ಬಾಗಲಕೋಟೆ : ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿರುವ ವಿಚಾರವನ್ನು ಕೊರೊನಾ ಶಂಕಿತ ವ್ಯಕ್ತಿಯೊಬ್ಬರು ತನ್ನ ಹೆಂಡತಿಗೆ ವಿಡಿಯೊ ಕರೆ ಮೂಲಕ ತಿಳಿಸಿದ್ದಾರೆ.
ಕೊರೊನಾ ಶಂಕಿತ ಮುಧೋಳ ಕೆಎಸ್ಆರ್ಟಿಸಿ ಡಿಪೋ ಕಂಡಕ್ಟರ್ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದು, ತಮ್ಮ ಪತ್ನಿ ಶಾಂತಾಬಾಯಿಗೆ ಕರೆ ಮಾಡುವ ಮೂಲಕ ಆಸ್ಪತ್ರೆಯ ಅವ್ಯವಸ್ಥೆಯನ್ನು ತೋರಿಸಿದ್ದಾರೆ. ಅಲ್ಲದೆ ತೀವ್ರ ಉಸಿರಾಟ ತೊಂದರೆಯಿಂದ ಮಾತನಾಡಲಾಗದೆ ಕಣ್ಣೀರಿಡುತ್ತಿರುವ ದೃಶ್ಯವನ್ನು ಕಂಡು ಪತ್ನಿ ಭಯಭೀತರಾಗಿದ್ದಾರೆ.
ಅಲ್ಲದೆ ಆಸ್ಪತ್ರೆಗೆ ದಾಖಲಾಗಿ ಐದು ದಿನಗಳಾದರೂ, ಇನ್ನೂ ಕೊರೊನಾ ವರದಿ ಬಂದಿಲ್ಲ ಎಂಬುದೇ ಆಶ್ಚರ್ಯ ಮೂಡಿಸಿದೆ. ಉಸಿರಾಟ ತೊಂದರೆ ಇದ್ರೂ ವೆಂಟಿಲೇಟರ್, ಆಕ್ಸಿಜನ್ ನೀಡದಿರುವುದು ಆತಂಕಕ್ಕೆ ಕಾರಣವಾಗಿದೆ. ಅದಕ್ಕಾಗಿ ತಮ್ಮ ಪತಿಯ ಪ್ರಾಣ ಉಳಿಸಿಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.