ETV Bharat / state

ಬಾಗಲಕೋಟೆ ಜಿಪಂ ಕಚೇರಿಗೆ ಪಾರದರ್ಶಕತೆ ತರಲು ಸಿಸಿಟಿವಿ ಅಳವಡಿಕೆ..  ಜಿಪಂ ಸಿಇಒ ಮಾನಕರ

ಕಚೇರಿಗೆ ತಮ್ಮ ಅಹವಾಲು, ಸಮಸ್ಯೆಗಳನ್ನು ಹೊತ್ತು ಬರುವ ಸಾರ್ವಜನಿಕರ ಪ್ರಕರಣಗಳು, ಕಚೇರಿ ಕಡತಗಳ ವಿಳಂಬ, ಕೇಸ್ ವರ್ಕರ್ ಕಿರಿಕಿರಿ ತಪ್ಪಿಸಲು ಕಚೇರಿಗಳಿಗೆ ಸಿಸಿಟಿಟಿ ಅಳವಡಿಸಲಾಗಿದೆ ಎಂದು ಜಿಪಂ ಸಿಇಒ ಮಾನಕರ ಹೇಳಿದ್ದಾರೆ.

author img

By

Published : Oct 16, 2019, 9:14 PM IST

ಪಾರದರ್ಶಕತೆಗಾಗಿ ಸಿಸಿಟಿವಿ ಅಳವಡಿಕೆ

ಬಾಗಲಕೋಟೆ:ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ಪಾರದರ್ಶಕತೆ ತರಲು 20 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದ್ದಾರೆ.

ಜಿಲ್ಲಾ ಪಂಚಾಯತ್ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಈ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದಿರುವ ಸಿಇಒ, ಕಚೇರಿ ವ್ಯಾಪ್ತಿಯ ಎಲ್ಲ ವಿಭಾಗಗಳ ದಿನನಿತ್ಯದ ಕಾರ್ಯಕಲಾಪಗಳನ್ನು ನೇರವಾಗಿ ತಮ್ಮ ಕಚೇರಿಯಿಂದ ವೀಕ್ಷಿಸಲು, ಸಾರ್ವಜನಿಕರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಇದರಿಂದ ಅನುಕೂಲವಾಗಲಿದೆ ಎಂದರು.

ಸಿಇಒ ಕಚೇರಿಯಲ್ಲಿಯೂ ಸಹ ಕೆಲಸದ ವೇಳೆ ತಮ್ಮ ಕೆಲಸ ಕಾರ್ಯದ ನೇರ ಪ್ರಸಾರವನ್ನು ಸಹ ಕಾರಿಡಾರ್​ನ ಸ್ಕ್ರೀನ್‍ನಲ್ಲಿ ಸಾರ್ವಜನಿಕರು ಹಾಗೂ ಸಿಬ್ಬಂದಿ ನೇರವಾಗಿ ವೀಕ್ಷಿಸಬಹುದಾಗಿದೆ. ಅಂದಹಾಗೇ ಇದು ರಾಜ್ಯದಲ್ಲೇ ಪ್ರಥಮ ಪ್ರಯೋಗವಾಗಿದೆ ಎಂದು ಸಿಇಒ ಗಂಗೂಬಾಯಿ ಮಾನಕರ ಹೇಳಿದ್ದಾರೆ.

Intro:AnchorBody:ಪಾರದರ್ಶಕತೆಗೆ 20 ಸಿಸಿಟಿವಿ ಕ್ಯಾಮರಾ ಅಳವಡಿಕೆ : ಸಿಇಓ ಮಾನಕರ

ಬಾಗಲಕೋಟೆ-- ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ಪಾರದರ್ಶಕತೆ ತರಲು ವಿವಿಧ ವಿಭಾಗಗಳ ಕಾರ್ಯವೈಖರಿ, ಆಡಳಿತ ಕೆಲಸ ಕಾರ್ಯದ ಕಡತಗಳನ್ನು ನೇರವಾಗಿ ವೀಕ್ಷಿಸಲು ಒಟ್ಟು 20 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ತಿಳಿಸಿದರು.
         ಜಿಲ್ಲಾ ಪಂಚಾಯತ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಈ ಕ್ರಮವನ್ನು ಅನುಸರಿಸಲಾಗುತ್ತಿದೆಯೆಂದ ಸಿಇಓ ಅವರು ಸಿಇಓ ಕಚೇರಿ ವ್ಯಾಪ್ತಿಯಲ್ಲಿಯ ಎಲ್ಲ ವಿಭಾಗಗಳ ದಿನನಿತ್ಯದ ಕಾರ್ಯಕಲಾಪಗಳನ್ನು ನೇರವಾಗಿ ತಮ್ಮ ಕಚೇರಿಯಿಂದ ವೀಕ್ಷಿಸಲು, ಸಾರ್ವಜನಿಕರ ಸಮಸ್ಯೆಗಳನ್ನು ಇತ್ಯಥ್ರ್ಯಪಡಿಸಲು ಇದರಿಂದ ಅನುಕೂಲವಾಗಲಿದೆಯೆಂದರು. ಕಚೇರಿಗೆ ತಮ್ಮ ಅಹವಾಲು ಸಮಸ್ಯೆಗಳನ್ನು ಹೊತ್ತು ತರುವ ಸಾರ್ವಜನಿಕರ ಪ್ರಕರಣಗಳು, ಕಚೇರಿ ಕಡತಗಳ ವಿಳಂಬ, ಕೇಸ್ ವರ್ಕರ್ ಕಿರಿಕಿರಿ ತಪ್ಪಿಸಲು ಸಹಕಾರಿಯಾಗಲಿದೆ ಎಂದರು.
         ಸಿಇಓ ಕಚೇರಿಯಲ್ಲಿಯೂ ಸಹ ಕೆಲಸದ ವೇಳೆಯಲ್ಲಿ ತಮ್ಮ ಕೆಲಸ ಕಾರ್ಯದ ನೇರ ಪ್ರಸಾರವನ್ನು ಸಹ ಕಾರಿಡಾರ್‍ನ ಸ್ಕ್ರೀನ್‍ನಲ್ಲಿ ಸಾರ್ವಜನಿಕರು ಹಾಗೂ ಸಿಬ್ಬಂದಿಗಳು ನೇರವಾಗಿ ವೀಕ್ಷಿಸಬಹುದಾಗಿದೆ. ಸಿಇಓ ಕಚೇರಿ ಆಪ್ತ ಶಾಖೆ, ಉಪಕಾರ್ಯದರ್ಶಿ ಕಚೇರಿ, ಯೋಜನಾ ನಿರ್ದೇಶಕರ ಕಚೇರಿ, ಆಡಳಿತ ವಿಭಾಗ, ಯೋಜನಾ ವಿಭಾಗ, ಲೆಕ್ಕಪತ್ರ ಶಾಖೆ ಹಾಗೂ ಕಾರಿಡಾರ್ ಸೇರಿದಂತೆ ವಿವಿಧ ಪ್ರಮುಖ ಕೇಸ್ ವರ್ಕರ್‍ಗಳ ವಿಭಾಗಗಳಲ್ಲಿಯೂ ಸೇರಿ ಒಟ್ಟು 20 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದ್ದು, ಇವುಗಳನ್ನು ತಮ್ಮ ಕಚೇರಿಯಿಂದ ವೀಕ್ಷಣೆ ಹಾಗೂ ನಿರ್ವಹಣೆ ಮಾಡಲಾಗುವುದೆಂದರು.
ಕಡತಗಳಿಗೆ ಬಾರ್ ಕೋಡ್ – ರಾಜ್ಯದಲ್ಲೇ ಪ್ರಥಮ ಪ್ರಯೋಗ
         ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ 28 ಇಲಾಖೆಗಳು ಒಳಪಡಲಿದ್ದು, ಗ್ರಾಮ ಪಂಚಾಯತ, ತಾಲೂಕಾ ಪಂಚಾಯತ ಹಾಗೂ ಜಿಲ್ಲಾ ಪಂಚಾಯತನ ಎಲ್ಲ ಇಲಾಖೆಗಳ ಪ್ರಮುಖ ಕಡತಗಳಿಗೆ ಬಾರ್‍ಕೋಡ್ ಅಳವಡಿಸಲಾಗುತ್ತಿದ್ದು, ಇದರಿಂದಾಗಿ ಅನುಮೋದಿಸಲ್ಪಟ್ಟ ಕಡತಗಳು ಕಾರಿಡಾರ್‍ನ ಸ್ಕ್ರೀನ್‍ನಲ್ಲಿ ಪ್ರದರ್ಶನಗೊಳ್ಳಲಿದೆ. ಆಡಳಿತ ಸುಸೂತ್ರವಾಗಿ ನಡೆಯಲು ಇದರಿಂದ ಸಹಕಾರಿಯಾಗಲಿದ್ದು, ರಾಜ್ಯದಲ್ಲಿಯೇ ಇದೊಂದು ಮಾದರಿ ಪ್ರಯೋಗವಾಗಿದೆ. ನೂತನ ತಂತ್ರಜ್ಞಾನವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕಡತಗಳ ಬಾರ್‍ಕೋಡ್ ಅಳವಡಿಸುವ ಸಾಪ್ಟವೇರ್‍ವೊಂದನ್ನು ಅಭಿವೃದ್ದಿಪಡಿಸಲಾಗುತ್ತಿದ್ದು, ಜಿಲ್ಲಾ ಪಂಚಾಯತನ ಒಳಾಡಳಿತಕ್ಕೆ ಹೊಸರೂಪ ನೀಡಲಾಗುತ್ತಿದೆಯೆಂದು ಮಾನಕರ ತಿಳಿಸಿದರು.
         ಪ್ರತಿಯೊಂದು ಕಡತಕ್ಕೆ ಬಾರ್‍ಕೋಡ್, ಕಡತದ ವಿಷಯ, ನಂಬರ್ಸ್ ಅಳವಡಿಸಲಾಗುತ್ತಿದೆ. ಯಾವ ಕಡತ ಸಹಿಯಾಗಿದೆಯೆಂಬುದನ್ನು ಅಧಿಕಾರಿಗಳು ಕಾರಿಡಾರ್‍ನ ಸ್ಕ್ರೀನ್‍ನಲ್ಲೇ ವೀಕ್ಷಿಸಬಹುದಾಗಿದೆ. ಇದರಿಂದ ಅಧಿಕಾರಿಗಳು ಕಡತ ಸಹಿಗಾಗಿ ಕಾಯಬೇಕಾಗುತ್ತದೆಯೆಂಬ ಆರೋಪ ದೂರಪಡಿಸಬಹುದೆಂದು ತಿಳಿಸಿದರು.
ಪೇಪರಲೆಸ್ ಇ ಆಫೀಸ್ :
         ಪೇಪರ್ ಲೇಸ್ ಇ ಆಫೀಸ್‍ಗೆ ಕಳೆದೆರಡು ತಿಂಗಳಿನಿಂದಲೇ ಚಾಲನೆ ನೀಡಿದ್ದು, ಈ ತಿಂಗಳೊಳಗಾಗಿ ಸಂಪೂರ್ಣವಾಗಿ ಇ ಕಚೇರಿಯಾಗಿಸಲಾಗುವುದು. ಸದ್ಯ ಪ್ರತಿದಿನ 3-4 ಕಡತಗಳನ್ನು ಇ ಕಚೇರಿಯಲ್ಲೇ ವ್ಯವಹರಿಸಲಾಗುತ್ತಿದ್ದು, ನುರಿತ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆಯೆಂದರು. ತುರ್ತು ಸಂದರ್ಭಗಳಲ್ಲಿ ತಮ್ಮ ಪ್ರವಾಸದ ವೇಳೆ ಬೇರೆ ಕಡೆಯಿಂದಲೂ ಸಹ ಗೃಹಕಚೇರಿಯಿಂದಲೂ ಸಹ ಕಡತ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.Conclusion:ಈ ಟಿವಿ,ಬಾಗಲಕೋಟೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.