ETV Bharat / sports

ಗುರ್ಜಿತ್​ ಕೌರ್​ ಭರ್ಜರಿ ಗೋಲು.. ಭಾರತವನ್ನು ಸೆಮಿಫೈನಲ್​ಗೆ ಕೊಂಡೊಯ್ದ ಧೀರೆ​

ಟೋಕಿಯೋ ಒಲಿಂಪಿಕ್ಸ್​ನ ಹಾಕಿಯಲ್ಲಿ ಸೆಮಿಫೈನಲ್​ ಪ್ರವೇಶಿಸಲು ಕಾರಣವಾಗಿರುವ ಗುರ್ಜಿತ್ ​ಕೌರ್ ಹೊಡೆದ ಗೋಲಿನ ವಿಡಿಯೋ ಇಲ್ಲಿದೆ.

Gurjit Kaur
ಗುರ್ಜಿತ್​ ಕೌರ್
author img

By

Published : Aug 2, 2021, 1:23 PM IST

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಾಂಪಿಯನ್​ ಆಸ್ಟ್ರೇಲಿಯಾ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿರುವ ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಂಡಿರುವುದು ಐತಿಹಾಸಿಕವಾಗಿದೆ.

ಇಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 22 ನೇ ನಿಮಿಷದಲ್ಲಿ ಗುರ್ಜಿತ್ ​ಕೌರ್​ ಏಕಾಂಗಿಯಾಗಿ ಪೆನಾಲ್ಟಿ ಕಾರ್ನರ್ ಮೂಲಕ ಒಂದು ಗೋಲು ಹೊಡೆದು ಗೆಲುವಿಗೆ ಬುನಾದಿ ಹಾಕಿದರು. ಅವರು ಹೊಡೆದ ಗೋಲಿನ ದೃಶ್ಯದ ವಿಡಿಯೋ ಇಲ್ಲಿದೆ.

1980ರಲ್ಲಿ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ನಾಲ್ಕನೇ ಸ್ಥಾನ ಪಡೆದಿತ್ತು. ಅದಾದ ಬಳಿಕ ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಇಂದು ಭಾರತದ ಮಹಿಳೆಯರು ಈ ಸಾಧನೆ ಮಾಡಿದರು. ಜಗತ್ತಿನ ನಂಬರ್‌ 1 ತಂಡದ ವಿರುದ್ಧ ಅಮೋಘ ಪ್ರದರ್ಶನ ನೀಡಿರುವ ಭಾರತೀಯ ಆಟಗಾರ್ತಿಯರು ಭರ್ಜರಿ ಗೆಲುವು ದಾಖಲಿಸಿ ಭಾವುಕರಾದರು.

ಇದನ್ನೂ ಓದಿ: ಚಕ್‌ದೇ ಇಂಡಿಯಾ! ಬಲಾಢ್ಯ ಆಸ್ಟ್ರೇಲಿಯಾ ಮಣಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ 'ಭಾರತೀ'ಯರು!

ಆಗಸ್ಟ್ 4ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತ ತಂಡವು ಅರ್ಜೆಂಟೀನಾ ಸವಾಲು ಎದುರಿಸಲಿದೆ. ಮಗದೊಂದು ಕ್ವಾರ್ಟರ್‌ನಲ್ಲಿ ಅರ್ಜೆಂಟೀನಾ ತಂಡವು ಜರ್ಮನಿ ವಿರುದ್ಧ 3-0 ಗೋಲುಗಳ ಅಂತರದ ಗೆಲುವು ದಾಖಲಿಸಿದೆ. ಆ ಪಂದ್ಯ ಗೆದ್ದರೆ ಚಿನ್ನಕ್ಕಾಗಿ ಆಗಸ್ಟ್ 6ರಂದು ಭಾರತ ತಂಡ ಕಣಕ್ಕಿಳಿಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.