ETV Bharat / state

ಮುಧೋಳದಲ್ಲಿ ದಾಖಲೆ ಇಲ್ಲದ 5 ಕೋಟಿ ಹಣ ಜಪ್ತಿ - 5 crore seized in Mudhol

ಮುಧೋಳ ವಿಧಾನಸಭೆ ಕ್ಷೇತ್ರದ ಚೆಕ್​ಪೋಸ್ಟ್​ವೊಂದರಲ್ಲಿ​ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಕೋಟಿ ರೂಪಾಯಿ ಜಪ್ತಿ ಮಾಡಲಾಗಿದೆ.

5-crore-undocumented-money-seized-in-mudhol
ಮುಧೋಳದಲ್ಲಿ ದಾಖಲೆ ಇಲ್ಲದ 5 ಕೋಟಿ ಹಣ ಜಪ್ತಿ
author img

By

Published : Apr 29, 2023, 9:22 PM IST

ಬಾಗಲಕೋಟೆ : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ತಡೆಗೆ ಚುನಾವಣೆ ಆಯೋಗದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದರೂ ಹಲವೆಡೆ ಇದುವರೆಗೂ ನೂರಾರು ಕೋಟಿ ಹಣ ಜಪ್ತಿ ಮಾಡಿಕೊಳ್ಳಲಾಗಿದೆ. ಅಂತೆಯೇ ಜಿಲ್ಲೆಯ ಮುಧೋಳ ಮತಕ್ಷೇತ್ರದ ಲಕ್ಷಾನಟ್ಟಿ ಚೆಕ್​ಪೋಸ್ಟ್​ ಬಳಿ ಅಧಿಕಾರಿಗಳು ಶನಿವಾರ ವಾಹನದಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 5 ಕೋಟಿ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ.

ಹುಬ್ಬಳ್ಳಿಯಿಂದ ಮುಧೋಳಕ್ಕೆ ತೆರಳುತ್ತಿದ್ದ ವಾಹನವನ್ನು ಎಸ್​ಎಸ್​ಟಿ ತಂಡ ಪರಿಶೀಲನೆ ನಡೆಸಿದಾಗ ವಾಹನದಲ್ಲಿದ್ದ ವ್ಯಕ್ತಿಯು ಹಣವು ಯುನಿಯನ್ ಬ್ಯಾಂಕ್​ಗೆ ಸೇರಿದೆ ಎಂದಿದ್ದಾನೆ. ಆದರೆ ವ್ಯಕ್ತಿಯ ಹೆಸರು, ಹುದ್ದೆ ಹಾಗೂ ಚಾಲಕ, ಬ್ಯಾಂಕ್ ಟ್ಯಾಗ್ಸ್ ಹಾಗೂ ಬ್ಯಾಂಕ್ ಕೋಡ್​​ ಸೇರಿದಂತೆ ಇತರೆ ದಾಖಲೆಗಳು ಕಂಡುಬಾರದ ಕಾರಣ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಶಕ್ಕೆ ಪಡೆದ ನಗದನ್ನು ಖಜಾನೆಗೆ ಜಮೆ‌ ಮಾಡಲಾಗಿದೆ ಎಂದು ಚುನಾವಣೆ ಅಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪಿ ಸುನೀಲ ಕುಮಾರ ಮಾಹಿತಿ ನೀಡಿದ್ದಾರೆ.

5-crore-undocumented-money-seized-in-mudhol
ಮುಧೋಳದಲ್ಲಿ ದಾಖಲೆ ಇಲ್ಲದ 5 ಕೋಟಿ ಹಣ ಜಪ್ತಿ

ರಾಜ್ಯಾದ್ಯಂತ ಈಗಾಗಲೇ ಚುನಾವಣೆ ಅಕ್ರಮ ಸಂಬಂಧ ಬರೋಬ್ಬರಿ 302.78 ಕೋಟಿ ರೂಪಾಯಿ ಅಕ್ರಮ ನಗದು, ಮದ್ಯ, ಉಡುಗೊರೆ ಚುನಾವಣಾ ಆಯೋಗದ ವಿವಿಧ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಶನಿವಾರ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಹೆಚ್ಚುವರಿ ಸುಮಾರು ಶೇಕಡಾ 68ಕ್ಕೂ ಅಧಿಕ ಮೊತ್ತದ ಹಣ ಜಪ್ತಿ ಆಗಿದೆ.

ಚುನಾವಣಾ ಆಯೋಗ, ಐಟಿ, ಪೊಲೀಸ್ ಇಲಾಖೆ, ಕಣ್ಗಾವಲು ಪಡೆ ಸೇರಿ ಒಟ್ಟು 109.14 ಕೋಟಿ ರೂ. ಮೌಲ್ಯದ ನಗದು, 22.14 ಕೋಟಿ ರೂ. ಮೌಲ್ಯದ ಉಡುಗೊರೆ, ಒಟ್ಟು 70.70 ಕೋಟಿ ಮೌಲ್ಯದ 19,10,746 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. 18.29 ಕೋಟಿ ಮೌಲ್ಯದ 1,438 ಕೆ.ಜಿ. ಮಾದಕ ವಸ್ತು, 76.05 ಕೋಟಿ ರೂ. ಬಂಗಾರ ಹಾಗೂ 4.44 ಕೋಟಿ ರೂ.‌ ಮೌಲ್ಯದ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಒಟ್ಟು 2,288 ಪ್ರಥಮ ತನಿಖಾ ವರದಿ (ಎಫ್​ಐಆರ್​) ದಾಖಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಮತ ಚಲಾವಣೆಗೂ ಮುನ್ನ 8 ಮಂದಿ ನಿಧನ.. ಚಾಮರಾಜನಗರದಲ್ಲಿ 313 ಮಂದಿಯಿಂದ ಮನೆಯಲ್ಲೇ ಮತದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.