ETV Bharat / state

ಕಲ್ಯಾಣಿ ಚಾಲುಕ್ಯರ ಸಾಮಂತ ಅರಸರ ಶೈವ ಶಾಸನ ಪತ್ತೆ - ಶೈವ ಶಾಸನದ ಬಗ್ಗೆ ಸಂಶೋಧನೆ

1050ನೇ ಇಸವಿಯಲ್ಲಿನ ಕಲ್ಯಾಣಿ ಚಾಲುಕ್ಯರ ಸಾಮಂತ ಅರಸರ (ಸವದತ್ತಿ ರಟ್ಟರ) ಕಾಲದಲ್ಲಿ ಬರೆಯಲಾದ ಶೈವ ಶಾಸನವೊಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಪಟವರ್ಧನ ಮಹಾರಾಜರ ಹಳೆಯ ಅರಮನೆ ಹತ್ತಿರ ಪತ್ತೆಯಾಗಿದೆ.

ಕಲ್ಯಾಣಿ ಚಾಲುಕ್ಯರ ಸಾಮಂತ ಅರಸರ ಶೈವ ಶಾಸನ ಪತ್ತೆ

author img

By

Published : Dec 7, 2022, 9:55 PM IST

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ನಗರದ ಪಟವರ್ಧನ ಮಹಾರಾಜರ ಹಳೆಯ ಅರಮನೆ ಹತ್ತಿರ ಈಗಿನ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಸುಮಾರು 1050ನೇ ಇಸವಿಯಲ್ಲಿನ ಕಲ್ಯಾಣಿ ಚಾಲುಕ್ಯರ ಸಾಮಂತ ಅರಸರ (ಸವದತ್ತಿ ರಟ್ಟರ) ಕಾಲದಲ್ಲಿ ಬರೆಯಲಾದ ಶೈವ ಶಾಸನ ಮಂಗಳವಾರ ಸಂಜೆ ಪತ್ತೆಯಾಗಿದೆ. ಈ ಶಾಸನವನ್ನು ಯುವಕರು ಶಾಸನ ದೊರೆತ ಪಕ್ಕದ ಜಿ.ಪಂ ಕಚೇರಿಯ ದ್ವಾರದಲ್ಲಿ ಸಂರಕ್ಷಿಸಿಟ್ಟಿದ್ದಾರೆ.

ಸಂಶೋಧಕ ಡಾ.ಸಂಗಮೇಶ ಕಲ್ಯಾಣಿ ಮಾತನಾಡಿ, ಹಸಿರು ಕಲ್ಲಿನಲ್ಲಿ ಕೆತ್ತಿದ ಅಂದಾಜು 1050ನೇ ಇಸವಿಯ ಹಳೆಗನ್ನಡ ಶಾಸನ ಇದಾಗಿರಬಹುದು. ಶಾಸನದ ಮೊದಲನೇ ಸಾಲು ಅಳಿಸಿಹೋಗಿದೆ. ಉಳಿದ ಸಾಲುಗಳಲ್ಲಿ ಶೈವ ಶಾಸನದ ಸ್ತೋತ್ರ 'ನಮಸ್ತುಂಗ ಶಿರಸುಂಬಿ ತ್ರ ಚಾಮರ ಚಾರವೇ ತ್ರೈಲೋಕ್ಯ ನಗರಾರಂಭ ಮೂಲಸ್ಥಂವಾಯ' ಎಂಬ ಬರಹಗಳಿವೆ. ಶಾಸನದ ನಾಲ್ಕನೇ ಸಾಲಿನಲ್ಲಿ ಶಿವಾಲಯದ ಹೆಸರಿದ್ದು, ಇದೊಂದು ಶಿವಾಲಯಕ್ಕೆ ಸಂಬಂಧಿಸಿದ ಶಾಸನ ಎನ್ನುವುದನ್ನು ದೃಢಪಡಿಸುತ್ತದೆ ಎಂದು ತಿಳಿಸಿದರು.

ಕಲ್ಯಾಣಿ ಚಾಲುಕ್ಯರ ಸಾಮಂತ ಅರಸರ ಶೈವ ಶಾಸನ ಪತ್ತೆ
ಕಲ್ಯಾಣಿ ಚಾಲುಕ್ಯರ ಸಾಮಂತ ಅರಸರ ಶೈವ ಶಾಸನ ಪತ್ತೆ

ಶಾಸನದಲ್ಲಿ ಆಕಳು ತನ್ನ ಕರುವಿಗೆ ಹಾಲು ಕುಡಿಸುವ, ಮಂಡಿಗಾಲು ಊರಿ ಕುಳಿತ ಆಕಳು, ಮಧ್ಯಭಾಗದಲ್ಲಿ ಶಿವಲಿಂಗ, ಮೇಲ್ಭಾಗದಲ್ಲಿ ಸೂರ್ಯ, ಚಂದ್ರರನ್ನು ಕೆತ್ತಿದ ಕುರುಹುಗಳಿವೆ. ಶಾಸನ ಸಿಕ್ಕ ಸ್ಥಳದ ಸಮೀಪದಲ್ಲಿ ಪ್ರಾಚೀನ ದೇವಾಲಯದ ಕುರುಹುಗಳು, ಕುಂಬಾರ ಕೆರೆಯ ಉತ್ತರ ದಿಕ್ಕಿನಲ್ಲಿ ಕಂಡು ಬರುತ್ತದೆ ಎಂದು ಅವರು ವಿವರಿಸಿದರು.

ಶೈವ ಶಾಸನದ ಬಗ್ಗೆ ಸಂಶೋಧನೆ: ಇನ್ನೂ ಅರ್ಧ ಶಾಸನ ದೊರೆಯಬೇಕಾಗಿದೆ. ಪೂರ್ಣ ಶಾಸನ ದೊರೆತರೆ ಜಮಖಂಡಿಯ ಪ್ರಾದೇಶಿಕ ಇತಿಹಾಸ, ಕಲ್ಯಾಣ ಚಾಲುಕ್ಯರ ಇತಿಹಾಸವನ್ನು ಕಟ್ಟಬಹುದಾಗಿದೆ. ಸರ್ಕಾರ ತೃಟಿತ ಶಾಸನಗಳನ್ನು ಸಂರಕ್ಷಣೆ ಮಾಡಲು ಮುಂದಾಗಬೇಕು. ನಗರದಲ್ಲಿ ಪತ್ತೆಯಾದ ಪ್ರಥಮ ಶೈವ ಶಾಸನದ ಬಗ್ಗೆ ಸಂಶೋಧನೆ ಆಗಬೇಕು. ಇಲ್ಲಿ ಸಿಗುವ ಶಾಸನಗಳಿಗೆ ಸೂಕ್ತ ರಕ್ಷಣೆಯ ನಿಟ್ಟಿನಲ್ಲಿ ಸಂಗ್ರಹಾಲಯ ನಿರ್ಮಿಸಬೇಕು ಎಂದು ಸಮಾಜ ಸೇವಕ ವಿಠ್ಠಲ ಪರೀಟ ಹೇಳಿದರು.

ಇದನ್ನೂ ಓದಿ: ಶಿವಮೊಗ್ಗ: ಕದಂಬ ರಾಜವಂಶಸ್ಥ ರವಿವರ್ಮ ಕಾಲದ ಕಲ್ಲಿನ ಶಾಸನ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.