ಟೋಕಿಯೋ(ಜಪಾನ್): ರವಿ ಕುಮಾರ್ ದಹಿಯಾ ನಂತರ ಮತ್ತೊಬ್ಬ ಕುಸ್ತಿಪಟು ದೀಪಕ್ ಪೂನಿಯಾ ಟೋಕಿಯೋ ಒಲಿಂಪಿಕ್ಸ್ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದು, ಈಗ ಇಬ್ಬರು ಕುಸ್ತಿಪಟುಗಳು ಭಾರತದ ಪಾಲಿಗೆ ಪದಕದ ಭರವಸೆ ಮೂಡಿಸಿದ್ದಾರೆ.
86 ಕೆಜಿ ಪುರುಷರ ಕುಸ್ತಿ ವಿಭಾಗದಲ್ಲಿ ಚೀನಾದ ಲಿನ್ ಜುಶೆನ್ ಅವರನ್ನು 6-3 ಅಂಕಗಳಿಂದ ಸೋಲಿಸಿದ ಪೂನಿಯಾ ಸೆಮಿಫೈನಲ್ಗೆ ಅರ್ಹತೆ ಪಡೆದಿದ್ದಾರೆ. ಇದಕ್ಕೂ ಮೊದಲು ನೈಜೀರಿಯಾದ ಎಕೆರೆಕೆಮೆ ಅಜಿಯೋಮೋರ್ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದಿದ್ದರು. ಎಕೆರೆಕೆಮೆ ಅಜಿಯೋಮೋರ್, ಆಫ್ರಿಕಾದ ಮಾಜಿ ಚಾಂಪಿಯನ್ ಆಗಿದ್ದಾರೆ.
ಸೆಮಿಫೈನಲ್ ಪಂದ್ಯ ಕೂಡಾ ಇಂದೇ ನಡೆಯಲಿದೆ. ಅಮೆರಿಕದ ಡೇವಿಡ್ ಟೇಲರ್ ಅವರನ್ನು ದೀಪಕ್ ಪೂನಿಯಾ ಎದುರಿಸಲಿದ್ದಾರೆ.
ಇದಕ್ಕೂ ಮೊದಲು ಎರಡು ಬಾರಿ ಏಷ್ಯನ್ ಚಾಂಪಿಯನ್ ಆಗಿದ್ದ ರವಿ ಕುಮಾರ್ ದಹಿಯಾ 57 ಕೆಜಿ ಪುರುಷರ ಕುಸ್ತಿ ವಿಭಾಗದಲ್ಲಿ ಬಲ್ಗೇರಿಯಾ ಸ್ಪರ್ಧಿಯನ್ನು ಸೋಲಿಸಿ ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿದ್ದರು.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ ಕುಸ್ತಿ: ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟ ರವಿ ದಹಿಯಾ