ಬಾಗಲಕೋಟೆ: ಮುಧೋಳ ತಾಲೂಕಿನ ವೆಂಕಟಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ಮೂಲಕ ಮಕ್ಕಳಿಗೆ ಭಾರತೀಯ ಸಂಪ್ರದಾಯದ ಬಗ್ಗೆ ತಿಳವಳಿಕೆ ಮೂಡಿಸಲಾಯಿತು.
ಶಿಕ್ಷಕ ರಾಜಶೇಖರ ಮುತ್ತಿನಮಠ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಗ್ರಾಮೀಣ ಸಂಪ್ರದಾಯದ ಉಡುಗೆ ತೊಟ್ಟು ಗಮನ ಸೆಳೆದರು.
ತಲೆಗೆ ರುಮಾಲು ಸುತ್ತಿಕೊಡು, ಬಿಳಿ ಶಟ್೯, ಧೋತರ ಹಾಕಿಕೊಂಡು ಬಾಲಕರು ಆಕರ್ಷಿಸಿದರು. ಬಾಲಕಿಯರು ಬಣ್ಣ-ಬಣ್ಣದ ಸೀರೆಯನ್ನು ತೊಟ್ಟು ಮಿಂಚಿದರು.