ETV Bharat / state

ಬಡತನದಲ್ಲಿ ಅರಳಿದ ಪ್ರತಿಭೆ.. ಏಷ್ಯನ್ ಚಾಂಪಿಯನ್​ಶಿಪ್​ ಚಿನ್ನ ಗೆದ್ದ ಬಾಗಲಕೋಟೆ ಯುವಕ - ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ನಿಂಗಪ್ಪ

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ನಿಂಗಪ್ಪ ಎಂಬುವರು ಕಿರ್ಗಿಸ್ತಾನ್ ದೇಶದಲ್ಲಿ ನಡೆದ ಏಷ್ಯನ್ ಅಂಡರ್-17 ಕುಸ್ತಿ ಚಾಂಪಿಯನ್‌ಶಿಪ್​ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

Bagalakote man win gold medal
ಚಿನ್ನದ ಪದಕ ಗೆದ್ದ ಬಾಗಲಕೋಟೆಯ ಯುವಕ
author img

By

Published : Jun 24, 2022, 6:22 PM IST

Updated : Jun 25, 2022, 5:30 PM IST

ಬಾಗಲಕೋಟೆ: ಏಷ್ಯನ್ ಅಂಡರ್-17 ಚಾಂಪಿಯನ್‌ಶಿಪ್‌ ಕುಸ್ತಿಯಲ್ಲಿ ಜಿಲ್ಲೆಯ ಮುಧೋಳ ತಾಲೂಕಿನ ಕುಸ್ತಿಪಟು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದು, ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಜಿಲ್ಲೆಯ ಮುಧೋಳ ನಗರದ ನಿಂಗಪ್ಪ ಗೆನನ್ನವರ 45 ಕೆಜಿ ವಿಭಾಗದ ಕುಸ್ತಿಯಲ್ಲಿ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ.

ಕಿರ್ಗಿಸ್ತಾನ್​​ದಲ್ಲಿ ಗುರುವಾರ ನಡೆದ ಕುಸ್ತಿ ಚಾಂಪಿಯನ್ ಶಿಪ್​ನಲ್ಲಿ ಗೆದ್ದ ಯುವ ಕುಸ್ತಿಪಟು ಬಾಗಲಕೋಟೆ ಜಿಲ್ಲೆಯು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದ್ದಾರೆ. 45 ಕೆಜಿ ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ಇರಾನ್‌ನ ಅಮೀರ್‌ಮೊಹಮ್ಮದ್ ಸಲೇಹ್ ಅವರನ್ನು ಸೋಲಿಸಿದ ನಿಂಗಪ್ಪ, ಬಲವಾದ ರಕ್ಷಣಾತ್ಮಕ ಮತ್ತು ಶಕ್ತಿಯುತ ಲೆಗ್ ಅಟ್ಯಾಕ್​ಗೆ ಹೆಸರಾಗಿದ್ದಾರೆ.

asian-championship-bagalakote-man-win-gold-medal
ಚಿನ್ನದ ಪದಕ ಗೆದ್ದ ನಿಂಗಪ್ಪ

ಕುಸ್ತಿಯಲ್ಲಿ ಚಿನ್ನ ಗೆದ್ದಿರುವ ನಿಂಗಪ್ಪನವರ ಸಾಧನೆ ಇತರ ಕ್ರೀಡಾಪಟುಗಳಿಗೆ ಮಾದರಿಯಾಗಿದೆ. ನಿಂಗಪ್ಪನವರು ಬಡ ಕುಟುಂಬದಲ್ಲಿ ಹುಟ್ಟಿಬೆಳೆದಿದ್ದು, ಅವಿರತ ಶ್ರಮದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಇವರ ತಂದೆ-ತಾಯಿ ನಿತ್ಯ ಜೀವನಕ್ಕಾಗಿ ಕೂಲಿ ಮಾಡುತ್ತಿದ್ದಾರೆ. ಕುಸ್ತಿಪಟುವಿನ ಚಿನ್ನದ ಸಾಧನೆಗೆ ಮುಧೋಳ ನಗರದಲ್ಲಿ ಕುಟುಂಬಸ್ಥರ ಹಿತೈಷಿಗಳು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ನಿಂಗಪ್ಪನ ಪೋಷಕರನ್ನು ಸ್ಥಳೀಯರು ಸನ್ಮಾನಿಸಿದ್ದು, ಮಗನ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಬಡತನದಲ್ಲಿ ಬೆಳೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿಪಟುವಾಗಿ ಮಿಂಚಿರುವ ರೈತನ ಮಗ ಎಂಬ ಹೆಗ್ಗಳಿಕೆ ನಿಂಗಪ್ಪರದ್ದಾಗಿದೆ. ಕ್ರೀಡೆಯಲ್ಲಿ ಇನ್ನೂ ಹೆಚ್ಚಿನ ಸ್ಥಾನಮಾನ ಪಡೆದುಕೊಳ್ಳುವಂತಾಗಲಿ ಎಂದು ಸ್ಥಳೀಯರು ಹಾರೈಸಿದ್ದಾರೆ.

ನಿಂಗಪ್ಪನ ಪೋಷಕರಿಗೆ ಸನ್ಮಾನ

ನಿಂಗಪ್ಪ ಮುಧೋಳ ಪಟ್ಟಣದ ಜೈ ಹನುಮಂತ ಶಾಲೆಯ ಕುಸ್ತಿಗರಡಿಯಲ್ಲಿ ತರಬೇತಿ ಪಡೆದುಕೊಂಡಿದ್ದರು. ಅವರ ಸಾಧನೆಗೆ ಮುಧೋಳ ಮತಕ್ಷೇತ್ರದ ಶಾಸಕರು ಆd ಸಚಿವ ಗೋವಿಂದ ಕಾರಜೋಳ ಸೇರಿದಂತೆ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಕೊಡಗು : ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಹಿಂಡು, ಬೆಚ್ಚಿದ ಜನರು

Last Updated : Jun 25, 2022, 5:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.