೆ ನೂರರಷ್ಟು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಸೋಲಿನ ಭೀತಿ ಕಾಡುತ್ತಿದೆ ಎಂದರು. ಭಾರತವನ್ನು ತುಂಡು ತುಂಡು ಮಾಡಿದವರೇ ಇಂದು ಭಾರತ್ ಜೋಡೊ ಯಾತ್ರೆ ಮಾಡುತ್ತಿದ್ದಾರೆ. ಇದೆಲ್ಲ ಹಾಸ್ಯಾಸ್ಪದವಾಗಿದ್ದು, ಮೇ ತಿಂಗಳ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಗೆಲ್ಲುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್​ನವರಿಗೆ ಹೊಟ್ಟೆಯುರಿ- ಕಾರಜೋಳ್​ ಕಿಡಿ : ಬಿಜೆಪಿ ಪಕ್ಷ ಸಾಮಾಜಿಕ ನ್ಯಾಯದಡಿ ಮೀಸಲಾತಿ ಹಂಚಿಕೆ ಮಾಡಿದೆ. ಸಂವಿಧಾನದ ಆಶಯದಡಿಯಲ್ಲಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಶಿಫಾರಸು ಮಾಡಿದ್ದಾರೆ ಎಂದು ವಿವಾದದ ಬಗ್ಗೆ ಸಚಿವ ಕಾರಜೋಳ್​ ಸ್ಪಷ್ಟಪಡಿಸಿದರು. ಇನ್ನು ಮೀಸಲಾತಿ ಹಂಚಿಕೆ ಇದೆಲ್ಲಾ ಚುನಾವಣೆಗಾಗಿ ಬಿಜೆಪಿಯವರ ಗಿಮಿಕ್ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾರಜೋಳ್​ ಅವರು, ಕಳೆದ 60 ವರ್ಷಗಳ ಕಾಲ ಅಧಿಕಾರ ಮಾಡಿದವರು ಏನೂ ಕೊಡಲಿಲ್ಲ. ಆದರೆ ನಮ್ಮ ಸಿಎಂ ಬೊಮ್ಮಾಯಿ ಅವರು ಇದನ್ನು ಮಾಡಿದ್ದಾರೆ. ಇದಕ್ಕೆ ಕಾಂಗ್ರೆಸ್​ ನವರಿಗೆ ಹೊಟ್ಟೆಉರಿಯಾಗಿ, ಭಯ ಶುರುವಾಗಿದೆ. ಚುನಾವಣೆಯಲ್ಲಿ ಕೆಳವರ್ಗದ ಜನ ನಮ್ಮನ್ನು ಕೈಬಿಡುತ್ತಾರೆ ಎಂಬ ಕಾರಣಕ್ಕೆ ಈ ರೀತಿ ಹೇಳುತ್ತಿದ್ದಾರೆ. ಮುಸ್ಲಿಂರಿಗೂ ನ್ಯಾಯಯುತವಾಗಿ ಮೀಸಲಾತಿ ನೀಡಲಾಗಿದೆ ಎಂದು ಸಚಿವರು ಹೇಳಿದರು.

ರಾಹುಲ್ ಗಾಂಧಿ ಲೋಕಸಭಾ ಸ್ಥಾನದಿಂದ ಅನರ್ಹಗೊಂಡಿರುವ ವಿಚಾರ : ನ್ಯಾಯಾಲಯದ ತೀರ್ಪಿಗೆ ಕಾಂಗ್ರೆಸ್ಸಿಗರು ಗೌರವ ಕೊಡುವದನ್ನು ಮೊದಲು ಕಲಿಯಬೇಕಾಗಿದೆ ಎಂದು ಗೋವಿಂದ ಕಾರಜೋಳ ತಿರುಗೇಟು ನೀಡಿದರು. ಇದೇ ಸಮಯದಲ್ಲಿ ವಿಜಯೇಂದ್ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಮಾತನಾಡಿ, ಅವರು ಎಲ್ಲಿ ನಿಲ್ಲಬೇಕು ಎಂದು ಹೈ ಕಮಾಂಡ್​ನವರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ : 'ನಾನು ಮತ್ತೆ ಸಿಎಂ ಆಗಿ ಕ್ಷೇತ್ರಕ್ಕೆ ಬರುತ್ತೇನೆ': ಮುಧೋಳದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.