ETV Bharat / state

ಜೋಡಿಕೊಲೆ ಪ್ರಕರಣದ 7 ಆರೋಪಿಗಳು ಖಾಕಿ ಬಲೆಗೆ

ಶಿರೋಳ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಜೋಡಿ ಕೊಲೆ ಪ್ರಕರಣದ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ
author img

By

Published : Oct 19, 2019, 9:28 AM IST

ಬಾಗಲಕೋಟೆ: ಮುಧೋಳ ತಾಲೂಕಿನ ಶಿರೋಳ ಗ್ರಾಮದಲ್ಲಿ ಇದೇ ಅಕ್ಟೋಬರ್​ 15 ರಂದು ನಡೆದಿದ್ದ ಮಲ್ಲಪ್ಪ ತಳಗೇರಿ(62), ವಿಠ್ಠಲ ತಳಗೇರಿ(46) ಎಂಬ ತಂದೆ-ಮಗನ ಜೋಡಿಕೊಲೆ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿತ್ತು. ಇದೀಗ ಈ ಕೊಲೆ ಪ್ರಕರಣದ ಏಳು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಜೋಡಿಕೊಲೆ ಪ್ರಕರಣದ ಆರೋಪಿಗಳು ಖಾಕಿ ಬಲೆಗೆ

ಬಾಗಲಕೋಟೆ ನಗರದ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ, ವೈಯಕ್ತಿಕ ದ್ವೇಷ ಹಾಗೂ ಹಣ ವ್ಯವಹಾರ ಹಿನ್ನೆಲೆಯಲ್ಲಿಈ ಕೊಲೆ‌ ನಡೆದಿದೆ ಎಂದು ಮಾಹಿತಿ ನೀಡಿದ್ರು.

ಜೋಡಿಕೊಲೆ ಮತ್ತು ಮೂರು ದಲಿತ ದೌರ್ಜನ್ಯ ಪ್ರಕರಣಗಳ ಸಂಬಂಧ ಏಳು ಜನರನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಶಿವಪ್ಪ ಹುದ್ದಾರ, ಸಾ-ಶಿರೋಳ, ಕಾಡಪ್ಪ ಮುಚ್ಚಂಡಿ ಸಾ-ಶಿರೋಳ, ಶಂಕರಪ್ಪ ಗುಡದಿನ್ನಿ ಸಾತೊರವಿ- ವಿಜಯಪುರ, ಮಹೇಶ ನಾಗರೆಡ್ಡಿ, ಗಿರಮಲ್ಲಯ್ಯ ಗಣಾಚಾರಿ,ಕಾಡಪ್ಪ ಕನಗಲ್ ಮತ್ತು ಲಕ್ಷ್ಮಣ ಒಕ್ಕನವರ ಎಂಬುವವರನ್ನು ಬಂಧಿಸಿ, ವಾಹನ ಸೇರಿದಂತೆ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ರು.

ಬಡ್ಡಿ ವ್ಯವಹಾರ ಹಾಗೂ ಜಮೀನಿನ ಒಡ್ಡು ಹಾಕುವ ಸಲುವಾಗಿ ಗಲಾಟೆ ನಡೆಯುತ್ತಿತ್ತು. ಕಳೆದ ಮೇ ತಿಂಗಳಲ್ಲಿ ಈ‌‌ ವಿಷಯವಾಗಿ ಗಲಾಟೆ ನಡೆದು, ಪ್ರಕರಣ ದಾಖಲಾಗಿ 24 ಜನರನ್ನು‌ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ಆ ವಿಚಾರಣೆ ಇನ್ನು ನಡೆಯುತ್ತಿದೆ ಎಂದು ಎಸ್​ಪಿ ತಿಳಿಸಿದ್ರು. ಈ ಪ್ರಕರಣವು ನಿಷ್ಪಕ್ಷಪಾತವಾಗಲಿ ಎಂಬ ಉದ್ದೇಶದಿಂದ ಜಿಲ್ಲೆಯ ಪೊಲೀಸ್​​ರನ್ನು ಬಿಟ್ಟು ಬೇರೆ ಜಿಲ್ಲೆಯ ಪೊಲೀಸರಿಂದ ತನಿಖೆ ನಡೆಸುವಂತೆ ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ರು.

Intro:Anchor

Body:ಮುಧೋಳ ತಾಲೂಕಿನ ಶಿರೋಳ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಜೋಡಿ ಕೊಲೆ ಮಾಡಿದ ಪ್ರಕರಣ ಹಿನ್ನಲೆ ಏಳು ಜನರ ಬಂಧನ ಮಾಡಿ‌ ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು,ವ್ಯಯಕ್ತಿಕ ದ್ವೇಷ ಹಾಗೂ ಹಣ ವ್ಯವಹಾರ ಹಿನ್ನಲೆ ಕೊಲೆ‌ ನಡೆದಿದೆ ಎಂದು‌ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲೋಕೇಶ ಜಗಲಸಾರ ತಿಳಿಸಿದ್ದಾರೆ.

ಅವರು ಬಾಗಲಕೋಟೆ ನಗರದ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಜೋಡಿ ಕೊಲೆ ಮತ್ತು ಮೂರು ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವ ಹಿನ್ನಲೆ ಏಳು ಜನರನ್ನು ಬಂಧಿಸಲಾಗಿದ್ದು,ಅದರಲ್ಲಿ ಶಿವಪ್ಪ ಹುದ್ದಾರ,ಸಾ- ಶಿರೋಳ,ಕಾಡಪ್ಪ ಮುಚ್ಚಂಡಿ ಸಾ-ಶಿರೋಳ,ಶಂಕರಪ್ಪ ಗುಡದಿನ್ನಿ ಸಾ-ತೊರವಿ- ವಿಜಯಪುರ. ಮಹೇಶ ನಾಗರೆಡ್ಡಿ, ಗಿರಮಲ್ಲಯ್ಯ ಗಣಾಚಾರಿ,ಕಾಡಪ್ಪ ಕನಗಲ್ ಮತ್ತು ಲಕ್ಷ್ಮಣ ಒಕ್ಕನವರ ಎಂಬುವವರನ್ನು ಬಂಧಿಸಿ,ವಾಹನ ಸೇರಿದಂತೆ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಹಣದ ಬಡ್ಡಿ,ವ್ಯವಹಾರ ಹಾಗೂ ಜಮೀನಿನ ಒಡ್ಡು ಹಾಕುವ ಸಲುವಾಗಿ ಗಲಾಟೆ ನಡೆಯುತ್ತಿತ್ತು.ಕಳೆದ ಮೇ ತಿಂಗಳಲ್ಲಿ ಈ‌‌ ವಿಷಯವಾಗಿ ಗಲಾಟೆ ನಡೆದು,ಪ್ರಕರಣ ದಾಖಲಾಗಿ 24 ಜನರನ್ನು‌ ಬಂಧನ ಮಾಡಿ,ನ್ಯಾಯಾಲಯ ಕ್ಕೆ ಒಪ್ಪಿಸಲಾಗಿತ್ತು.ಈಗ ಇನ್ನೂ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ ಎಸ್ ಪಿ.ಈ ಪ್ರಕರಣವು ನಿಷ್ಪಕ್ಷಪಾತ ವಾಗಲಿ ಎಂಬುವ ಉದ್ದೇಶ ದಿಂದ ಜಿಲ್ಲೆಯ ಪೊಲೀಸ್ ರನ್ನು ಬಿಟ್ಟು ಬೇರೆ ಜಿಲ್ಲೆಯ ಪೊಲೀಸ್ ರಿಂದ ತನಿಖೆ ನಡೆಸುವಂತೆ ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು. ಯಾರೇ ತಪ್ಪಿಸ್ಥರಾಗಲಿ ಕಾನೂನು ಪ್ರಕಾರ ಶಿಕ್ಷೆ ಆಗುವುದು ಎಂದು ತಿಳಿಸಿದರು..

ಬೈಟ್-- ಲೋಕೇಶ ಜಗಲಸಾರ ( ಎಸ್ ಪಿ)

Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.