ETV Bharat / sports

Tokyo Olympics: ಕ್ವಾರ್ಟರ್​ ಫೈನಲ್​​ನಲ್ಲಿ ಕುಸ್ತಿಪಟು ಸೀಮಾ ಬಿಸ್ಲಾ ಪರಾಭವ - ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಸೋಲು ಅನುಭವಿಸಿದ ಸೀಮಾ ಬಿಸ್ಲಾ

ಭಾರತೀಯ ಕುಸ್ತಿಪಟು ಸೀಮಾ ಬಿಸ್ಲಾ ಟೋಕಿಯೋ ಒಲಿಂಪಿಕ್ಸ್​ನ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕ್ವಾರ್ಟರ್​ ಫೈನಲ್​ನಲ್ಲಿ ಪರಾಭವಗೊಂಡಿದ್ದಾರೆ.

Tokyo Olympics: ಕ್ವಾರ್ಟರ್​ ಫೈನಲ್​​ನಲ್ಲಿ ಪರಾಭವಗೊಂಡ ಕುಸ್ತಿಪಟು ಸೀಮಾ ಬಿಸ್ಲಾ

author img

By

Published : Aug 6, 2021, 10:26 AM IST

ಟೋಕಿಯೊ(ಜಪಾನ್)​​: ಕುಸ್ತಿಪಟು ಸೀಮಾ ಬಿಸ್ಲಾ ಶುಕ್ರವಾರ ಟ್ಯುನಿಶಿಯಾದ ಸರ್ರಾ ಹಮ್ದಿ ವಿರುದ್ಧ ನಡೆದ ಪಂದ್ಯದಲ್ಲಿ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕ್ವಾರ್ಟರ್​ ಫೈನಲ್​ನಲ್ಲಿ ಸೋಲು ಅನುಭವಿಸಿದರು.

ಈ ಮೂಲಕ ಟೋಕಿಯೊ ಒಲಿಂಪಿಕ್​ನಲ್ಲಿ ಪದಕ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. ಪ್ರಬಲ ಎದುರಾಳಿಯಾದ ಸರ್ರಾ ಹಮ್ದಿ ವಿರುದ್ಧ ಸೀಮಾ ಬಿಸ್ಲಾ 1-3ರಿಂದ ಸೋತಿದ್ದಾರೆ.

ಮತ್ತೊಂದೆಡೆ ಟೋಕಿಯೋ ಒಲಿಂಪಿಕ್ಸ್ ಪುರುಷರ 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಇರಾನ್‌ ಸ್ಪರ್ಧಿಯನ್ನು 2-1 ರಿಂದ ಸೋಲಿಸಿ ಸೆಮಿಫೈನಲ್​​ ಪ್ರವೇಶಿಸಿದ್ದು ಪದಕದ ಭರವಸೆ ಸೃಷ್ಟಿಸಿದ್ದಾರೆ.

ಬಜರಂಗ್ ಪುನಿಯಾ ಅವರು ಸೆಮಿಫೈನಲ್​ನಲ್ಲಿ ಅಝರ್​ಬೈಜನ್​ನ ಹಾಜಿ ಅಲಿಯೆವ್ ಅವರನ್ನು ಎದುರಿಸಲಿದ್ದಾರೆ.

ಇದನ್ನೂ ಓದಿ: Tokyo Olympics: ಬಜರಂಗ್​ ಪುನಿಯಾ ಸೆಮಿಫೈನಲ್‌ ಪ್ರವೇಶ: ಕುಸ್ತಿಯಲ್ಲಿ ಮತ್ತೊಂದು ಪದಕ ನಿರೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.