ಮೆಲ್ಬೋರ್ನ್: ಫೆಬ್ರುವರಿ 8ರಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ಗೆ ದಿಗ್ಗಜರಾದ ಸೆರೆನಾ ವಿಲಿಯಮ್ಸ್, ರಾಫೆಲ್ ನಡಾಲ್, ನೋವಾಕ್ ಜೋಕೋವಿಕ್ ಸೇರಿದಂತೆ ಟೆನಿಸ್ ತಾರೆಯರು ಸಿದ್ಧತೆ ಆರಂಭಿಸಿದ್ದಾರೆ. ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ಆಟಗಾರರಿಗೆ ಮಾತ್ರ ಅಭ್ಯಾಸಕ್ಕೆ ಕಳುಹಿಸಿಕೊಡಲಾಗಿದೆ.
24ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆಲುವಿನ ಮೇಲೆ ಕಣ್ಣಿಟ್ಟಿರುವ ಸೆರೆನಾ ವಿಲಿಯಮ್ಸ್, ಈ ಮೂಲಕ ಮಾರ್ಗರೇಟ್ ಕೋರ್ಟ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಸಮಕ್ಕೆ ಬರಲು ಸಜ್ಜಾಗಿದ್ದಾರೆ. 2017ರಲ್ಲಿ ಸೆರೆನಾ ತನ್ನ ಸಹೋದರಿ ವೀನಸ್ ವಿಲಿಯಮ್ಸ್ ವಿರುದ್ಧ ಗೆಲ್ಲುವ ಮೂಲಕ ದಾಖಲೆಯ 23ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ಫೆ.1ರಂದು ಮೆಲ್ಬೋರ್ನ್ ಪಾರ್ಕ್ನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾದ ಡೇರಿಯಾ ಗವ್ರಿಲೋವಾ ವಿರುದ್ಧ 6-1, 6-4 ಸೆಟ್‌ಗಳಿಂದ ಸೆರೆನಾ ಗೆಲುವು ಸಾಧಿಸಿದರು. ಆಸ್ಟ್ರೇಲಿಯನ್ ಓಪನ್ಗೂ ಮುನ್ನ ನಡೆಯುವ ಅತಿದೊಡ್ಡ ಪುರುಷರ ಎಟಿಪಿ ಕಪ್ ಟೂರ್ನಿ ಇಂದಿನಿಂದ ಆರಂಭವಾಗಿದ್ದು, ರಾಫೆಲ್ ನಡಾಲ್ ಅವರು ತರಬೇತಿ ಸಿದ್ಧತೆ ಪ್ರಾರಂಭಿಸಿದರು.
ಆದರೆ, ತರಬೇತಿ ಸಮಯದಲ್ಲಿ ಅವರು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ಘೋಷಿಸಿರುವ ಕಾರಣ, ಮುಂಬರುವ ಆಸ್ಟ್ರೇಲಿಯನ್ ಓಪನ್‌ಗೆ ತಪ್ಪಿಸಿಕೊಳ್ಳಬಹುದೆಂಬ ಅನುಮಾನವನ್ನು ನಡಾಲ್ ಹುಟ್ಟುಹಾಕಿದ್ದಾರೆ. ಈ ಕುರಿತು ವಿಶ್ವದ ನಂ.2 ಆಟಗಾರ ಅಲೆಕ್ಸ್ ಡಿ ಮಿನೌರ್ ಅವರು ಈ ಕುರಿತು ಟ್ವಿಟರ್ನಲ್ಲಿ ಹೇಳಿದ್ದಾರೆ.
ಎರಡು ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಅಜರೆಂಕಾ ಸೋಮವಾರ ನಡೆದ 2021ರ ಆಸ್ಟ್ರೇಲಿಯನ್ ಓಪನ್‌ಗೆ ಮುನ್ನ ತನ್ನ ಸಿದ್ಧತೆಗಳನ್ನು ಮುಂದುವರೆಸಿದರು. ಅಜರೆಂಕಾ ಅವರು ಕಳೆದ ವರ್ಷ ಸೆಪ್ಟೆಂಬರ್ 20 ರಂದು ನಡೆದ ಯುಎಸ್ ಓಪನ್ ಫೈನಲ್ನಲ್ಲಿ ಜಪಾನಿನ ನವೋಮಿ ಒಸಾಕಾ ವಿರುದ್ಧ 1–6, 6–3, 6–3 ಸೆಟ್‌ಗಳಿಂದ ಸೋತಿದ್ದರು.
ಬೆಲರೂಸಿಯನ್ನ 31 ವರ್ಷದ ಅವರು 2012 ಮತ್ತು 2013 ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ವರ್ಷವೂ ಅವರು ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ. 2019ರ ಫ್ರೆಂಚ್ ಓಪನ್ ಚಾಂಪಿಯನ್ ಆಶ್ಲೇ ಬಾರ್ಟಿ ತರಬೇತಿ ಆರಂಭಿಸಿದರು. 2020ರಲ್ಲಿ ಎಂಟು ಡಬ್ಲ್ಯುಟಿಎ ಪ್ರಶಸ್ತಿಗಳನ್ನು ಗೆದ್ದ ವಿಶ್ವ ನಂ.1 ಆಟಗಾರ್ತಿ, ಆಸ್ಟ್ರೇಲಿಯಾ ಓಪನ್ ಸಿಂಗಲ್ಸ್‌ನಲ್ಲಿ ಕೆನಿನ್ ಸೋಫಿಯಾ ಅವರು ವಿರುದ್ಧ ಆಸ್ಟ್ರೇಲಿಯನ್ ಓಪನ್ನಲ್ಲಿ ಸೆಮಿಫೈನಲ್‌ನಲ್ಲಿ ಸೋಲಿಸಿದ್ದರು.