ETV Bharat / state

ಉಸ್ತುವಾರಿ ಬದಲಾವಣೆ: ರಾಜಕೀಯ ವೈಮನಸ್ಸಿಗೆ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾದ್ರಾ ಸಿಎಂ?

ಬಾಗಲಕೋಟೆ ಉಸ್ತುವಾರಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರಿಗೆ ಬೆಳಗಾವಿ ಉಸ್ತುವಾರಿ ನೀಡಿ, ಉಮೇಶ ಕತ್ತಿ ಅವರಿಗೆ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ನೀಡಿದ್ದಾರೆ. ಈ ಮೂಲಕ ಯಡಿಯೂರಪ್ಪನವರು ಕೊರೊನಾ ರೋಗ ಹತೋಟಿಯ ಜೊತೆಗೆ ರಾಜಕೀಯ ಅಸಮಾಧಾನ, ತಿಕ್ಕಾಟ ಹಾಗೂ ವೈಮನಸ್ಸು ಹೋಗಲಾಡಿಸಲು ತೇಪೆ ಹಚ್ಚುವ ಕಾರ್ಯ ನಡೆಸಿರುವಂತೆ ಕಾಣುತ್ತಿದೆ.

karnataka
ಉಸ್ತುವಾರಿ ಬದಲಾವಣೆ
author img

By

Published : May 5, 2021, 10:33 AM IST

ಬಾಗಲಕೋಟೆ: ಕೊರೊನಾ ಎರಡನೇ ಅಲೆಯ ಭೀಕರತೆಯ ಮಧ್ಯೆಯು ಮುಖ್ಯಮಂತ್ರಿ ಯಡಿಯೂರಪ್ಪನವರು ಜಿಲ್ಲಾ ಉಸ್ತುವಾರಿ ಬದಲಾವಣೆ ಮಾಡಿ ಕೊರೊನಾ ಹತೋಟಿಯ ಜೊತೆಗೆ ರಾಜಕೀಯ ಅಸಮಾಧಾನ, ತಿಕ್ಕಾಟ ಹಾಗೂ ವೈಮನಸ್ಸು ಹೋಗಲಾಡಿಸಲು ತೇಪೆ ಹಚ್ಚುವ ಕಾರ್ಯ ನಡೆಸಿರುವಂತೆ ಕಾಣುತ್ತಿದೆ.

ಬಾಗಲಕೋಟೆ ಉಸ್ತುವಾರಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರಿಗೆ ಬೆಳಗಾವಿ ಉಸ್ತುವಾರಿ ನೀಡಿ, ಉಮೇಶ್ ಕತ್ತಿ ಅವರಿಗೆ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ನೀಡಿದ್ದಾರೆ. ಬೆಳಗಾವಿ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವು 3 ಲಕ್ಷದಿಂದ‌ 3 ಸಾವಿರದ ಅಂತರ ಏಕೆ ಆಯಿತು ಎಂದು ತಿಳಿದ ನಂತರ ಯಡಿಯೂರಪ್ಪನವರು ಉಸ್ತುವಾರಿ ಬದಲಾವಣೆ ಮಾಡಿದ್ದಾರೆ.

ಉಮೇಶ್ ಕತ್ತಿ ಅವರು ಆಹಾರ ಇಲಾಖೆ ಸಚಿವರಾದ ಬಳಿಕ ವಿವಾದಿತ ಹೇಳಿಕೆ ನೀಡುವ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದರು. ಇದರ ಜೊತೆಗೆ ಬೆಳಗಾವಿ‌ ಜಿಲ್ಲಾ ರಾಜಕೀಯದಲ್ಲಿ ಬಿಜೆಪಿ ಪಕ್ಷದ ಮುಖಂಡರ ಮಧ್ಯೆ ಹೊಂದಾಣಿಕೆ ಇಲ್ಲದೆ, ಪಕ್ಷಕ್ಕೆ ಹೊಡೆತ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅದಕ್ಕೆ ತೇಪೆ ಹಚ್ಚುವ ಕಾರ್ಯಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳಗೆ ಜವಾಬ್ದಾರಿ ಹೊರಿಸಿದ್ದಾರೆ.

ಕಾರಜೋಳ ಅವರು ಮುತ್ಸದ್ಧಿ ರಾಜಕಾರಣಿ, ವಿರೋಧ ಪಕ್ಷದವರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡು ಯಾವಾಗಲೂ ರಾಜಕೀಯ ಚತುರ ನಡೆಯ ಮೂಲಕ ತಮ್ಮ ರಾಜಕೀಯ ದಾಳ ಉರುಳಿಸುತ್ತಾರೆ. ಇಂತಹ ಮುತ್ಸದ್ದಿ ರಾಜಕಾರಣಿ ಮೂಲಕ ಬೆಳೆಗಾವಿ ಜಿಲ್ಲೆಯ ಒಳಜಗಳ ಶಮನ ಮಾಡಲು ಅಥವಾ ಹೊಂದಾಣಿಕೆ ಮಾಡಿಸಲು ಬಾಗಲಕೋಟೆಯಿಂದ ಬೆಳಗಾವಿ ಜಿಲ್ಲೆಗೆ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ಇನ್ನು ಉಮೇಶ ಕತ್ತಿ ಅವರಿಗೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ನೀಡಿರುವುದು ಹೆಸರಿಗೆ ಮಾತ್ರ ಆಗಲಿದೆ. ಏಕೆಂದರೆ ಗೋವಿಂದ ಕಾರಜೋಳ ಅವರ ಕ್ಷೇತ್ರ ಮುಧೋಳ ಆಗಿರುವುದರಿಂದ ಕ್ಷೇತ್ರದ ಬಗ್ಗೆ ಅಭಿಮಾನ ಹಾಗೂ ಅಭಿವೃದ್ಧಿ ಬಗ್ಗೆ ಚಿಂತೆ ಇರುವುದು ಸಹಜ. ಅವರು ಉಪಮುಖ್ಯಮಂತ್ರಿ ಆಗಿರುವುದರಿಂದ ಆಗಾಗ ಬಂದು, ಜಿಲ್ಲೆಯ ‌ಅಭಿವೃದ್ಧಿ ಹಾಗೂ ಲೋಕೋಪಯೋಗಿ ಇಲಾಖೆ ಅಭಿವೃದ್ಧಿ ಬಗ್ಗೆ ಅಧಿಕಾರಿಗೊಂದಿಗೆ ಸಭೆ ನಡೆಸಬಹುದು. ಈ ಮೂಲಕ ಜಿಲ್ಲೆ ಮೇಲೆ ಹತೋಟಿ ಇಟ್ಟಕೊಳ್ಳುತ್ತಾರೆ.

ಬೀಳಗಿ ಮತಕ್ಷೇತ್ರದ ಶಾಸಕ, ಸಚಿವರಾಗಿರುವ ಮುರುಗೇಶ್​​ ನಿರಾಣಿ ಅವರನ್ನು ಬಿಟ್ಟು, ಉಮೇಶ ಕತ್ತಿಗೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ನೀಡಿರುವುದು ಚರ್ಚೆಯ ವಿಷಯವಾಗಿದೆ. ಏಕೆಂದರೆ ಮುರುಗೇಶ್​ ನಿರಾಣಿ ಹಾಗೂ ಗೋವಿಂದ ಕಾರಜೋಳ ಮಧ್ಯೆ ಹೆಚ್ಚು ಬಾಂಧವ್ಯ ಇಲ್ಲ. ಒಳಗೊಳಗೆ ವೈಮನಸ್ಸು ಇದ್ದು, ಬಹಿರಂಗವಾಗಿ ತೋರ್ಪಡಿಸಿಕೊಳ್ಳುವುದಿಲ್ಲ. ಹೀಗಾಗಿ ಮುರುಗೇಶ್ ನಿರಾಣಿ ಅವರಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ನೀಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ಮುರುಗೇಶ್ ನಿರಾಣಿಗಿಂತ ಗೋವಿಂದ ಕಾರಜೋಳ ಅವರಿಗೆ ಮಹತ್ವ ನೀಡುತ್ತಾರೆ. ಕಾರಜೋಳ ಅವರು ಯಾವಾಗಲೂ ವಿವಾದ ಇಲ್ಲದೆ, ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಹಾಗೂ ಪಕ್ಷದ ವರ್ಚಸ್ಸು ಹೆಚ್ಚಿಸುವಂತಹ ಕೆಲಸ ಮಾಡಿದ್ದಾರೆ. ಹೀಗಾಗಿ ಕಾರಜೋಳ ಅವರ ಮೇಲೆ ಹೆಚ್ಚು ನಂಬಿಕೆ. ಈಗಿನ ಯಡಿಯೂರಪ್ಪನವರ ಸರ್ಕಾರದಲ್ಲಿ ಮುಖ್ಯಮಂತ್ರಿ ಬಳಿಕ ಎರಡನೇಯ ಸ್ಥಾನದಲ್ಲಿಯೇ ಇರುವುವರು ಅಂದರೆ ಗೋವಿಂದ ಕಾರಜೋಳ. ಈ ಹಿನ್ನೆಲೆ ಬೆಳಗಾವಿ ರಾಜಕೀಯದಲ್ಲಿ ತೇಪೆ ಹಚ್ಚಿ ಎಲ್ಲವೂ ಸರಿದೂಗಿಸುವ ಕೆಲಸ ಮಾಡುತ್ತಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರು‌ ಹಾಗೂ ಕಾರಜೋಳ‌ ಅವರು ಇಬ್ಬರೇ ಚರ್ಚೆ ಮಾಡಿ, ಕೆಲವೊಂದು ಒಳ ತಂತ್ರ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಎಲ್ಲವೂ ಇವರ ಅಣತಿಯಂತೆ ನಡೆಯಬೇಕು. ಉಮೇಶ್​ ಕತ್ತಿ ಉಸ್ತುವಾರಿ ಆದರೂ ಕೆಲವೊಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದು ಕಾರಜೋಳ ಅವರೇ. ನಿರಾಣಿ ಅವರಿಗೆ ಕಲಬುರಗಿ ಮತ್ತು ಉಮೇಶ್​ ಕತ್ತಿ ಅವರಿಗೆ ಬಾಗಲಕೋಟೆ ‌ಜಿಲ್ಲೆಯ ಉಸ್ತುವಾರಿ ಕೊಡುವಂತೆ ಮೊದಲೇ ಮಾತುಕತೆ ಆಗಿತ್ತು.

ಆ ಮೂಲಕ ಕೊರೊನಾ ವಿರುದ್ಧ ಹೋರಾಟದ ಜೊತೆಗೆ ರಾಜಕೀಯ ಒಳತಂತ್ರ ಮಾಡಿದ್ದು, ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯುವ ತಂತ್ರ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಇದು ಹೇಗೆ ಆಡಳಿತದಲ್ಲಿ ಯಶಸ್ಸು ಕಾಣಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.