ETV Bharat / state

ಬಾಗಲಕೋಟೆಯಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ

ಬಾಗಲಕೋಟೆ ತೋಟಗಾರಿಕ ವಿವಿಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಾಳೆ ಮತ ಎಣಿಕೆ ಕಾರ್ಯ ನಡೆಯಲಿರುವ ಕಾರಣ ಸೀಮಿಕೇರಿಯಿಂದ ತೇಜಸ್ ಇಂಟರ್​ನ್ಯಾಷನಲ್ ಸ್ಕೂಲ್​ವರೆಗೆ ಸಾರ್ವಜನಿಕ ಸಂಚಾರ ಬಂದ್ ಇರಲಿದೆ.

author img

By

Published : May 12, 2023, 10:04 PM IST

bagalkot-vote-counting-at-the-university-of-horticultural-sciences
ಪಿ.ಸುನೀಲ್‍ ಕುಮಾರ
ಮತ ಎಣಿಕೆ ಸಿದ್ಧಗೊಂಡಿರುವ ತೋಟಗಾರಿಕೆ ವಿವಿ

ಬಾಗಲಕೋಟೆ: ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಎಲ್ಲ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆಯು ನಾಳೆ ಇಲ್ಲಿನ ತೋಟಗಾರಿಕೆ ವಿವಿಯಲ್ಲಿ ಬೆಳಗ್ಗೆ 8 ರಿಂದ ಪ್ರಾರಂಭಗೊಳ್ಳಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪಿ. ಸುನೀಲ್‍ ಕುಮಾರ ತಿಳಿಸಿದ್ದಾರೆ.

ಮತ ಎಣಿಕೆಯು ಬೆಳಗ್ಗೆ 8 ಗಂಟೆಗೆ ಪ್ರಾರಂಭ ಆಗುವದರಿಂದ ಅಭ್ಯರ್ಥಿಗಳು, ಚುನಾವಣಾ ಏಜೆಂಟರು ಹಾಗೂ ಮತ ಎಣಿಕೆ ಏಜೆಂಟರುಗಳು ನಾಳೆ ಬೆಳಿಗ್ಗೆ 7 ಗಂಟೆಗೆ ಎಣಿಕೆ ಕೇಂದ್ರಗಳಲ್ಲಿ ಹಾಜರಿರಬೇಕು. ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ ತಲಾ ಒಂದು ಭದ್ರತಾ ಕೊಠಡಿ ಹಾಗೂ ಒಂದು ಮತ ಎಣಿಕೆ ಕೊಠಡಿ ಮಾಡಲಾಗಿದೆ. ನೆಲ ಮಹಡಿಯಲ್ಲಿ ಮುಧೋಳ ಮೀಸಲು ಕ್ಷೇತ್ರ, ತೇರದಾಳ, ಜಮಖಂಡಿ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಡಿಸಿ ಮಾಹಿತಿ ನೀಡಿದರು.

ತೋಟಗಾರಿಕೆ ವಿವಿಯ ಮೊದಲನೇ ಮಹಡಿಯಲ್ಲಿ ಬೀಳಗಿ, ಬಾದಾಮಿ, ಬಾಗಲಕೋಟೆ ಹಾಗೂ ಹುನಗುಂದ ಮತಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಅಂಚೆ ಮತಪತ್ರಗಳ ಎಣಿಕೆಯು ಪ್ರತ್ಯೇಕ ಕೊಠಡಿಗಳಲ್ಲಿ ಜರುಗಲಿದ್ದು, ಎಣಿಕೆಗೆ 4 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತಕ್ಷೇತ್ರಕ್ಕೆ ಇವಿಎಂ ಮತ ಎಣಿಕೆಗೆ 14 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ ತಲಾ ಒಬ್ಬರು ಎಣಿಕೆ ಮೇಲ್ವಿಚಾರಕ, ಎಣಿಕೆ ಸಹಾಯಕ ಹಾಗೂ ಮೈಕ್ರೋ ವೀಕ್ಷಕನನ್ನು ನೇಮಕ ಮಾಡಲಾಗಿದೆ. ಪ್ರತಿ ಟೇಬಲ್‍ಗೆ ಓರ್ವ ಸಹಾಯಕ ಚುನಾವಣಾಧಿಕಾರಿಗಳು ನೇಮಿಸಲಾಗಿದೆ ಎಂದರು.

ಸೇವಾ ಮತದಾರರಿಂದ ಸ್ವೀಕರಿಸಲ್ಪಡುವ ಅಂಚೆ ಮತಪತ್ರಗಳ ಎಣಿಕೆಗೆ ಪ್ರತಿ ಮತಕ್ಷೇತ್ರಕ್ಕೆ 4 ಸ್ಕ್ಯಾನರ್, 8 ಸ್ಕ್ಯಾನಿಂಗ್ ಅಸಿಸ್ಟಂಟ್ ಹಾಗೂ ಒಬ್ಬ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿದೆ. ಒಟ್ಟಾರೆ ಎಣಿಕೆ ಕಾರ್ಯಕ್ಕೆ ಕಾಯ್ದಿಟ್ಟ ಸಿಬ್ಬಂದಿ ಸೇರಿದಂತೆ 636 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಮತ ಎಣಿಕೆಗೆ ಓರ್ವ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, 5 ಮಂದಿ ಡಿಎಸ್‍ಪಿ, 11 ಸಿಪಿಐ, 28 ಪಿಎಸ್‍ಐ, 57 ಎಎಸ್‍ಐ, 134 ಹೆಡ್ ಕಾನ್ಸ್​ಟೇಬಲ್, 249 ಪೊಲೀಸ್ ಕಾನ್ಸ್​ಟೇಬಲ್, 25 ಡಬ್ಲೂಪಿಸಿ, 3 ಮಂದಿ ಕೆಎಸ್​ಆರ್​ಪಿ, 4 ಮಂದಿ ಡಿಎಆರ್ ಹಾಗೂ 150 ಹೋಮ್ ಗಾರ್ಡ್​​ ನಿಯೋಜನೆ ಮಾಡಲಾಗಿದೆ.

ರಸ್ತೆ ಮಾರ್ಗ ಬದಲಾವಣೆ: ನಾಳೆ (ಮೇ 13) ಬಾಗಲಕೋಟೆ ತೋಟಗಾರಿಕ ವಿಶ್ವವಿದ್ಯಾಲಯದ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳ ಎಣಿಕೆ ಕಾರ್ಯ ಜರುಗಲಿದೆ. ಈ ಕಾರಣ ಸೀಮಿಕೇರಿಯಿಂದ ನವನಗರ ಕಡೆಗೆ ಬರುವ ರಸ್ತೆಯು ಸೀಮಿಕೇರಿಯಿಂದ ತೇಜಸ್ ಇಂಟರನ್ಯಾಷನಲ್ ಸ್ಕೂಲ್​ವರೆಗೆ ಬಂದ್ ಇರುತ್ತದೆ. ಚುನಾವಣೆಯ ಮತ ಎಣಿಕೆಗೆ ಬರುವ ವಾಹನಗಳನ್ನು ಹೊರತುಪಡಿಸಿ ಸಾರ್ವಜನಿಕ ವಾಹನಗಳಿಗೆ ಸೀಮಿಕೇರಿಯಿಂದ ತೇಜಸ್ ಇಂಟರ್​ನ್ಯಾಷನಲ್ ಸ್ಕೂಲ್​ವರೆಗೆ ಪ್ರವೇಶ ನಿರ್ಬಂಧವಿರಲಿದೆ. ಹಿಗಾಗಿ ಪರ್ಯಾಯ ಮಾರ್ಗವಾಗಿ ಬಾಗಲಕೋಟೆ ನಗರಕ್ಕೆ ಬರುವ ಸಾರ್ವಜನಿಕರು ಗದ್ದನಕೇರಿಯಿಂದ ವಿದ್ಯಾಗಿರಿಗೆ ಹೋಗುವ ಮಾರ್ಗವನ್ನು ಉಪಯೋಗಿಸಲು ವಿನಂತಿಸಲಾಗಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ : ಡಿಸಿ ಡಾ ಕೆ ವಿ ರಾಜೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.