ETV Bharat / sports

ಚಕ್ ದೇ! ಇಂಡಿಯಾ; ಸೆಮಿಫೈನಲ್​ ಸ್ಥಾನಕ್ಕಾಗಿ ಗ್ರೇಟ್​ ಬ್ರಿಟನ್​ ವಿರುದ್ಧ ನಾಳೆ ಭಾರತದ ಫೈಟ್​​​ - ಗ್ರೇಟ್​ ಬ್ರಿಟನ್​ ವರ್ಸಸ್​ ಭಾರತ

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಪುರುಷರ ಹಾಕಿ ತಂಡ ನಾಳೆ ಸೆಮಿಫೈನಲ್​ಗೋಸ್ಕರ ಹೋರಾಟ ನಡೆಸಲಿದ್ದು, ಗ್ರೇಟ್​ ಬ್ರಿಟನ್​ ವಿರುದ್ಧ ಫೈಟ್​ ನಡೆಸಲಿದೆ.

india vs england
india vs england
author img

By

Published : Jul 31, 2021, 8:48 PM IST

ಟೋಕಿಯೋ: ಒಲಿಂಪಿಕ್ಸ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಭಾರತದ ಪುರುಷರ ಹಾಕಿ ತಂಡ ಈಗಾಗಲೇ ಕ್ವಾರ್ಟರ್​​ ಫೈನಲ್​ಗೆ ಲಗ್ಗೆ ಹಾಕಿದೆ. ನಾಳೆ ಗ್ರೇಟ್​ ಬ್ರಿಟನ್​ ವಿರುದ್ಧ ಸೆಣಸಾಟ ನಡೆಸುವ ಮೂಲಕ ಸೆಮಿಫೈನಲ್​ಗೆ ಲಗ್ಗೆ ಹಾಕುವ ಇರಾದೆ ಇಟ್ಟುಕೊಂಡಿದೆ.

india vs england
ಸೆಮಿಫೈನಲ್​ ಸ್ಥಾನಕ್ಕಾಗಿ ಭಾರತದ ಹೋರಾಟ

ಲೀಗ್​ ಹಂತದ ಗ್ರೂಪ್ A​ ನಲ್ಲಿ ಭಾರತ ಆಡಿರುವ 5 ಪಂದ್ಯಗಳ ಪೈಕಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದ್ದು, ನ್ಯೂಜಿಲ್ಯಾಂಡ್​, ಸ್ಪೇನ್​, ಅರ್ಜೆಂಟೈನಾ ಹಾಗೂ ಜಪಾನ್​ ವಿರುದ್ಧ ಗೆಲುವು ದಾಖಲು ಮಾಡಿ ಎರಡನೇ ತಂಡವಾಗಿ ಕ್ವಾರ್ಟರ್​​ ಫೈನಲ್​ಗೆ ಲಗ್ಗೆ ಹಾಕಿದೆ. ಗ್ರೇಟ್​​ ಬ್ರಿಟನ್​ ಗ್ರೂಪ್​ B ಯಲ್ಲಿ ಮೂರನೇ ತಂಡವಾಗಿ ಕ್ವಾರ್ಟರ್​ಫೈನಲ್​ಗೆ ಲಗ್ಗೆ ಹಾಕಿದ್ದು, ಆಡಿರುವ 5 ಪಂದ್ಯಗಳ ಪೈಕಿ ಎರಡಲ್ಲಿ ಗೆಲುವು, ಎರಡು ಡ್ರಾ ಹಾಗೂ ಮತ್ತೊಂದು ಪಂದ್ಯದಲ್ಲಿ ಸೋಲು ಕಂಡಿದೆ.

india vs england
ಒಲಿಂಪಿಕ್ಸ್​ನಲ್ಲಿ ಭಾರತದ ಸಾಧನೆ

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಗ್ರೇಟ್​ ಬ್ರಿಟನ್​ಗೆ ಹೋಲಿಕೆ ಮಾಡಿದಾಗ ಭಾರತದ ಪ್ರದರ್ಶನ ಉತ್ತಮವಾಗಿದ್ದು, ಸತತವಾಗಿ ಮೂರು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡುವ ಮೂಲಕ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸಿಕೊಂಡಿದೆ.

india vs england
ಒಲಿಂಪಿಕ್ಸ್​​ನಲ್ಲಿ ಗ್ರೇಟ್​ ಬ್ರಿಟನ್​ ಸಾಧನೆ

ಇದನ್ನೂ ಓದಿರಿ: ಒಲಿಂಪಿಕ್ಸ್​ ಇತಿಹಾಸದಲ್ಲೇ ಮೊದಲ ಸಲ ನಾಕೌಟ್​​​ ಹಂತಕ್ಕೆ ತಲುಪಿದ ಭಾರತದ ಮಹಿಳಾ ಹಾಕಿ ತಂಡ

ನಾಳೆ ಸಂಜೆ 5:30ಕ್ಕೆ ಈ ಪಂದ್ಯ ನಡೆಯಲಿದ್ದು, 41 ವರ್ಷಗಳ ನಂತರ ಮೊದಲ ಬಾರಿಗೆ, ಸೆಮಿಫೈನಲ್‌ನಲ್ಲಿ ಸ್ಥಾನಕ್ಕಾಗಿ ಮನ್​ಪ್ರೀತ್​ ಸಿಂಗ್​ ಬಳಗ ಸೆಣಸಲಿದೆ. ಉಳಿದಂತೆ ಸೆಮಿಫೈನಲ್​​ನಲ್ಲಿ ಸ್ಥಾನ ಖಚಿತ ಮಾಡಿಕೊಳ್ಳಲು ಅರ್ಜೆಂಟೈನಾ-ಜರ್ಮನಿ, ಆಸ್ಟ್ರೇಲಿಯಾ-ನೆದರ್ಲ್ಯಾಂಡ್ಸ್​ ಹಾಗೂ ಬೆಲ್ಜಿಯಂ-ಸ್ಪೇನ್ ನಡುವೆ ಫೈಟ್​ ನಡೆಯಲಿದೆ. ಒಲಿಂಪಿಕ್ಸ್​​ನಲ್ಲಿ ಭಾರತ ಸತತವಾಗಿ 6 ಚಿನ್ನ ಗೆದ್ದಿರುವ ಇತಿಹಾಸ ಕೂಡ ಹೊಂದಿದೆ. ಹಾಕಿಯಲ್ಲಿ ಇಲ್ಲಿಯವರೆಗೆ 8 ಬಂಗಾರದ ಪದಕ ಗೆದ್ದಿರುವ ಭಾರತ 1980ರ ಮಾಸ್ಕೋ ಒಲಿಂಪಿಕ್ಸ್​ ಬಳಿಕ ಯಾವುದೇ ಪದಕ ಗೆದ್ದಿಲ್ಲ. ಆದರೆ ಇದೀಗ ಮತ್ತೊಂದು ಸುವರ್ಣವಕಾಶ ಒದಗಿ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.