ETV Bharat / state

ನಿರ್ಗತಿಕರ ಹಸಿವು ನೀಗಿಸುತ್ತಿರುವ ಬಾಗಲಕೋಟೆಯ ಛಾಯಾಗ್ರಾಹಕ - lockdown news today

ಕೊರೊನಾ ಕರ್ಫ್ಯೂ ವಿಧಿಸಿರುವುದರಿಂದ ಬಾಗಲಕೋಟೆಯಲ್ಲಿ ಛಾಯಾಗ್ರಾಹಕರೊಬ್ಬರು ಅನಾಥರಿಗೆ, ನಿರ್ಗತಿಕರಿಗೆ ಬಿಸ್ಕಟ್ ಹಾಗೂ ಕುಡಿಯುವ‌ ನೀರು ವಿತರಣೆ ಮಾಡುತ್ತಿದ್ದಾರೆ.

A photographer in Bagalkot feeding the needy
ನಿರ್ಗತಿಕರ ಹಸಿವು ನೀಗಿಸುತ್ತಿರುವ ಬಾಗಲಕೋಟೆಯ ಛಾಯಾಗ್ರಾಹಕ
author img

By

Published : May 1, 2021, 9:30 AM IST

ಬಾಗಲಕೋಟೆ: ಕೋವಿಡ್​ ಹರಡುವಿಕೆ ತಡೆಗೆ ಕೊರೊನಾ ಕರ್ಫ್ಯೂ ವಿಧಿಸಿರುವುದರಿಂದ ಅನಾಥರಿಗೆ, ನಿರ್ಗತಿಕರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಇದನ್ನು ಅರಿತ ಪತ್ರಿಕೆಯೊಂದರ ಛಾಯಾಗ್ರಹಕರೊಬ್ಬರು ಬಿಸ್ಕಟ್ ಹಾಗೂ ಕುಡಿಯುವ‌ ನೀರು ವಿತರಣೆ ಮಾಡುವ ಮೂಲಕ ಮಾನವೀಯತೆ ಮರೆಯುತ್ತಿದ್ದಾರೆ.

ನಿರ್ಗತಿಕರ ಹಸಿವು ನೀಗಿಸುತ್ತಿರುವ ಬಾಗಲಕೋಟೆಯ ಛಾಯಾಗ್ರಾಹಕ

ಚಂದ್ರು ಅಂಬಿಗೇರ ಎಂಬ ಈ ಛಾಯಾಗ್ರಾಹಕ ನಿರ್ಗತಿಕರಿಗೆ, ಭಿಕ್ಷುಕರ ಹಸಿವು ನೀಗಿಸುತ್ತಿದ್ದಾರೆ. ತಮ್ಮ ಬೈಕ್​ನಲ್ಲಿ ಒಂದು ಬಾಕ್ಸ್ ನೀರಿನ ಬಾಟಲ್ ಹಾಗೂ ಬಿಸ್ಕಟ್ ಇಟ್ಟುಕೊಂಡು‌ ಇಡೀ ನಗರ ಸಂಚಾರ ಮಾಡುತ್ತಾರೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ತರಕಾರಿ ಮಾರುಕಟ್ಟೆ ಹಾಗೂ ಇತರ ಪ್ರದೇಶದಲ್ಲಿ ಸಂಚಾರಿಸುತ್ತಾ ನಿರ್ಗತಿಕರು ಕಂಡಲ್ಲಿ ಅವರಿಗೆ ಬಿಸ್ಕಟ್ ಹಾಗೂ ನೀರಿನ ಬಾಟಲ್ ನೀಡುತ್ತಾರೆ. ಈ ಮೂಲಕ ತಮ್ಮ ಅಳಿಲು ಸೇವೆ‌ ಸಲ್ಲಿಸುತ್ತಿದ್ದಾರೆ.

ಬಾಗಲಕೋಟೆ, ನವನಗರ ಹಾಗೂ ವಿದ್ಯಾಗಿರಿ ಪ್ರದೇಶದಲ್ಲಿ ಸಂಚಾರ ಮಾಡಿ ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಇದರ ಜೊತೆಗೆ ಬೀದಿ ನಾಯಿಗಳಿಗೂ ಬಿಸ್ಕಟ್, ನೀರು ಹಾಕುತ್ತಿದ್ದಾರೆ. ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.