ಟೋಕಿಯೋ: ಜಪಾನ್ನ ಟೋಕಿಯೋದಲ್ಲಿ ಬಹುನಿರೀಕ್ಷಿತ ಒಲಿಂಪಿಕ್ಸ್ ಕ್ರಿಡಾಕೂಟ ನಡೆಯುತ್ತಿದ್ದು, ನೂರಾರು ದೇಶದ ಸಾವಿರಾರು ಸ್ಪರ್ಧಿಗಳು ಈ ಕ್ರಿಡಾಹಬ್ಬದಲ್ಲಿ ಭಾಗಿಯಾಗಿದ್ದಾರೆ. ಕೆಲವರು ಉತ್ತಮ ಪ್ರದರ್ಶನ ನೀಡಿ ಪದಕ ಗೆಲ್ಲುತ್ತಿದ್ದರೆ, ಮತ್ತೆ ಕೆಲವರು ನಿರಾಸೆ ಅನುಭವಿಸುತ್ತಿದ್ದಾರೆ. ಇದರ ಮಧ್ಯೆ ಅಪರೂಪದ ಘಟನೆಯೊಂದು ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಅರ್ಜೆಂಟೀನಾದ ಫೆನ್ಸರ್(ಕತ್ತಿವರಸೆ) ಮಾರಿಸ್ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದು, ತಾವು ಆಡಿರುವ ಮೊದಲ ಪಂದ್ಯದಲ್ಲೇ ಸೋಲು ಕಂಡಿದ್ದಾರೆ. ಸೋಲಿನಿಂದ ನಿರಾಸೆಗೊಳಗಾಗಿದ್ದ ಅವರಿಗೆ ಕೋಚ್ ಲವ್ ಪ್ರಪೋಸ್ ಮಾಡುವ ಮೂಲಕ ಹೃದಯ ಗೆದ್ದಿದ್ದಾರೆ.
-
Y después del combate de esgrima le pidieron casamiento a María Belén Pérez Maurice en vivo. pic.twitter.com/wEmGuOW7CB
— Rústico (@lautarojl) July 26, 2021 " class="align-text-top noRightClick twitterSection" data="
">Y después del combate de esgrima le pidieron casamiento a María Belén Pérez Maurice en vivo. pic.twitter.com/wEmGuOW7CB
— Rústico (@lautarojl) July 26, 2021Y después del combate de esgrima le pidieron casamiento a María Belén Pérez Maurice en vivo. pic.twitter.com/wEmGuOW7CB
— Rústico (@lautarojl) July 26, 2021
ಅರ್ಜೆಂಟೀನಾದ ಫೆನ್ಸರ್ ಮಾರಿಯಾ ಬೆಲೆನ್ ಪೆರೆಜ್ ಮಾರಿಸ್ಗೆ ಕೋಚ್ ಆಗಿರುವ ಲ್ಯೂಕಾಸ್ ಸೌಸೆಡೊ ಲವ್ ಪ್ರಪೋಸ್ ಮಾಡಿದ್ದು, ಅದನ್ನ ಆಟಗಾರ್ತಿ ಒಪ್ಪಿಕೊಂಡಿದ್ದಾರೆ. ಕಳೆದ 17 ವರ್ಷಗಳಿಂದ ಲ್ಯೂಕಾಸ್ ಸೌಸೆಡೊ ಕೋಚ್ ಆಗಿ ತರಬೇತಿ ನೀಡುತ್ತಿದ್ದು, ಬರುವ ದಿನಗಳಲ್ಲಿ ಇಬ್ಬರು ಮದುವೆ ಮಾಡಿಕೊಳ್ಳಲಿದ್ದಾರೆ.
ಇದನ್ನು ಓದಿ:ಟೋಕಿಯೋ ಒಲಿಂಪಿಕ್ಸ್ ಜುಲೈ 28ರ ವೇಳಾಪಟ್ಟಿ: ಈ ಎಲ್ಲ ಸ್ಪರ್ಧೆಗಳಲ್ಲಿ ನಮ್ಮ ಅಥ್ಲೀಟ್ಸ್ ಸ್ಪರ್ಧೆ