ಬಾಗಲಕೋಟೆ : ಇಂದು 15 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 68ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ ಎಲ್ಲಾ ಸೋಂಕಿತರು ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದವರಾಗಿದ್ದಾರೆ.
ಒಟ್ಟು 17 ಮಂದಿ ಗುಜರಾತ್ನ ಅಹಮದಾಬಾದ್ಗೆ ಮಾರ್ಚ್ 3ರಂದು ತೆರಳಿದ್ದರು. ನಂತರ ಅಲ್ಲಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೇ 8ಕ್ಕೆ ಮುಧೋಳ ನಗರಕ್ಕೆ ವಾಪಸಾಗಿದ್ದರು. ವಾಪಸ್ ಬಂದ ಅವರನ್ನು ಕ್ವಾರಂಟೈನ್ನಲ್ಲಿ ಇಟ್ಟು ಮೊನ್ನೆಯಷ್ಟೇ ಗಂಟಲು ದ್ರವವನ್ನು ಸೋಂಕು ಪತ್ತೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರ ಪೈಕಿ 14 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಮೂವರ ವರದಿಯಲ್ಲಿ ನೆಗೆಟಿವ್ ಬಂದಿದೆ.
ಈಗ ಸೋಂಕು ಕಾಣಿಸಿಕೊಂಡಿದ್ದವರ ವರದಿ ಮಹಾರಾಷ್ಟ್ರದಲ್ಲಿ ನೆಗೆಟಿವ್ ಬಂದಿತ್ತು. ಆದರೆ, ಈಗ ಮತ್ತೆ ಸೋಂಕು ಪತ್ತೆ ಪರೀಕ್ಷೆ ನಡೆಸಿದ್ದು, 14 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರ ಜೊತೆಗೆ ಒಬ್ಬರಿಗೆ SARI ಲಕ್ಷಣಗಳು ಕಾಣಿಸಿಕೊಂಡಿವೆ. ಇದರಿಂದಾಗಿ ಮುಧೋಳ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 24ಕ್ಕೇರಿದೆ.