ಪ್ಯಾರಿಸ್: ಮೊದಲ ಸುತ್ತು ಗೆದ್ದ ನಂತರ ಮಾಧ್ಯಮಗಳ ಜೊತೆ ಮಾತನಾಡುವುದಕ್ಕೆ ನಿರಾಕರಿಸಿದ್ದ ಜಪಾನ್ನ ನವೋಮಿ ಒಸಾಕಗೆ ಆಯೋಜಕರು 15,000 ಯುಎಸ್ಡಿ(10,87,102 ರೂ) ದಂಡ ವಿಧಿಸಿದ್ದರು. ಆದರೆ ಸೋಮವಾರ ಒಸಾಕ ಟೂರ್ನಿಯಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ.
ಫ್ರೆಂಚ್ ಓಪನ್ ಮೊದಲ ಸುತ್ತಿನ ಪಂದ್ಯದಲ್ಲಿ ನವೋಮಿ ಒಸಾಕ ಪ್ರಯಾಸದ ಗೆಲುವು ದಾಖಲಿಸಿದ್ದರು. ಈ ವೇಳೆ ಸುದ್ದಿ ಗೋಷ್ಠಿಯನ್ನು ಬಹಿಷ್ಕರಿಸಿದ್ದರು. ಇದರಿಂದ ಆಯೋಜಕರು ಅಸಮಾಧಾನ ವ್ಯಕ್ತಪಡಿಸಿ 15 ಸಾವಿರ ಡಾಲರ್ ದಂಡ ವಿಧಿಸಿದ್ದರು. ಅಲ್ಲದೆ ಟೂರ್ನಿಯಿಂದ ಹೊರಹಾಕುವ ಎಚ್ಚರಿಕೆ ನೀಡಿದ್ದರು.
ಆದರೆ ಆಯೋಜಕರು ಈ ಎಚ್ಚರಿಕೆ ನೀಡುತ್ತಿದ್ದಂತೆ ಒಸಾಕ ತಾವಾಗಿಯೇ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಆದರೆ ಟೂರ್ನಿಗೆ ಮುನ್ನವೇ ತಮ್ಮ ಮಾನಸಿಕ ಸ್ವಾಸ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಮಾಧ್ಯಮ ಗೋಷ್ಠಿಗೆ ಭಾಗವಹಿಸುವುದಿಲ್ಲ ಎಂದು ಹೇಳಿದ್ದರಂತೆ, ಆದ್ರೆ ಆಯೋಜನಕರು ಇದಕ್ಕೆ ಉತ್ತರ ನೀಡಿರಲಿಲ್ಲ. ಇದೀಗ ತಾವಾಗಿಯೇ ಟೂರ್ನಿಯಿಂದ ಹಿಂದೆ ಸರಿದ್ದಾರೆ.
ಇದನ್ನು ಓದಿ:ಫ್ರೆಂಚ್ ಓಫನ್: 487 ದಿನಗಳ ಬಳಿಕ ಗ್ರ್ಯಾಂಡ್ಸ್ಲಾಮ್ನಲ್ಲಿ ಮೊದಲ ಜಯ ಸಾಧಿಸಿದ ಫೆಡರರ್