ETV Bharat / state

ರಾಜ್ಯದಲ್ಲಿ ಕೊರೊನಾಗೆ ಮತ್ತೊಂದು ಬಲಿ : ಸಾವಿನ ಸಂಖ್ಯೆ 4ಕ್ಕೆ ಏರಿಕೆ - corona death in bagalkote

ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದ್ದು, ಸಾವಿನ ಸಂಖ್ಯೆ 4ಕ್ಕೆ ಏರಿದೆ.

Another death for corona in Karnataka
ಸಾವಿನ ಸಂಖ್ಯೆ 4ಕ್ಕೆ ಏರಿಕೆ
author img

By

Published : Apr 3, 2020, 11:47 PM IST

Updated : Apr 4, 2020, 11:24 AM IST

ಬಾಗಲಕೋಟೆ :ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಖಚಿತ ಪಡಿಸಿದ್ದಾರೆ.

ನಿನ್ನೆ ಅಷ್ಟೇ ಕೊರೊನಾ ವೈರಸ್ ಸೋಂಕಿತ ಎಂದು ದೃಢ ಪಟ್ಟಿತ್ತು. ಇಂದು ರಾತ್ರಿ ಮೃತ ಪಟ್ಟಿರುವ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಖಚಿತ ಪಡಿಸಿದ್ದಾರೆ.

ನಗರದ ತರಕಾರಿ ಮಾರುಕಟ್ಟೆ ಬಳಿ ಕಿರಾಣಿ ಅಂಗಡಿ ವರ್ತಕರಾಗಿದ್ದ 75 ವರ್ಷದ ವಯಸ್ಸಿನ ವೃದ್ಧ ಕೋವಿಡ್​-19ಗೆ ಬಲಿಯಾಗಿದ್ದಾರೆ. ಇವರ ಪುತ್ರ ಬೆಂಗಳೂರಿ ನಿಂದ ಆಗಮಿಸಿದ್ದು ,ಅವರ ಮೇಲೆ ನಿಗಾ ಇಟ್ಟು ಗಂಟಲು ಮತ್ತು ರಕ್ತದ ಪರೀಕ್ಷೆ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದಿದೆ.

ಮೃತ ಪಟ್ಟವರ ಪತ್ನಿ ಹಾಗೂ ಸಹೋದರನ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ. ಈಗಾಗಲೇ ಜಿಲ್ಲಾಡಳಿತ ಮೃತ ಪಟ್ಟವರ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಪೂರ್ಣ ನಿಷೇಧಾಜ್ಞೆ ಹೇರಿದೆ.

ಜಿಲ್ಲೆಯಲ್ಲಿ ಕೊರೊನಾ ವೈರಸ್ ಗೆ ಇದು ಮೊದಲು ಬಲಿಯಾಗಿದ್ದು, ಯಾವ ರೀತಿ ಸೋಂಕು ತಾಗಿತು ಎಂಬುದೇ ಜಿಲ್ಲಾಡಳಿತಕ್ಕೆ ತಲೆ ನೋವಾಗಿದೆ. ಮೃತನ ಅಂತ್ಯ ಸಂಸ್ಕಾರ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ನಿಯಮಗಳಂತೆ ನಡೆಯಲಿದೆಯೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Last Updated : Apr 4, 2020, 11:24 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.