ಲಂಡನ್: ವಿಂಬಲ್ಡನ್ 2021ರ ಎರಡನೇ ಸುತ್ತಿನಲ್ಲಿ ಬ್ರಿಟನ್ ಟೆನಿಸ್ ಆಟಗಾರ ಆ್ಯಂಡಿ ಮರ್ರೆ ಗೆಲುವು ಸಾಧಿಸಿದ್ದಾರೆ. ಜರ್ಮನಿ ಆಟಗಾರ ಆಸ್ಕರ್ ಓಟ್ಟೆ ಅವರನ್ನು 6-3, 4-6, 4-6, 6-4, 6-2 ಸೆಟ್‌ಗಳಿಂದ ಸೋಲಿಸಿ ಸೆಂಟರ್ ಕೋರ್ಟ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಮೂರನೇ ಸುತ್ತಿನಲ್ಲಿ ಮುರ್ರೆ, ಡೆನಿಸ್ ಶಪವಾಲೋವ್ ವಿರುದ್ಧ ಸೆಣಸಾಡಲಿದ್ದಾರೆ. ಮರ್ರೆ ಮೊದಲ ಸೆಟ್‌ನಲ್ಲಿ ತನ್ನ ಎದುರಾಳಿ ಓಟ್ಟೆ ವಿರುದ್ಧ ಲಘುವಾಗಿ ಆಟವಾಡಿದರು. ಆದರೆ, ಎರಡನೇ ಸೆಟ್ನಿಂದ ಉತ್ತಮ ಪ್ರದರ್ಶನ ನೀಡಿದ ಆಕೆ ಓಟ್ಟೆಯನ್ನು ಮಣಿಸಿದ್ದಾರೆ.
ಮುರ್ರೆಗೆ ಓಟ್ಟೆ ತೀವ್ರ ಪೈಪೋಟಿ ನೀಡಿದರೂ ಸಹ ಅಂತಿಮವಾಗಿ ಮಂಡಿಯೂರಬೇಕಾಯಿತು. 6-2 ಸೆಟ್‌ಗಳಿಂದ ಆ್ಯಂಡಿ ಮುರ್ರೆ ಗೆಲುವು ಸಾಧಿಸಿ ವಿಂಬಲ್ಡನ್ 2021ರ ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.