ETV Bharat / sports

ಚಿನ್ನ ಗೆಲ್ಲದಿದ್ದಕ್ಕೆ ನಿರಾಸೆಯಾಗಿದೆ: ಆದರೂ ಒಲಿಂಪಿಕ್ ಕಂಚಿನ ಪದಕದ ಜೊತೆ ಸಂಭ್ರಮಿಸುತ್ತೇನೆ: ಲವ್ಲಿನಾ - ಟೋಕಿಯೋ ಒಲಿಂಪಿಕ್ಸ್​ 2020

23 ವರ್ಷದ ಬಾಕ್ಸರ್​ 69 ಕೆಜಿ ವಿಭಾಗದ ಸೆಮಿಫೈನಲ್​ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್​ ಟರ್ಕಿಯ ಬುಸೆನಾಜ್​ ಸುಮರ್ನೆಲಿ ವಿರುದ್ಧ 0-5 ಅಂತರದಿಂದ ಬುಧವಾರ ಸೋಲು ಕಂಡರು.

ಲವ್ಲಿನಾ ಬೋರ್ಗೊಹೈನ್
ಲವ್ಲಿನಾ ಬೋರ್ಗೊಹೈನ್
author img

By

Published : Aug 4, 2021, 4:54 PM IST

ಟೋಕಿಯೋ: ತನ್ನ ಒಲಿಂಪಿಕ್ಸ್ ಪದಾರ್ಪಣೆಯಲ್ಲೇ ಪದಕ ಗೆದ್ದಿರುವ ಭಾರತದ ಬಾಕ್ಸರ್​ ಲವ್ಲಿನಾ ಬೋರ್ಗೊಹೈನ್​ ದೇಶಕ್ಕೆ ಚಿನ್ನದ ಪದಕ ತಂದುಕೊಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಕಳೆದ 8 ವರ್ಷಗಳಿಂದ ತಾವೂ ಪಟ್ಟ ಪರಿಶ್ರಮ ಮತ್ತು ತ್ಯಾಗಕ್ಕೆ ಇದೀಗ ಪ್ರತಿಫಲ ದೊರೆತಿದೆ ಎಂದು ಹೇಳಿದ್ದಾರೆ.

23 ವರ್ಷದ ಬಾಕ್ಸರ್​ 69 ಕೆಜಿ ವಿಭಾಗದ ಸೆಮಿಫೈನಲ್​ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್​ ಟರ್ಕಿಯ ಬುಸೆನಾಜ್​ ಸುಮರ್ನೆಲಿ ವಿರುದ್ಧ 0-5 ಅಂತರದಿಂದ ಬುಧವಾರ ಸೋಲು ಕಂಡರು.

ಇದು ನನಗೆ ಉತ್ತಮ ಸಾಧನೆ ಎನಿಸುತ್ತಿಲ್ಲ. ನಾನು ಚಿನ್ನದ ಪದಕ ಗೆಲ್ಲಲು ಸಾಕಷ್ಟು ಕಠಿಣ ಪರಿಶ್ರಮವಹಿಸಿದ್ದೆ. ಆದರೆ, ಸೆಮಿಫೈನಲ್​ನಲ್ಲಿ ಸೋಲು ಕಂಡಿದ್ದು ಬೇಸರ ತಂದಿದೆ. ನಾನು ನನ್ನ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ವಿಫಲನಾದೆ. ಎದುರಾಳಿ ಕೂಡ ತುಂಬಾ ಬಲಿಷ್ಠರಾಗಿದ್ದರು. ಹಾಗಾಗಿ ನಾನು ಬ್ಯಾಕ್​ಫೂಟ್​ನಲ್ಲಿ ಆಡಿದರೆ ಪಂಚ್​ ಬೀಳಬಹುದೆಂದು ಆಲೋಚಿಸಿ ಆಕ್ರಮಣಕಾರಿಯಾಗಿ ಹೋದೆ ಆದರೆ, ಅದು ನಾನಂದುಕೊಂಡ ಹಾಗೆ ಕೆಲಸ ಮಾಡಲಿಲ್ಲ ಎಂದು ಪಂದ್ಯದ ನಂತರ ಲವ್ಲಿನಾ ಸೋಲಿಗೆ ಕಾರಣ ತಿಳಿಸಿದರು.

ಬೊರ್ಗೊಹೈನ್ ಅವರ ಕಂಚಿನ ಪದಕ ಐತಿಹಾಸಿಕ ಸಾಧನೆ. ಏಕೆಂದರೆ ಕಳೆದ 9 ವರ್ಷಗಳಲ್ಲಿ ಬಾಕ್ಸಿಂಗ್‌ನಲ್ಲಿ ದೇಶಕ್ಕೆ ಒಲಿದ ಮೊದಲ ಒಲಿಂಪಿಕ್ ಪದಕವಾಗಿದೆ. ವಿಜೇಂದರ್ ಸಿಂಗ್ (2008) ಮತ್ತು ಎಂ ಸಿ ಮೇರಿ ಕೋಮ್ (2012) ನಂತರ ಒಟ್ಟಾರೆಯಾಗಿ ಇದು ಭಾರತದ ಮೂರನೇ ಬಾಕ್ಸಿಂಗ್ ಪದಕವಾಗಿದೆ.

ನಾನು ಒಲಿಂಪಿಕ್ಸ್​ನಲ್ಲಿ ಯಾವಾಗಲೂ ಭಾಗವಹಿಸಬೇಕೆಂದು ಮತ್ತು ಪದಕ ಗೆಲ್ಲಬೇಕೆಂದು ಬಯಸಿದ್ದೆ. ಕೊನೆಗೂ ಪದಕ ಪಡೆದಿದ್ದೇನೆ, ಆದರೆ ನಾನಂದುಕೊಂಡ ಪದಕ ಇದಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

" ನಾನು ಈ ಪದಕಕ್ಕಾಗಿ ಎಂಟು ವರ್ಷಗಳ ಕಾಲ ಶ್ರಮಿಸಿದ್ದೇನೆ. ನಾನು ಮನೆಯಿಂದ ದೂರವಿದ್ದೇನೆ, ನಾನು ಬಯಸಿದ್ದನ್ನು ತಿನ್ನುವುದಿಲ್ಲ, ಆದರೆ ಇದನ್ನು ಯಾರೂ ಮಾಡಬೇಕೆಂದು ನಾನು ಬಯಸುವುದಿಲ್ಲ. ಆದರೆ, ನಾನು ಮಾಡುವ ಯಾವುದೇ ತಪ್ಪು ನನ್ನ ಆಟದ ಮೇಲೆ ಪರಿಣಾಮ ಬೀರಬಾರದೆಂದು ನಾನು ಯಾವಾಗಲೂ ಭಾವಿಸುತ್ತೇನೆ" ಎಂದು ಲವ್ಲಿನಾ ಹೇಳಿದ್ದಾರೆ.

ಇದನ್ನು ಓದಿ:ಫೈನಲ್​ ಪ್ರವೇಶಿಸಿ ಮತ್ತೊಂದು ಪದಕ ಖಚಿತಪಡಿಸಿದ ರವಿ ಕುಮಾರ್ ದಹಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.