ETV Bharat / sports

Tokyo Olympics: ಭಾರತದ ಸ್ಟಾರ್​ ಬಾಕ್ಸರ್​ ಮೇರಿ ಕೋಮ್ ಪ್ರಿಕ್ವಾರ್ಟರ್​​ ಪ್ರವೇಶ

author img

By

Published : Jul 25, 2021, 2:03 PM IST

Updated : Jul 25, 2021, 3:10 PM IST

ಬಾಕ್ಸಿಂಗ್ ದಂತಕಥೆ ಎಂಸಿ ಮೇರಿ ಕೋಮ್ ಇಂದು ಡೊಮಿನಿಕನ್ ರಿಪಬ್ಲಿಕನ್​ನ ಮಿಗುಯೆಲಿನಾ ಹೆರ್ನಾಂಡೆಜ್ ಗಾರ್ಸಿಯಾ ವಿರುದ್ಧ 4-1 ರ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ.

ಬಾಕ್ಸಿಂಗ್ ದಂತಕಥೆ ಎಂಸಿ ಮೇರಿ ಕೋಮ್
ಬಾಕ್ಸಿಂಗ್ ದಂತಕಥೆ ಎಂಸಿ ಮೇರಿ ಕೋಮ್

ಟೋಕಿಯೋ: 6 ಬಾರಿಯ ವಿಶ್ವ ಚಾಂಪಿಯನ್​ ಮೇರಿ ಕೋಮ್​ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಶುಭಾರಂಭ ಮಾಡಿದ್ದಾರೆ. ಭಾನುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಡೊಮಿನಿಕನ್ ರಿಪಬ್ಲಿಕನ್​ನ ಮಿಗುಯೆಲಿನಾ ಹೆರ್ನಾಂಡೆಜ್ ಗಾರ್ಸಿಯಾ ವಿರುದ್ಧ ಗೆಲುವು ಸಾಧಿಸಿ ಫ್ರಿ ಕ್ವಾರ್ಟರ್​ ಪೈನಲ್ ಪ್ರವೇಶಿಸಿದ್ದಾರೆ.

ಬಾಕ್ಸಿಂಗ್ ದಂತಕಥೆ ಮೊದಲ ಪಂದ್ಯದ್ಲಲಿ ತಮಗಿಂತ 15 ವರ್ಷ ಚಿಕ್ಕ ವಯಸ್ಸಿನ ಬಾಕ್ಸರ್​ ಡಾರ್ಸಿಯಾ ವಿರುದ್ಧ ಪ್ರಾಬಲ್ಯ ಸಾಧಿಸಿ 4-1ರ ಅಂತರದಿಂದ ಗೆಲುವು ಸಾಧಿಸಿದರು.

51 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿದ್ದ ಮೇರಿ ಕೋಮ್ ಮೊದಲ ಸುತ್ತಿನಿಂದಲೇ ತಮ್ಮ ಅನುಭವದೊಂದಿಗೆ ದಾಳಿ ನಡೆಸಿ ಉಕ್ರೆನ್ ಬಾಕ್ಸರ್​ ಹಿಮ್ಮೆಟ್ಟಿಸಿದರು. ಐದು ತೀರ್ಪುಗಾರರಲ್ಲಿ ಮೂವರು ತೀರ್ಪುಗಾರರು ಭಾರತೀಯ ಬಾಕ್ಸರ್​ಗೆ ಬೆಂಬಲ ನೀಡಿ ಅಂಕ ನೀಡಿದರೆ, ಮತ್ತಿಬ್ಬರು ಹೆರ್ನಾಂಡೆಜ್ ಗಾರ್ಸಿಯಾ ಹೆಚ್ಚು ಅಂಕ ನೀಡಿದರು.

ಮೂರು ಮಕ್ಕಳ ತಾಯಿಯಾಗಿರುವ ಕೋಮ್​ ತಮ್ಮ ಮುಂದಿನ ಪಂದ್ಯದಲ್ಲಿ ವಿಶ್ವದ 3ನೇ ಶ್ರೇಯಾಂಕದ ಹಾಗೂ ರಿಯೋ ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದಿರುವ ಇಂಗ್ರಿಟ್​ ವೆಲೆನ್ಸಿಯಾ ವಿರುದ್ಧ ಕಾದಾಡಲಿದ್ದಾರೆ. ಮುಂದಿನ ಪಂದ್ಯ ಜುಲೈ 29 ಕ್ಕೆ ನಡೆಯಲಿದೆ.

Last Updated : Jul 25, 2021, 3:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.