ETV Bharat / state

ವೇದಿಕೆ ಮೇಲೆ ಎಡವಿದ ಸಿದ್ದರಾಮಯ್ಯ.. ಗಲಿಬಿಲಿಗೊಂಡ ಮಾಜಿ ಸಿಎಂ.. ವಿಡಿಯೋ - ಗಲಿಬಿಲಿಗೊಂಡ ಮಾಜಿ ಸಿಎಂ ಸಿದ್ದರಾಮಯ್ಯ

ಮುಧೋಳ ಪಟ್ಟಣಕ್ಕೆ ಆಗಮಿಸಿದ ಸಮಯದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವೇದಿಕೆ ಮೇಲೆ ಎಡವಿದರು. ಅಲ್ಲದೇ, ಇದೇ ವೇಳೆ ಕೆಲವೊಂದು ಸ್ವಾರಸ್ಯಕರ ಘಟನೆಗಳು ನಡೆದವು.

congress-leader-siddaramaiah-stumbled-on-the-stage-in-mudhol-program
ವೇದಿಕೆ ಮೇಲೆ ಎಡವಿದ ಸಿದ್ದರಾಮಯ್ಯ
author img

By

Published : Sep 27, 2022, 8:43 PM IST

ಬಾಗಲಕೋಟೆ: ಜಿಲ್ಲೆಯ ಮುಧೋಳ ಪಟ್ಟಣದ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಇಂದು ನಡೆದ ಕಾರ್ಯಕ್ರಮದ ವೇದಿಕೆ ಮೇಲೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯರು ಎಡವಿ ಬೀಳುತ್ತಿದ್ದ ಘಟನೆ ನಡೆಯಿತು. ಈ ವೇಳೆ ವೇದಿಕೆ ಮೇಲಿದ್ದ ಇತರ ನಾಯಕರು ಸಿದ್ದರಾಮಯ್ಯರನ್ನು ಕೈ ಹಿಡಿದು ತಡೆ ಹಿಡಿದರು.

ಮಾಜಿ ಸಚಿವ ಆರ್​ಬಿ ತಿಮ್ಮಾಪುರ ಅವರ 60ನೇ ಹುಟ್ಟುಹಬ್ಬದ ನಿಮಿತ್ತ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ವೇದಿಕೆಗೆ ಬರುತ್ತಿದ್ದಾಗ ಸಿದ್ದರಾಮಯ್ಯ ಏಕಾಏಕಿ ಏಕಾಏಕಿ ಎಡವಿದರು. ಇನ್ನೇನು ಕೆಳಗಡೆ ಬೀಳುತ್ತಾರೆ ಎಂಬಷ್ಟರಲ್ಲೇ ಮಾಜಿ ಸಚಿವ ವೀರಕುಮಾರ್ ಪಾಟೀಲ್ ಹಾಗೂ ವಿಧಾನ ಪರಿಷತ್​ ಸದಸ್ಯ ಪ್ರಕಾಶ ಹುಕ್ಕೇರಿ ಕೈ ಹಿಡಿದುಕೊಂಡರು.

ವೇದಿಕೆ ಮೇಲೆ ಎಡವಿದ ಸಿದ್ದರಾಮಯ್ಯ

ಈ ಘಟನೆಯಿಂದ ಒಂದು ಕ್ಷಣ ಗಲಿಬಿಲಿಗೊಂಡ ಮಾಜಿ ಸಿಎಂ ಸಿದ್ದರಾಮಯ್ಯ, ಬಳಿಕ ಸಾವರಿಸಿಕೊಂಡು ಜನರತ್ತ ಕೈಬೀಸಿದರು. ನಂತರ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಇದಾದ ಬಳಿಕ ಭಾಷಣದ ಸಮಯದಲ್ಲಿ ಅಡಚಣೆ ಉಂಟಾಯಿತು. ಕಾರ್ಯಕ್ರಮದ ಮಧ್ಯೆ ವಿದ್ಯುತ್ ಸಮಸ್ಯೆಯಿಂದ ಮೈಕ್ ಕನೆಕ್ಷನ್ ಕಟ್ ಆಗಿ ಕೆಲ ನಿಮಿಷ ಭಾಷಣ ನಿಲ್ಲಿಸಿದರು. ಕೆಲ ಸಮಯದ ಬಳಿಕ ವಿದ್ಯುತ್ ಬಂದಿದ್ದರಿಂದ ಭಾಷಣ ಪ್ರಾರಂಭಿಸಿದರು.

ಸಚಿವ ನಿರಾಣಿ ಮನೆಗೆ ಸಿದ್ದರಾಮಯ್ಯ ಭೇಟಿ: ಇದಕ್ಕೂ ಮುನ್ನ ಜಮಖಂಡಿಯಿಂದ ಹೆಲಿಕಾಪ್ಟರ್ ಮೂಲಕ ಮುಧೋಳಕ್ಕೆ ಸಿದ್ದರಾಮಯ್ಯ ಆಗಮಿಸಿದರು. ಸಚಿವ ಮುರುಗೇಶ ನಿರಾಣಿ ಮನೆಯ ಆವರಣದಲ್ಲಿರುವ ಹೆಲಿಪ್ಯಾಡ್​ನಲ್ಲಿ ಹೆಲಿಕಾಪ್ಟರ್ ಬಂದಿಳಿತು. ಆಗ ಸಚಿವ ನಿರಾಣಿ ಮನೆಗೂ ಸಿದ್ದರಾಮಯ್ಯ ಭೇಟಿ ನೀಡಿರುವುದು ಚರ್ಚೆ ಗ್ರಾಸವಾಗಿದೆ.

ಸಿದ್ದರಾಮಯ್ಯರನ್ನು ಸಚಿವ ನಿರಾಣಿ ಸಹೋದರ ಸಂಗಮೇಶ ನಿರಾಣಿ ಅವರು ಬರಮಾಡಿಕೊಂಡರು. ನಿರಾಣಿ ಮನೆಯಲ್ಲಿ ಚಹಾ ಕುಡಿದು ಕೆಲ ಹೊತ್ತು ಸಿದ್ದರಾಮಯ್ಯ ಮಾತುಕತೆ ನಡೆಸಿದರು. ಆದರೆ, ಏಕಾಏಕಿ ಸಂಗಮೇಶ ನಿರಾಣಿ ಭೇಟಿಯಾಗಿರುವುದು ಅಚ್ಚರಿ ಮೂಡಿಸಿದೆ.

2018ರಲ್ಲಿ ಬಿಜೆಪಿ ಟಿಕೆಟ್ ಸಿಗದೇ ಜಮಖಂಡಿಯಿಂದ ಪಕ್ಷೇತರರಾಗಿ ಸ್ಫರ್ಧಿಸಿದ್ದ ಸಂಗಮೇಶ ನಿರಾಣಿ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆಯೇ ಸಿದ್ದರಾಮಯ್ಯ ಭೇಟಿ ಮಾಡಿದ್ದು, ಸಂಗಮೇಶ ನಿರಾಣಿ ಕಾಂಗ್ರೆಸ್ ಸೇರಿ ತೇರದಾಳ ಮತಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆಂಬ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ಬೊಮ್ಮಾಯಿ ಇಸ್ ಹೆಡ್ ಆಫ್ ದಿ ಗವರ್ನಮೆಂಟ್.. ಜಾತಿಗೂ ಭ್ರಷ್ಟಾಚಾರಕ್ಕೂ ಏನು ಸಂಬಂಧ: ಸಿದ್ದರಾಮಯ್ಯ ವಾಗ್ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.