ETV Bharat / sports

Tokyo Paralympics: ಕ್ವಾರ್ಟರ್​ ಫೈನಲ್​​ನಿಂದ ಹೊರಬಿದ್ದ ಟೇಕ್ವಾಂಡೋ ಪಟು ಅರುಣಾ ತನ್ವಾರ್ - ಸ್ಪೋರ್ಟ್ಸ್​​ ಅಥಾರಿಟಿ ಆಫ್ ಇಂಡಿಯಾ ಮೀಡಿಯಾ

ಪ್ಯಾರಾಲಿಂಪಿಕ್ಸ್​ನ ಮಹಿಳೆಯರ K44-49 ಕೆ.ಜಿ ವಿಭಾಗದ ರೇಪ್ಚೇಜ್​ ಸುತ್ತಿನ ಕ್ವಾರ್ಟರ್​ ಫೈನಲ್​ನಲ್ಲಿ ಭಾರತದ ಟೇಕ್ವಾಂಡೋ ಆಟಗಾರ್ತಿ ಅರುಣಾ ತನ್ವಾರ್ ಗಾಯದ ಸಮಸ್ಯೆಯಿಂದಾಗಿ ಮಹತ್ವದ ಟೂರ್ನಿಯಿಂದ ಹೊರಬಿದ್ದಿದ್ದಾರೆ.

Tokyo Paralympics: Injured taekwondo athlete Aruna Tanwar pulls out of repechage quarter-final bout
Tokyo Paralympics: ಗಾಯದ ಸಮಸ್ಯೆಯಿಂದಾಗಿ ಕ್ವಾರ್ಟರ್​ ಫೈನಲ್​​ನಿಂದ ಹೊರಬಿದ್ದ ಟೇಕ್ವಾಂಡೋ ಪಟು ಅರುಣಾ ತನ್ವಾರ್
author img

By

Published : Sep 2, 2021, 4:08 PM IST

ಟೋಕಿಯೋ(ಜಪಾನ್): ಭಾರತದ ಟೇಕ್ವಾಂಡೋ ಆಟಗಾರ್ತಿ ಅರುಣಾ ತನ್ವಾರ್ ಟೋಕಿಯೋ ಪ್ಯಾರಾಲಿಂಪಿಕ್ಸ್​ನ ಮಹಿಳೆಯರ K44-49ಕೆ.ಜಿ ವಿಭಾಗದ ರೇಪ್ಚೇಜ್​ ಸುತ್ತಿನ ಕ್ವಾರ್ಟರ್​ ಫೈನಲ್​ನಲ್ಲಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ​​

ಅರುಣಾ ತನ್ವಾರ್ ಗಾಯದ ಸಮಸ್ಯೆಯಿಂದ ಹೊರಗೆ ಉಳಿದಿರುವುದಾಗಿ ಸ್ಪೋರ್ಟ್ಸ್​​ ಅಥಾರಿಟಿ ಆಫ್ ಇಂಡಿಯಾ ಮೀಡಿಯಾ (SAI Media) ಟ್ವೀಟ್ ಮಾಡಿ ದೃಢಪಡಿಸಿದೆ. ಜೊತೆಗೆ ಆಕೆ ಶೀಘ್ರವಾಗಿ ಚೇತರಿಸಿಕೊಳ್ಳಲಿ, ಮುಂದಿನ ಸ್ಪರ್ಧೆಗಳಿಗೆ ಶುಭವಾಗಲಿ ಎಂದು ಹಾರೈಸಿದೆ.

ಆಕೆ ಗಾಯಗೊಂಡಿರುವುದು ದೃಢಪಟ್ಟ ನಂತರ, ಆಕೆ ಪೂರ್ಣವಾಗಿ ಚೇತರಿಕೆ ಕಾಣುವವರೆಗೆ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ ಎಂದು ವೈದ್ಯಕೀಯ ಅಧಿಕಾರಿ ಸೂಚಿಸಿದ್ದಾರೆ. ಈಗ ಸದ್ಯಕ್ಕೆ ಅರುಣಾ ಅವರನ್ನು ಪಾಲಿಕ್ಲಿನಿಕ್​ಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.

ಅಝರ್​ಬೈಜನ್​ನ ರೊಯಲಾ ಫತಲಿಯೆವಾ ಅವರೊಂದಿಗೆ ಅರುಣಾ ತನ್ವಾರ್ ಸೆಣಸಬೇಕಿತ್ತು. ಈಗ ಗಾಯದ ಸಮಸ್ಯೆಯಿಂದ ಅರುಣಾ ಹೊರಗುಳಿದ ಕಾರಣದಿಂದ ರೊಯಲಾ ಫತಲಿಯೆವಾ ಅವರನ್ನು ಜಯಶಾಲಿ ಎಂದು ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Tokyo Paralympics ಟೇಕ್ವಾಂಡೋ: ಕ್ವಾರ್ಟರ್​ ಫೈನಲ್​ನಲ್ಲಿ ಸೋಲು ಕಂಡ ಅರುಣಾ ತನ್ವಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.