ಬಾಗಲಕೋಟೆ: ಇಲ್ಲಿನ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಸಿ ಟ್ರಸ್ಟ್, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ವಿವಿಧ ಸಂಸ್ಥೆಗಳ ಸಂಯೋಜನೆಯಲ್ಲಿ ನವನಗರದ ನೀಲಕಂಠೇಶ್ವರ ಸಾಂಸ್ಕೃತಿಕ ಭವನದಲ್ಲಿ 1340ನೇ ಮದ್ಯವರ್ಜನ ಶಿಬಿರ ನಡೆಯಿತು.
ಜಿಲ್ಲೆಯ ವಿವಿಧ ಪ್ರದೇಶಗಳಿಂದ ಆಗಮಿಸಿದ ಸುಮಾರು 80ಕ್ಕೂ ಅಧಿಕ ಮದ್ಯವ್ಯಸನ ಶಿಬಿರಾರ್ಥಿಗಳಿಗೆ ಒಂದು ವಾರ ಕಾಲ ತರಬೇತಿ ನೀಡಲಾಗಿಯಿತು. ಬೆಳ್ಳಗೆ 5 ಗಂಟೆಯಿಂದ ರಾತ್ರಿಯವರೆಗೆ ಶಿಬಿರವನ್ನು ನಡೆಸಲಾಯಿತು. ವ್ಯಾಯಾಮ, ಯೋಗ, ವಠಾರ ಸ್ವಚ್ಛತೆ, ಶ್ರಮದಾನ, ಸಂಪನ್ಮೂಲ ವ್ಯಕ್ತಿಗಳ ಮಾಹಿತಿ ಹಾಗೂ ಕೌಟುಂಬಿಕ ಸಲಹೆ ಸೇರಿದಂತೆ ಕೆಲ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವ್ಯಸನ ಮುಕ್ತರಾಗಲು ಶಿಬಿರಾರ್ಥಿಗಳಿಗೆ ಬೋಧಿಸಲಾಯಿತು.
ಕೊನೆಯ ದಿನದ ಧರ್ಮಸ್ಥಳದ ಮಂಜುನಾಥ ದೇವರ ಮಂಗಳೋತ್ಸವ ಕಾರ್ಯಕ್ರಮ ಹಾಗೂ ಶಿಬಿರಾಗ್ನಿ ಸಮಾರಂಭ ಗಮನ ಸೆಳೆಯಿತು. ಮದ್ಯ ವ್ಯಸನ ಶಿಬಿರಾರ್ಥಿಗಳಿಗೆ ಮಂಜುನಾಥ ದೇವರು ಭಾವಚಿತ್ರವನ್ನು ಇಟ್ಟು ಅಲಂಕಾರ ಮಾಡಿ, ಪೂಜೆ ಪುರಸ್ಕಾರವನ್ನು ನೆರವೇರಿಸುವ ಜೊತೆಗೆ ಓಂಕಾರ, ಪ್ರಾರ್ಥನೆ ಸಲ್ಲಿಸುವ ಮೂಲಕ ನೂತನ ಜೀವನದ ಮಾರ್ಗದರ್ಶನ ನೀಡಲಾಯಿತು.
ಶಿಬಿರಾಗ್ನಿ ಎಂದು ಸರಾಯಿ,ತಂಬಾಕು,ಸಿಗರೇಟು, ಗುಟಕಾದಿಂದ ಮಾಡಿದ್ದ ಕೃತಕ ಗೊಂಬೆಯನ್ನು ಇಟ್ಟು ಸುತ್ತಲೂ ಬೆಂಕಿಯ ಜ್ವಾಲೆಯಲ್ಲಿ ಹಿಡಿದು ಸುತ್ತು ಹಾಕುವ ಮೂಲಕ ತಮ್ಮಲ್ಲಿನ ದುಶ್ಚಟವನ್ನು ಬೆಂಕಿಯಿಂದ ಸುಟ್ಟ ಹೂಸ ಜೀವನ ಪ್ರಾರಂಭಿಸುವುದಾಗಿ ಶಪಥ ಮಾಡಲಾಗುತ್ತದೆ. ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಸದಸ್ಯರು ಸೇರಿದಂತೆ ಶಿಬಿರಾರ್ಥಗಳು ಕುಣಿದು ಕುಪ್ಪಳಿಸಿ ಎಲ್ಲ ನೋವು ಮೆರೆತು ಹೂಸ ಜೀವನ ಪ್ರಾರಂಭಿಸಿಲು ಸಜ್ಜಾಗುತ್ತಾರೆ.