ETV Bharat / sports

Tokyo Paralympics ಟೇಕ್ವಾಂಡೋ:  ಕ್ವಾರ್ಟರ್​ ಫೈನಲ್​ನಲ್ಲಿ ಸೋಲು ಕಂಡ ಅರುಣಾ ತನ್ವಾರ್ - ಹರಿಯಾಣದ ಭಿವಾನಿ ಜಿಲ್ಲೆಯ ದಿನೋದ್

ಅರುಣಾ ಫ್ರೀ ಕ್ವಾರ್ಟರ್​ ಫೈನಲ್ಸ್​ನಲ್ಲಿ ಸರ್ಬಿಯನ್ ಅಥ್ಲೀಟ್​ ವಿರುದ್ಧ 29-9 ಅಂಕಗಳ ಅಂತರದಿಂದ ಗೆಲುವು ಸಾಧಿಸಿ ಅಂತಿಮ 8ರ ಘಟ್ಟಕ್ಕೆ ಪ್ರವೇಶಿಸಿದರು. ಅವರು ತಮ್ಮ ಮುಂದಿನ ಸುತ್ತಿನಲ್ಲಿ ಪೆರು ಅಥ್ಲೀಟ್​ ಲಿಯೊನೊರ್ ಎಸ್ಪಿನೋಜಾ ಕ್ಯಾರನ್ಜಾ ವಿರುದ್ಧ ಸೆಣಸಾಡಲಿದ್ದಾರೆ.

Tokyo Paralympics
ಟೇಕ್ವಾಂಡೋದಲ್ಲಿ ಕ್ವಾರ್ಟರ್​ ಫೈನಲ್​ ಪ್ರವೇಸಿಸಿದ ಅರುಣಾ ಕುಮಾರಿ
author img

By

Published : Sep 2, 2021, 10:36 AM IST

Updated : Sep 2, 2021, 2:27 PM IST

ಟೋಕಿಯೋ: ಭಾರತದ ಟೇಕ್ವಾಂಡೋ ಪ್ಲೇಯರ್​ ಅರುಣಾ ತನ್ವಾರ್ ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಗುರುವಾರ ನಡೆದ ಮಹಿಳೆಯ K44-49 ಕೆಜಿ ವಿಭಾಗದಲ್ಲಿ ನಾಲ್ಕನೇ ಶ್ರೇಯಾಂಕದ ಪೆರುವಿನ ಎಸ್ಪಿನೋಜಾ ಕ್ಯಾರನ್ಜಾ ವಿರುದ್ಧ ಸೋಲು ಕಂಡರು. ಆದರೆ ರೇಪ್ಚೇಜ್​ ಸುತ್ತಿನಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.

ಇದಕ್ಕೂ ಮೊದಲು ಸರ್ಬಿಯಾದ ಡ್ಯಾನಿಜೇಲಾ ಜಾವನೋವಿಕ್​ ವಿರುದ್ಧ ಗೆಲುವು ಸಾಧಿಸಿ ಕ್ವಾರ್ಟರ್​ಫೈನಲ್ಸ್​ ಪ್ರವೇಶಿಸಿದ್ದಾರೆ. ಅರುಣಾ ಫ್ರೀ ಕ್ವಾರ್ಟರ್​ ಫೈನಲ್ಸ್​ನಲ್ಲಿ ಸರ್ಬಿಯನ್ ಆಥ್ಲೀಟ್​ ವಿರುದ್ಧ 29-9 ಅಂಕಗಳ ಅಂತರದಿಂದ ಗೆಲುವು ಸಾಧಿಸಿ ಅಂತಿಮ 8ರ ಘಟ್ಟಕ್ಕೆ ಪ್ರವೇಶಿಸಿದರು.

ಮೊದಲ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿ 8-4ರಲ್ಲಿ ಮುನ್ನಡೆ ಸಾಧಿಸಿದ ಅವರು, ಅದೇ ಗೆಲುವಿನ ಉತ್ಸಾಹವನ್ನು ಮುಂದುವರಿಸಿ 2ನೇ ಸುತ್ತನ್ನು ಸುಲಭವಾಗಿ ಗೆದ್ದರು. ಎರಡು ಸುತ್ತಿನಲ್ಲೂ ಪ್ರಾಬಲ್ಯ ಮೆರೆದಿದ್ದ ಅರುಣಾ ಮೂರನೇ ಸುತ್ತಿನಲ್ಲಿ 15-2ರಲ್ಲಿ ಗೆದ್ದು ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಅರುಣಾ ಹರಿಯಾಣದ ಭಿವಾನಿ ಜಿಲ್ಲೆಯ ದಿನೋದ್ ಹಳ್ಳಿಯ ಪ್ಯಾರಾ ಟೇಕ್ವಾಂಡೊ ಪಟು ವೈಲ್ಡ್​ ಕಾರ್ಡ್​ ಪ್ರವೇಶದ ಮೂಲಕ ಟೋಕಿಯೋ ಪ್ಯಾರಾಲಿಂಪಿಕ್ಸ್​ಗೆ ಪ್ರವೇಶ ಪಡೆದಿದ್ದರು. ವಿಶೇಷವೆಂದರೆ ಅವರು ಈ ಗ್ಲೋಬಲ್​ ಇವೆಂಟ್​ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಮೊದಲ ಸ್ಪರ್ಧಿ ಎಂಬ ಶ್ರೇಯಕ್ಕೆ ಅವರು ಪಾತ್ರರಾಗಿದ್ದಾರೆ ಎಂದು ರಾಷ್ಟ್ರೀಯ ಒಕ್ಕೂಟ ಸ್ಪಷ್ಟಪಡಿಸಿದೆ.

ಇದನ್ನು ಓದಿ:ಕ್ಯಾನೋ ಸ್ಪ್ರಿಂಟ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತದ ಪ್ರಾಚಿ ಯಾದವ್​

Last Updated : Sep 2, 2021, 2:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.