ಟೋಕಿಯೋ(ಜಪಾನ್): ಭಾರತದ 23 ವರ್ಷದ ಜಾವಲಿನ್ ಥ್ರೋವರ್ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಭರವಸೆಯಾಗಿ ಗೋಚರಿಸುತ್ತಿದ್ದು, ಮೊದಲ ಪ್ರಯತ್ನದಲ್ಲಿಯೇ ಫೈನಲ್ಗೆ ಅರ್ಹತೆ ಪಡೆದರು.
ಗ್ರೂಪ್ 'ಎ'ನಲ್ಲಿ ಸ್ಪರ್ಧಿಸುತ್ತಿರುವ ಚೋಪ್ರಾ ಪುರುಷರ ಲಾಂಗ್ ಥ್ರೋನ್ ಕ್ವಾಲಿಫಿಕೇಷನ್ ವಿಭಾಗದಲ್ಲಿ ಫೈನಲ್ಗೆ ಅರ್ಹತೆ ಪಡೆದಿದ್ದಾರೆ. 15ನೇ ಪೊಸಿಷನ್ನಲ್ಲಿ ಲಾಂಗ್ ಥ್ರೋನ್ ಮಾಡಿದ ಅವರು ಸುಮಾರು 86.65 ಮೀಟರ್ ಜಾವೆಲಿನ್ ಥ್ರೋ ಮಾಡುವ ಮೂಲಕ ನೇರವಾಗಿ ಫೈನಲ್ಗೆ ಲಗ್ಗೆ ಇಟ್ಟರು.
ಈ ಹಿಂದೆ, ಫಿನ್‌ಲ್ಯಾಂಡ್‌ನ ಲಸ್ಸಿ ಎಟೆಲಾಟಾಲೋ ಇದೇ ರೀತಿ ಮೊದಲ ಪ್ರಯತ್ನದಲ್ಲಿಯೇ ಫೈನಲ್ಗೆ ಅರ್ಹತೆ ಪಡೆದಿದ್ದರು. ಜಾವೆಲಿನ್ ಥ್ರೋ ಫೈನಲ್ ಪಂದ್ಯ ಮೂರು ದಿನಗಳ ನಂತರ ಅಥವಾ ಆಗಸ್ಟ್ 7ರಂದು ನಡೆಯಲಿದೆ.
ಇದಕ್ಕೂ ಮೊದಲು ಮಂಗಳವಾರ ಭಾರತೀಯ ಮಹಿಳಾ ಜಾವೆಲಿನ್ ಥ್ರೋ ಸ್ಪರ್ಧಿ ಅನ್ನು ರಾಣಿ ಫೈನಲ್ಗೆ ಅರ್ಹತೆ ಪಡೆಯಲು ವಿಫಲರಾಗಿದ್ದರು. ಈಗ ನೀರಜ್ ಚೋಪ್ರಾ ಅರ್ಹತೆ ಪಡೆದಿದ್ದು, ಪದಕದ ಭರವಸೆ ಮೂಡಿಸಿದ್ದಾರೆ.
ಇದನ್ನೂ ಓದಿ: ENG vs IND Test Series: ಇಂದಿನಿಂದ ಮೊದಲ ಟೆಸ್ಟ್ ಪಂದ್ಯ ಆರಂಭ