ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಜೊತೆಗೆ ದೇಶದ ಕೀರ್ತಿ ಪತಾಕೆ ಹಾರಿಸಿ, ತವರಿಗೆ ಆಗಮಿಸಿರುವ ಅಥ್ಲೀಟ್ಸ್ಗಳಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ಭರ್ಜರಿಯಾಗಿ ಬರಮಾಡಿಕೊಳ್ಳಲಾಯಿತು.
ಸ್ವರ್ಣ ಪದಕ ವಿಜೇತ ನೀರಜ್ ಚೋಪ್ರಾ, ಬೆಳ್ಳಿ ಪದಕ ವಿಜೇತ ರವಿ ದಹಿಯಾ, ಕಂಚಿನ ಪದಕ ಗೆದ್ದಿರುವ ಭಾರತದ ಪುರುಷರ ಹಾಕಿ ತಂಡ, ಬಾಕ್ಸರ್ ಲವ್ಲಿನಾ ಸೇರಿದಂತೆ ಅನೇಕರನ್ನ ಅಭಿಮಾನಿಗಳು ಹಾಗೂ ಕ್ರೀಡಾ ಪ್ರಾಧಿಕಾರ ಸ್ವಾಗತ ಮಾಡಿಕೊಂಡಿತು. ಇದೇ ವೇಳೆ, ಎಲ್ಲರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಇದಾದ ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ಎಲ್ಲರನ್ನೂ ಸನ್ಮಾನ ಮಾಡಲಾಯಿತು.
-
#WATCH | This gold medal is not only mine but also belongs to India. I didn't eat&sleep well after winning gold medal... Competition was very tough at #Olympics. After qualification, I realised this is the best opportunity of my life& I'll not lose it: Gold medalist Neeraj Chopra pic.twitter.com/NzQVFqvjLx
— ANI (@ANI) August 9, 2021 " class="align-text-top noRightClick twitterSection" data="
">#WATCH | This gold medal is not only mine but also belongs to India. I didn't eat&sleep well after winning gold medal... Competition was very tough at #Olympics. After qualification, I realised this is the best opportunity of my life& I'll not lose it: Gold medalist Neeraj Chopra pic.twitter.com/NzQVFqvjLx
— ANI (@ANI) August 9, 2021#WATCH | This gold medal is not only mine but also belongs to India. I didn't eat&sleep well after winning gold medal... Competition was very tough at #Olympics. After qualification, I realised this is the best opportunity of my life& I'll not lose it: Gold medalist Neeraj Chopra pic.twitter.com/NzQVFqvjLx
— ANI (@ANI) August 9, 2021
ಇದನ್ನೂ ಓದಿರಿ: ತವರಿಗೆ ಮರಳಿದ ಒಲಿಂಪಿಕ್ಸ್ ವಿಜೇತರು..ಅದ್ಧೂರಿಯಾಗಿ ಸ್ವಾಗತಿಸಿದ ತೇಜಸ್ವಿ ಸೂರ್ಯ
ಅಶೋಕ್ ಹೋಟೆಲ್ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಬಾಕ್ಸರ್ ಲವ್ಲಿನಾ, ತವರಿಗೆ ಮರಳಿರುವುದು ತುಂಬಾ ಸಂತೋಷವಾಗುತ್ತಿದೆ. ದೇಶಕ್ಕಾಗಿ ಪದಕ ಗೆಲ್ಲುವ ನನ್ನ ಕೆಲಸ ಮುಂದುವರೆಯಲಿದೆ. ಪ್ಯಾರೀಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲುವೆ ಎಂದಿದ್ದಾರೆ.
ಭಜರಂಗ್ ಪೂನಿಯಾ
-
Delhi: Union Sports Minister Anurag Thakur, MoS Sports Nisith Pramanik and Law Minister & former Sports Minister Kiren Rijiju felicitate #Bronze medalist wrestler Bajrang Punia.#Olympics pic.twitter.com/CzescBXPel
— ANI (@ANI) August 9, 2021 " class="align-text-top noRightClick twitterSection" data="
">Delhi: Union Sports Minister Anurag Thakur, MoS Sports Nisith Pramanik and Law Minister & former Sports Minister Kiren Rijiju felicitate #Bronze medalist wrestler Bajrang Punia.#Olympics pic.twitter.com/CzescBXPel
— ANI (@ANI) August 9, 2021Delhi: Union Sports Minister Anurag Thakur, MoS Sports Nisith Pramanik and Law Minister & former Sports Minister Kiren Rijiju felicitate #Bronze medalist wrestler Bajrang Punia.#Olympics pic.twitter.com/CzescBXPel
— ANI (@ANI) August 9, 2021
ಮೊಣಕಾಲಿನ ಗಾಯದ ಹೊರತಾಗಿ ಕೂಡ ಕಂಚಿನ ಪಂದ್ಯಕ್ಕಾಗಿ ಹೋರಾಟ ನಡೆಸಿದೆ. ಮೊಣಕಾಲಿನ ಗಾಯ ತೀವ್ರವಾಗಿದ್ದರೆ ವಿಶ್ರಾಂತಿ ಪಡೆದುಕೊಳ್ಳುವ ನಿರ್ಧಾರ ಮಾಡಿದ್ದೇನು. ಆದರೆ, ಈ ಪಂದ್ಯ ನನ್ನ ಜೀವನ ಬದಲಾಯಿಸಬಹುದು ಎಂದು ಭಾವಿಸಿ, ಮೈದಾನಕ್ಕಿಳಿದೆ. ಜೊತೆಗೆ ನನ್ನ ಕೈಲಾದ ಪ್ರಯತ್ನ ಮಾಡಿದೆ. ಅದರ ಫಲವಾಗಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾದೆ ಎಂದರು.
ಜಾವಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಮಾತನಾಡಿ, ತಾವು ಗೆದ್ದಿರುವ ಸ್ವರ್ಣ ಪದಕವನ್ನ ದೇಶಕ್ಕೆ ಅರ್ಪಣೆ ಮಾಡುತ್ತಿದ್ದೇನೆ ಎಂದರು. ಜೊತೆಗೆ ತಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು
-
I am feeling great to be back in India. My effort will be to continue to bring medals for the country. I will try to win the Gold medal for India at Paris Olympics: #TokyoOlympics Bronze medalist boxer Lovlina Borgohain in Delhi pic.twitter.com/dAUd1BVkLh
— ANI (@ANI) August 9, 2021 " class="align-text-top noRightClick twitterSection" data="
">I am feeling great to be back in India. My effort will be to continue to bring medals for the country. I will try to win the Gold medal for India at Paris Olympics: #TokyoOlympics Bronze medalist boxer Lovlina Borgohain in Delhi pic.twitter.com/dAUd1BVkLh
— ANI (@ANI) August 9, 2021I am feeling great to be back in India. My effort will be to continue to bring medals for the country. I will try to win the Gold medal for India at Paris Olympics: #TokyoOlympics Bronze medalist boxer Lovlina Borgohain in Delhi pic.twitter.com/dAUd1BVkLh
— ANI (@ANI) August 9, 2021
ಇದೇ ವೇಳೆ ಬೆಳ್ಳಿ ಪದಕ ವಿಜೇತ ರವಿ ದಹಿಯಾ, ಚಿನ್ನ ಗೆದ್ ನೀರಜ್ ಚೋಪ್ರಾ, ಬಾಕ್ಸರ್ ಲವ್ಲಿನಾ, ಪುರುಷರು ಹಾಗೂ ಮಹಿಳಾ ಹಾಕಿ ತಂಡ ಸೇರಿದಂತೆ ಅನೇಕ ಅಥ್ಲೀಟ್ಸ್ಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕಾನೂನು ಸಚಿವ ಕಿರಣ್ ರಿಜಿಜು, ಹಾಗೂ ರಾಜ್ಯ ಖಾತೆ ಸಚಿವ ನಿಶೀತ್ ಪ್ರಮಾಣಿಕ್ ಉಪಸ್ಥಿತರಿದ್ದರು.