ಬಾಗಲಕೋಟೆ: ಜಿಲ್ಲೆಯಲ್ಲಿ ಹೊಸದಾಗಿ 149 ಕೊರೊನಾ ಪ್ರಕರಣಗಳು ಇಂದು ದೃಢಪಟ್ಟಿದೆ. 48 ಮಂದಿ ಕೋವಿಡ್ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ತಿಳಿಸಿದ್ದಾರೆ.
149 ಮಂದಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 3,060ಕ್ಕೆ ಏರಿಕೆಯಾಗಿದೆ. ಇಂದು ಬಾದಾಮಿ ತಾಲೂಕಿನ 35, ಬಾಗಲಕೋಟೆಯ 48, ಬೀಳಗಿಯ 4, ಹುನಗುಂದದ 20, ಜಮಖಂಡಿಯ 15, ಮುಧೋಳದ 22 ಹಾಗು ಬೇರೆ ಜಿಲ್ಲೆಯ 5 ಪ್ರಕರಣಗಳು ವರದಿಯಾಗಿದೆ. 3,060 ಸೋಂಕಿತರ ಪೈಕಿ ಒಟ್ಟು 1,642 ಸೋಂಕಿತರು ಕೋವಿಡ್ನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಿಂದ ಒಟ್ಟು 35,054 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 31,102 ನೆಗೆಟಿವ್ ಪ್ರಕರಣ, 3,060 ಪಾಸಿಟಿವ್ ಪ್ರಕರಣ ಹಾಗೂ 55 ಮೃತ ಪ್ರಕರಣಗಳು ವರದಿಯಾಗಿದೆ. 187 ಸ್ಯಾಂಪಲ್ಗಳು ರಿಜೆಕ್ಟ್ ಆಗಿವೆ. 614 ಸ್ಯಾಂಪಲ್ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.
ಸದ್ಯ 1,367 ಸಕ್ರಿಯ ಪ್ರಕರಣಗಳು ಇವೆ. 182 ಕಂಟೈನ್ಮೆಂಟ್ ಝೋನ್ಗಳಿದ್ದು, ಇನ್ಸ್ಟಿಟ್ಯೂಶನ್ ಕ್ವಾರಂಟೈನ್ನಲ್ಲಿದ್ದ 8,237 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.