ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಮೇಘ ಮೈತ್ರಿ ಕನ್ನಡ ಮತ್ತು ಸಾಹಿತ್ಯ ವೇದಿಕೆ ವತಿಯಿಂದ ಸಾಧಕರಿಗೆ ಮೇಘ ಮೈತ್ರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
![ಜಾನಪದ ಅಕಾಡಮಿ ಅಧ್ಯಕ್ಷ ಜೋಗತಿ ಮಂಜಮ್ಮ](https://etvbharatimages.akamaized.net/etvbharat/prod-images/kn-bgk-01-kannada-av-1-ka10036_04012021125720_0401f_1609745240_857.jpg)
ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೆಂಕಟೇಶ ಇನಾಂದಾರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗರ ಮೇಘ ಮೈತ್ರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹಿರಿಯ ರಂಗಭೂಮಿ ಕಲಾವಿದರು ಹಾಗೂ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಾತಾ ಮಂಜಮ್ಮ ಜೋಗುತಿ, ಹಿರಿಯ ರಂಗಭೂಮಿ ಕಲಾವಿದರು ಹಾಗೂ ಖ್ಯಾತ ಚಲನಚಿತ್ರ ಹಾಸ್ಯ ನಟರಾದ ವೈಜನಾಥ ಬಿರಾದಾರ, ಖ್ಯಾತ ಗಜಲ್ ಕವಿ ಅಲ್ಲಾಗಿರಿರಾಜ ಕನಕಗಿರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
![ಸಾಧಕರಿಗೆ ಮೇಘ ಮೈತ್ರಿ ಪ್ರಶಸ್ತಿ ಪ್ರದಾನ](https://etvbharatimages.akamaized.net/etvbharat/prod-images/kn-bgk-01-kannada-av-1-ka10036_04012021125720_0401f_1609745240_931.jpg)
ಓದಿ:ತರಕಾರಿಗಳ ರಫ್ತು ಪ್ರಮಾಣ ಶೇ 20ಕ್ಕೆ ಹೆಚ್ಚಿಸುವ ಗುರಿ; ಸಚಿವ ಡಾ. ಕೆ.ಸಿ. ನಾರಾಯಣಗೌಡ
ಈ ಸಂದರ್ಭದಲ್ಲಿ ಜಾನಪದ ಅಕಾಡಮಿ ಅಧ್ಯಕ್ಷ ಜೋಗತಿ ಮಂಜಮ್ಮ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಸಾಹಿತ್ಯವನ್ನು ಬೆಳೆಸುವ ಕಾರ್ಯ ಆಗಬೇಕಾಗಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಂತಹವರನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದ್ದು, ಈ ಮೂಲಕ ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಬೆಳೆಸಬೇಕಾಗಿದೆ ಎಂದು ಕರೆ ನೀಡಿದರು.