ಬಾಗಲಕೋಟೆ: ಬಿಗ್ ಬಾಸ್ ಸೀಸನ್ 6ರ ಸ್ಪಧಿ೯ ಹಾಗೂ ಕಿರುತೆರೆ ನಟಿ ಸೋನು ಪಾಟೀಲ್ ಅವರ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ನಟ ಕಿಚ್ಚ ಸುದೀಪ್ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಟಿ ಸೋನು ಪಾಟೀಲ್ ಅವರ ತಾಯಿ ಮಹಾದೇವಿ ನ್ಯೂಮೊನಿಯಾದಿಂದ ತೊಂದರೆಗೆ ಒಳಗಾಗಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ನಟ ಸುದೀಪ ಅವರ ಗಮನಕ್ಕೆ ಬಂದಾಗ ಕಿಚ್ಚ ಚಾರಿಟೇಬಲ್ ಟ್ರಸ್ಟ್ ಮೂಲಕ ಹಣದ ಸಹಾಯ ಮಾಡಿದ್ದಾರೆ. ಆಸ್ಪತ್ರೆಯ ಎಲ್ಲ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ನಟ ಸುದೀಪ್ ಭರಿಸಿದ್ದಾರೆ. ಸಕಾಲದಲ್ಲಿ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ನೆರವಾದ ನಟ ಸುದೀಪ್ ಅವರಿಗೆ ನಟಿ ಸೋನು ಪಾಟೀಲ್ ಕೃತಜ್ಞತೆ ಸಲ್ಲಿಸಿದ್ದಾರೆ.
ಆಸ್ಪತ್ರೆಯ ಬಿಲ್ ಸೇರಿದಂತೆ ಇತರ ವೆಚ್ಚಕ್ಕಾಗಿ ಸುದೀಪ ಅಂದಾಜು 5 ಲಕ್ಷ ರೂ. ರೆರವು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಓದಿ: ಕೊರೊನಾದಿಂದ ಅರ್ಧಕ್ಕೆ ಆಟ ನಿಲ್ಲಿಸಿದ 'ಬಿಗ್ಬಾಸ್'.. ನಾಳೆಯಿಂದ ಪ್ರಸಾರವಾಗಲ್ಲ 'ರಿಯಾಲಿಟಿ ಶೋ'